ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಲಾವಣಿ ಧಾಟಿ) ಇಲ್ಲೆನುತಾ ಉದರ ಝಣತಾ ಅಕ್ಕಪ್ಪ ವಕ್ಕಪ್ಪ ಪ ಇಕ್ಕಲ್ಯಾಂಗ ಸ್ವಾಮಿ ನಿನಗೆ ಮಕ್ಕಳ ಮನೆ ಇದು ಚಕ್ಕಲಿ ಸಜ್ಜಿಗೆ ಗಂಜಿ ಮುತ್ಸೋರಿ ಪಾಯಸಾ ದಕ್ಕದೀರೆ ತರಲ್ಹ್ಯಾಂಗ ಮುಕ್ಕೋ ಬೇಕು ಇದ್ಧಾಂಗ ಪರಿ ಭಕುತಿ ಇಕ್ಕುವೆ ಸಮರ್ಪಣ ಮಾಡಿ 1 ಭವವೆಂಬ ಕಿಚ್ಚನ್ಹಾರೆ ಸವಿತ ಭಕ್ತಿ ಭಾಂಡವಿಕ್ಕಿ ಪವನಸೂನು ಹನುಮಮಧ್ವಧ್ಯಾನದಿ ಜವದಿ ಎನ್ನ ಮನವ ಕುದಿಸಿ ಸವಿಯ ಖಾದ್ಯ ಮಾಡಿಯದನು ಭವದೂರ ಮಂತ್ರವ ಜಪಿಸಿ ಸವಿಯಬೇಕು ಸಂತತ ಮುದದಿ 2 ಎಲ್ಲರಂತೆ ಅಲ್ಲ ನೀನು ಇಲ್ಲದ್ದನ್ನು ಬೇಡ್ವೋನಲ್ಲ ಸಲ್ಲಿಸಿಹನ್ನುವೀನೊಲ್ಲೆ ನಂಬುವಲ್ಲಾ[?] ಬಲ್ಲಿದ ನರಸಿಂಹವಿಠಲ ಒಲ್ಲೆಂಬುದೀಗುಚಿತವೇ ಸಲ್ಲಿಸಿದ್ದು ಒಪ್ಪಿಕೊಂಡು ನಿಲ್ಲಿಸೆನ್ನ ಮನದಿಯಂಘ್ರಿ 3
--------------
ನರಸಿಂಹವಿಠಲರು
ಧೀರನೋ ಚೋರನೋ ಹೇರನೋ ದಾರಿರುವಿ ದೂರ ನಿಲ್ಲೋ ಪ ಚಾರು ಮರಕಟ ರೂಪವ ತೋರಿ ಮಾಯ ದನುಜಾರಿ ಚಾರಕನೆಂದು ಸಾರುತಿರುವೀ ಬಾರಿ ಬಾರಿಗೆ ಶ್ರೀರಾಮ ಆರೈಸಿಸುವಿ ಎಂದೂ ತೋರದಿರು ದಿಟವೆನಗೆ1 ರಕ್ಕಸರ ಮಾಯೆಯನು ಲೆಕ್ಕಿಸುವವಳಲ್ಲ ನಾ ಅಕ್ಕರವ ತೋರದಿರಲು ಮಿಕ್ಕ ಮಾತುಗಳೇಕೆ ಇಕ್ಕುವೆನು ಶಾಪವನೆನೆ ತÀಕ್ಷಣದಿ ಮುದ್ರಿಕೆಯನಿತ್ತಾ 2 ಶ್ರೀರಾಮ ಮುದ್ರಿಕೆಯ ನೋಡಿ ಪರಮ ನೀ ಭಕ್ತನಹುದು ಪಿರಿದಾಗಿ ನಿನ್ನ ಕೀರ್ತಿ ನರಸಿಂಹ ವಿಠಲನು ಭರದಿಂದ ಮಾಳ್ಪನು ಕರವಿಡುವ ಶಿರದೀ 3
--------------
ನರಸಿಂಹವಿಠಲರು