ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಯ್ಯಾ ನೀ ಎನ್ನ ರನ್ನಾ | ದಯದಲಿ ಸಂಪನ್ನಾ ಪ ಮಂದರಧರ ದಶಕಂದರ ಹರಿ ಅತಿ- | ಸುಂದರ ಸದ್ಗುಣ ಮಂದಿರ ಈಶಾ | ಕುಂದರದನ ಕಂಬುಕಂದರ ಐದೊಂದು | ಕಂದರ ಪಿತ ಸಖ ಇಂದಿರೆಯರಸಾ 1 ತುಂಗ ವಿಕ್ರಮ ದನುಜಾಂತ ಮದಗಜಕ | ಹರಣ ರಂಗ ನಿಸ್ಸೀಮಾ | ಇಂಗಿತಜನ ಭವಭಂಗ ಕಮಲದಳ | ಕಂಗಳಲೊಪ್ಪುವ ಮಂಗಳ ಮಹಿಮಾ 2 ಅಂಬುಜ ಭವನುತ ಅಂಬುಧಿಜಾನನ | ಅಂಬುಜ ಸುಚಕೋರಾಂಬುಜ ಚರಣ | ಅಂಬುಧಿವಾಸ ವಿಶ್ವಂಭರ ಮಹಿಪತಿ- | ನಂಬಿದ್ದವರಿಗಿಂಬಾಗಿಹೆ ಕೃಷ್ಣಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಂದು ನಿಲ್ಲೋ | ಕಣ್ಣ ಮುಂದೆ ಪ ಬಂದು ನಿಲ್ಲೋ ನಿನ್ನ ಪಾದಕ್ಕೆ ವಂದಿಪೆ ಇಂದಿರೆಯರಸಾ ಗೋವಿಂದ ಮುಕುಂದಾ ನೀ ಅ.ಪ. ಅರಳಿದ ಕೆಂದಾ | ವರೆಯ ಧಿಕ್ಕರಿಸುವ ಚರಣಾರವಿಂದವ | ನಿರುತ ತೋರು ನೀನು 1 ಭ್ರಮರ ಕುಂಡಲ ಮಂಡಿತ || ಮೇಲಾದ ರಾಕೇಂದು | ಮುಖವ ತೋರಿಸುತಲೀ2 ಪದುಮನೇತ್ರನೆ ನಿನ್ನ | ಸದನವೆನುತಯೆನ್ನ || ಹೃದಯದೊಳಗೆ ನಿಂತು ನಾ | ಮುದದಿ ಭಜಿಸುವಂತೇ 3 ಕರಿಯ ಮೊರೆಯ ಕೇಳಿ | ಕರುಣದಿಂ ಬಂದಂತೆ || ಕರೆದಾಗ ನಿನ್ನ ದಿವ್ಯ | ಚರಣಾವ ತೋರಿಸುತಾ4 ಅಜಭವಾದಿಗಳಿಗೆ | ನಿಜಪದವನಿತ್ತಂತೆ || ಭಜಿಪ ಭಕ್ತರಿಗೊಲಿವ | ವಿಜಯವಿಠ್ಠಲರೇಯಾ5
--------------
ವಿಜಯದಾಸ