ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊಸರ್ಬೇಕ್ ಮೊಸರು ಧೇಂಡಿಯ ಮೊಸರು ಪ ಕರಣೆಯೆಂದ್ಹೆಸರು ಕೇಳ್ಬೇಡಿ ಕೊಸರು ಅ.ಪ ಗೋಕುಲದಲಿ ಶ್ರೀಕೃಷ್ಣನು ತಾನೆ ಆಕಳಮಂದೆಯ ಹೊಂದಿರುತಾನೆ ಆ ಕರುಣಾನಿಧಿ ಕಳಿಸಿರುತಾನೆ ಬೇಕಾದರೆ ಬನ್ನಿ ನಾ ಇಕ್ಕುತ್ತೇನೆ 1 ಎಳಗಂದಿಯಲ್ಲವು ತಿಳಿಗಟ್ಟುವುದಿಲ್ಲ ಕೊಳೆಯಿಲ್ಲವು ಈ ಬಿಳಿಮೊಸರಿನಲಿ ತಿಳಿಯ ವೈರಾಗ್ಯ ಭಕ್ತಿಗಳುಳ್ಳ ಜನಕೆ ಗೆಳೆಯ ಶ್ರೀ ಕೃಷ್ಣನು ಕಳಸಿದನಮ್ಮ 2 ಬಿಂದು ಮಾತ್ರದಿ ನಿಜಾನಂದವ ಕೊಡುವುದು ಬಿಂದಿಗೆ ತಂಬಿಗೆ ತರಬೇಡಿರಮ್ಮ ಮಂದ ಜನರು ತಾವರಿಯರು ಇದನು ತಂದೆ ಪ್ರಸನ್ನನ ಪರಮ ಪ್ರಸಾದವ 3
--------------
ವಿದ್ಯಾಪ್ರಸನ್ನತೀರ್ಥರು