ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆಯೊಡನೆ ನಿಲಯಕೆ ಬಂದಾ ಪ ಬೃಂದಾವನಾಂಚನನು ಶರ ದಿಂದುವದನ ಮುನಿವೃಂದ ನುತಚರಿತ ಅ.ಪ ಗಜ ತುರಗ ಪತಾಕ ತು ತ್ತೂರಿ ವರ ಛತ್ರಿ ಚಾಮರ ತಾಳ ಮೇಳ ಬಿರುದಾವಳಿ ಸಹಿತದಿ ಪೌರಬೀದಿಯಲಿ ಮೆರೆಯುತ ಶೌರಿಯು 1 ಪಾರಿಜಾತ ಸುಜಾತ ಮಲ್ಲಿಕಾ ಚಾರು ಮಾಲತೀಹಾರ ತುಳಸೀ ಹಾರವನರ್ಪಿಸಿ ನೀರಜನಾಭನಿಗೆ ನಾರಿಜನರು ಆರತಿಯನು ಬೆಳಗಿರೆ 2 ವೇದಘೋಷ ಜಯಘೋಷ ಜನರ ಸಂ ತೋಷ ಧ್ವನಿಯು ತುಂಬಿತು ಗಗನ ಯಾದವ ವಂಶ ಪ್ರಸನ್ನನು ಎಮ್ಮವ ನಾದನಿಂದು ಹಿರಿದಾಯಿತು ಜನುಮವು 3
--------------
ವಿದ್ಯಾಪ್ರಸನ್ನತೀರ್ಥರು