ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಯದೂರ ಧರ್ಮಸಾರ ಭುವನಾಧಾರ ಪ. ಭಕ್ತಾರ್ತಿಭಂಜನ ಭವಪಾಶಮೋಚನ ದಮನ ನಿಕೇತನ ಸಾರಿ ಮೈದೋರು ಬಾ ಶ್ರೀರಮಾಮನೋಹರ 1 ಸಂದಿಗ್ಧ ಸಮಯಂಗಳ್ ಬಂದಿರ್ಪವೇಳೆಯೊಳ್ ನೊಂದಿರ್ಪ ಭಜಕರೊಳ್ ಇಂದೇಕೆ ಸಂದೆಗಂ ಪೇಳ್ ಇಂದಿರಾಮನೋಹರ ನಂದನಕುಮಾರ 2 ಶ್ರೀನಾಥ ನಿನ್ನಂಘ್ರಿಯೊಳ್ ಅನ್ಯೂನ ಭಕ್ತಿಯಿರಲ್ ಮಾನಾಭಿಮಾನಂಗಳೇನೊಂದನೆಣಿಸದೆ ಜ್ಞಾನೋದಯಂ ತಾನಾಗೆ ಚಿದಾನಂದಮಪ್ಪುದೈ 3
--------------
ನಂಜನಗೂಡು ತಿರುಮಲಾಂಬಾ
ವಂದಿಸುವೆ ನಂದಪುತ್ರ ಇಂದಿರಾಮನೋಹರ ಇಂದಿರಾ ಮನೋಹರ ಪೂರ್ಣೇಂದು ಕೋಟಿ ಸುಂದರ ಪ ನೀಲವಾರಿವಾಹಗಾತ್ರ ಲೋಲಚೇಲ ಭಾಸುರ ಲೋಲ ಚೇಲಭಾಸುರ ವಿಲೋಲ ನೀಲಕುಂತಲ 1 ದೇವ ದೇವಾಧೀಶ ಶೂರ ದೇವಕೀ ಪ್ರಿಯಂಕರ ದೇವಕೀ ಪ್ರಿಯಂಕರ ವಿಭಾವನೈಕ ಗೋಚರ 2 ಧೇನುಪುರ ವರವಿಹಾರಿ ಸೂನಭಾಣ ಜನಕನೆ ಸೂನ ಭಾಣ ಜನಕನೆ ವಿನೋದ ವೇಂಕಟೇಶನೆ 3
--------------
ಬೇಟೆರಾಯ ದೀಕ್ಷಿತರು