ಒಟ್ಟು 10 ಕಡೆಗಳಲ್ಲಿ , 5 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾನಂದ ಉದಧಿವರ್ಧನನೆಂದು ಪ ಕಂದರ್ಪಕೋಟಿ ಲಾವಣ್ಯನಿಧಿ ಮನಪೊಂದು ಅ.ಪ ನಾನು ನನ್ನದು ಎಂಬ ಜ್ಞಾನ ಸಂತತಿಯಿಂದ ನಾನಾ ಯಾತನೆ ಭಾವ ಬಲೆಯ ಕಟ್ಟಿ ಹೀನಗೋಜಿಲಿ ಸಿಕ್ಕಿ ಬಲುನೊಂದೆ ಗೋವಿಂದ ನೀನು ನಿನ್ನದು ಎಂಬ ಅಮೃತಗಾನದಿ ನಿಲಿಸು 1 ದರ್ವಿಯಂದದಿ ನಾನು ನೀ ಸರ್ವ ಸ್ವಾತಂತ್ರ ನಿರ್ವಾಹ ನಿನ್ನಿಂದ ಸರ್ವ ಜಗಕೆ ದೂರ್ವ ಏರಿಸೆ ಸಕಲ ದುರಿತವಳಿಸಿ ಮುಕ್ತಿಸುಖ ತೋರ್ವಂಥ ಗುಣನಿಧಿ ಸರ್ವಾತ್ಮ ಹೊರೆ ಹೊರೆಯೊ 2 ನಿನ್ನ ದರುಶನ ಬಿಟ್ಟು ಅನ್ಯತ್ರ ನಿರ್ಭೀತಿ ಎನ್ನಲಿ ಎಂದೆಂದು ವೇದವೇದ್ಯ ನಿನ್ನ ದರುಶನ ಫಲಕೆ ನಿನ್ನ ಮಹಕರುಣ ಇನ್ನು ಕಾರಣದೇವ ಧನ್ಯರಲಿ ಇಡು ಎನ್ನ 3 ಮನೋವಿಕಾರಗಳೆಂಬ ದುಃಖಾರ್ಣದಿ ಬಿದ್ದು ಅನುಮಾನ ಮಾಡಿದೆನೊ ನಿನ್ನ ಅಮೃತ ತನುಧ್ಯಾನ ಮನಕಿಡಿಯದೇನುಗತಿ ಯದುವರ್ಯ ತೃಣಕೆ ಕೈವಲ್ಲೀವ ತ್ರ್ಯಧೀಶಮನಪೊಂದು 4 ಜ್ಞಾನಮನ ಬಿಡದಿರು ದೀನ ಬಾಂಧವ ಕೃಷ್ಣ ಇನ್ನು ಮಾಯವನು ತೆಗೆದೆನ್ನ ಬೆರೆಯೊ ಜ್ಞಾನನಿಧಿ ಜಯೇಶವಿಠಲನೆ ವಿಧಿವಂದ್ಯ ಪ್ರಾಣಾಧಾರಕ ಶುಕನ ಆನಂದನಿಧಿ ಪಾಹಿ 5
--------------
ಜಯೇಶವಿಠಲ
ನಂದನ ಕಂದ ಬಂದ ಗೋವಿಂದ ಇಂದಿರಾನಂದ ರಾಧೆ ಮುಕುಂದ ಪ ವೃಂದಿತ ಬೃಂದಾರಕ ಖಗವೃಂದ ಸುಂದರ ಮುರಳೀ ನಾದಾನಂದ ಅ.ಪ ಘಣಿಮಣಿ ಭೂಷಣ ಮುನಿತೋಷಣ ಗಣಿಕಾಗಣ ಮನಮೋಹನ ತರುಣ ಝಣ ಝಂಝಣರವ ಕಿಣಿಕಿಣಿಚರಣ ಕುಣಿ ಕುಣಿವನು ಮಾಂಗಿರಿರಂಗ ಕರುಣ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರುಣಾ ತೋರದದೇನೊ ನರಹರಿಯೆ ನಿನ್ನ ಕರುಣೆ ತೋರದೆ ಇರುವ ಪರಿಯೆನ್ಹರಿಯೇ ನಿನ್ನಯ ಕಮಲ ಸ್ಮರಣೆಯ ಇಹಪರಕೆ ಗತಿಯಂ ದಿರುವ ಮನಜರಿಗ್ಹರುಷದಿಂದಲಿ ಪ ಸುಸಾಮಗಾನಪ್ರಿಯ ನರಸಿಂಗ ದೈತ್ಯಾರಿ ಭಕ್ತಾಧೀನ ಗರುಡತುಂಗ ಕರುಣಾಂತರಂಗ ಶೌರಿ ಪುರಾಣಪುರುಷ ದಾನವಾಂತಕ ಶ್ರೀನಿವಾಸನೆ ಶರಪಾಣೆ ವಿಷ್ಟಕ್ಸೇನವರ ಗೀರ್ವಾಣವಂದಿತ ಜಾನಕೀಧರ ನೀನೇ ಸಲಹೆನೇ 1 ಸಂಯಮಿ ವೃಂದನುತ ಮುಚ- ಪಾಲನ ಕೃಪಾಸಿಂಧು ಶ್ರೀ ಗೋವಿಂದ ಇಂದಿರಾನಂದ ನಂದ ಗೋಪಿಯಾನಂದ ನಾಚ್ಯುತ ಮಂದರಧರ ಮಾಪತೆ ಕಂಬುಕಂಧರ ಇಂದು ಮುಖ ಶ್ರೀ ಸುಂದರಾಂಗನೆ ರೂಪದಿ ಬಂದು ಸ್ತಂಭದಿ ರಕ್ಷಿಸೆಂದೆನಲು ಹರಿ 2 ತ್ರಿಜಗದ್ಭರಿತ ಕೌಸ್ತುಭಹಾರ ನರಮೃಗಾಕಾರ ಮಂಗಳಕರ ಮಹಿಮಾ ಶರಣು ಭಾಸುರ ಕಿರೀಟನೆ ನಿರತದಲಿ `ಹೆನ್ನೆಪುರ ನಿಲಯ' ಸಿರಿಯರಸ ನಿನ್ನಯ ಮೊರೆಯ ಹೊಕ್ಕರೆ ತ್ವರದಲಿ ನೀ 3
--------------
ಹೆನ್ನೆರಂಗದಾಸರು
ಗರುಡಗಮನ ಪುರುಷೋತ್ತಮ ಶೌರೇ ಪ ಕರುಣಸದನ ಗೋವರ್ಧನಧಾರೇ ಪಾತಕ ಸಂಹಾರೇ ಅ.ಪ ಇಂದಿರಾನಂದ ಗೋವಿಂದ ಮುಕುಂದಾ ನಂದನಕಂದ ಗೋವೃಂದಾನಂದ ಸುಂದರ ಬಂಧು ಮುಖಾರವಿಂದ ವಂದಿತ ನಿರ್ಜರವೃಂದಾನಂದ 1 ನಿತ್ಯನಿರ್ಮಲಾ ಜಗದಭಿರಾಮಾ ಬೃತ್ಯಜಾಲಪಾಲನ ಶುಭನಾಮಾ ನೃತ್ಯನೀಲ ನೀರದ ಘನಶ್ಯಾಮಾ ಸತ್ಯಕಾಮ ಮಾಂಗಿರಿ ವರಧಾಮಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಂದೆ ನಿನ್ನೊಲುಮೆಯೊಂದೆ ಎನ್ನ ಬಯಕೆ ಪ ಬಂದ ಕಷ್ಟಗಳೆಲ್ಲ ಎನ್ನಭ್ಯುದಯಕೆ ಅ.ಪ ಆಸೂರಿಯಾದರೂ ಈ ಸೂರಿಯಾದರೂ ಏಸೂರಿಗ್ಹೋದರೂ ವಾಸಿಯಿಲ್ಲ ಕೂಸುಗಳ ಪಡೆದರೂ ಆಸೆಗಳ ತೋರಿದರೂ ಹೇಸಿಕೆ ಬೇಳಲೆದರೂ ಲೇಸಾಗಲಿಲ್ಲ 1 ಈ ವೂರಿನೈವತ್ತು ಆ ವೂರಿನೈವತ್ತು ದೇವರ್ಕಳಿಗೆ ನಾಮ ಹರಕೆ ಹೊತ್ತು ಬೇವಿನಲಿ ಸಿಹಿಯ ನೀನೀವುದೆಂದತ್ತತ್ತು ಜೀವಿತವು ಬರಿದಾಯ್ತ ಬಾಧಿಸುವುದೈಮುಪ್ಪು 2 ತಂದೆ ಗೋವಿಂದನಯ್ಯ ಒಂದುನೂರ್ವಂದನೆಯ ಇಂದರ್ಪಿಸುವೆನಯ್ಯ ಕೈಹಿಡಿಯಯ್ಯ ಕುಂದ ಕಳೆಗಾಣಿಸಯ್ಯ ಬಂಧನವ ಬಿಡಿಸಯ್ಯ ಇಂದಿರಾನಂದ ಮಾಂಗಿರಿಯ ರಂಗಯ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನಾರು ನಾನಾರು ನೀನೆನ್ನೊಳಿರಲು ನಾನಾರು ನೀನಾರು ನಾನಿನ್ನೊಳಿರಲು ಪ ನೀನೇನ ಮಾಡಿಸುವೆ ನಾನದನು ಮಾಡುವೆ ನೀನೇನ ಮಾಡಿದರೂ ನಾನದನು ಮಾಡುವೆ ಅ.ಪ ಎನ್ನದೆಂಬುವುದೆಲ್ಲ ನಿನ್ನದಾಗಿರುವಾಗ ನನ್ನದೇನುಂಟಯ್ಯ ಪನ್ನಗಾಧೀಶಾ ನಿನ್ನವನು ನಾನಯ್ಯ ನನ್ನವನು ನೀನಾದೊ ಡಿನ್ನೇನು ನಾನೀನು ಎನ್ನುವಂತಿಲ್ಲ 1 ಇಂದಿರಾನಂದ ಗೋವಿಂದ ತವಪಾದಾರ ವಿಂದಸೇವೆಯ ಮಾಳ್ಪೆನೆಂದು ಕಾದಿಹೆನೋ ಮುಂದೆನಗೆ ಜನ್ಮಂಗಳೊಂದಾದರೂ ಬೇಡ ತಂದೆ ಮಾಂಗಿರಿರಂಗ ಬಂದುಕಾಯೋ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂದರಧರ ಗೋವಿಂದಾ | ಇಂದಿರಾನಂದ ನಂದನಕಂದ ಸುಂದರವರದಾ ಪಾಹಿ ಮುಕುಂದಾ ಪ ವಾರಿಜಸೌರಭ ಹಿಮಕರ ಬಿಂಬ1 ಮಾಂಗಿರಿ ರಂಗ ಶುಭಾಂಗ ದೇವೋತ್ತುಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂದರೊದ್ಧಾರ ಮುಚುಕುಂದವರದ ಮುಕುಂದ ಇಂದಿರಾನಂದ ಗೋವಿಂದ ವರದ ಕಂದನತಿ ದೈನ್ಯದಿಂ ತಂದೆ ಬಾರೆನ್ನಲಾ ನಂದದಿಂ ಭದಿಂ ಬಂದೆ ಭರದಿಂ ನಂದಾತ್ಮ ಸಂಜಾತನೆಂದೆನಿಸಿ ನಲವಿನಿಂ ಬೃಂದಾವನದಿ ನಿಂದೆ ವರದನೆಂದೆ ನಂದಮಂ ಕೃಪೆಗೆಯ್ದುದರರೆ ಪಿರಿದು ಅಚ್ಚುತಾನಂತ ಚಿದ್ರೂಪ ವಿಭವ ಪಚ್ಚಕರ್ಪೂರದಿಂ ಮಿಳಿತವಾಗಿ ಪೆರ್ಚೆ ಪರಿಮಳ ವೀಳ್ವಮಿದನುಕೊಂಡು ಮೆಚ್ಚಿ ಪೊರೆಯೆನ್ನ ಶೇಷಾದ್ರಿರನ್ನ
--------------
ನಂಜನಗೂಡು ತಿರುಮಲಾಂಬಾ
ಮಾಧವ ಸ್ವಾಮಿ ವಿಠಲ | ಪೊರೆಯ ಬೇಕಿವಳಾ ಪ ಹೇ ದಯಾಂಬುದಿ ಹರಿಯೆ | ಆದಿ ಮೂರುತಿಯೆ ಅ.ಪ. ಸಾದು ಸಂತರ ಸೇವೆ | ನೀ ದಯದಿಕೊಟ್ಟಿವಳಮೋದಮುನಿನುತದೀಕ್ಷೆ | ಹಾದಿಯಲ್ಲಿರಿಸೋಬೋಧವಾಗಲಿ ತತ್ವ | ತರತಮವು ಪಂಚಕೆಯುಸಾಧುವಂದಿತ ಹರಿಯೆ | ಬಾದರಾಯಣನೇ 1 ದಾಸತ್ವ ದೀಕ್ಷೆ ಆ | ಯಾಸ ವಿಲ್ಲದೆ ಸಾಗಿಕೇಶವನ ಒಲಿಮೆಗೇ | ಅವಕಾಶವಾಗೀಹೇಸಿ ಸಂಸಾರದಿ ನಿ | ರಾಶಿಯಾಗಲಿ ಎಂದುಆಶಿಸುವೆ ಶ್ರೀ ಹರಿಯೆ | ವಾಸವಾನುಜನೇ 2 ಇಂದ್ರಿಯವ್ಯಾಪಾರ | ಉಪೇಂದ್ರನದು ಎಂಬುವಚೆಂದುಳ್ಳ ಸ್ಮøತಿಯಿತ್ತು | ತಂದೆ ಕೈಪಿಡಿಯೋವಂದ್ಯಳೆಂದೆನಿಸು ಸ್ತ್ರೀ | ವೃಂದದೊಳಗೆ ಹರಿಯೆಮಂದಾಕಿನೀ ಜನಕ | ಇಂದಿರಾನಂದ 3 ಭವನಾವೆ ಎಂದೆನಿಸೊದೇವದೇವೇಶಗುರು | ಗೋವಿಂದ ವಿಠಲಾ 4 ದುರಿತ ದುಷ್ಕøತಹಾರಿ | ಸರ್ವಜ್ಞ ಮೂರುತಿಯೆಹರಿನಾಮ ಕವಚವನು | ತರಳಗೇ ತೊಡಿಸೀಪರಿಹರಿಸೊ ಭವಭಂದ | ಮರುತಾಂತರಾತ್ಮಕನೆಕರುಣಾಳು ಕರಿವರದ | ಮೊರೆ ಕೇಳೊ ಹರಿಯೇ 5
--------------
ಗುರುಗೋವಿಂದವಿಠಲರು
ರಂಗ ಬಾರೈಯ್ಯ ದೇವೋತ್ತುಂಗ ದಯಾಂತರಂಗ | ಅಂಗಜನಯ್ಯ ನರಶಿಂಗಾ ಸಾರಸಾಪಾಂಗ || ಮಂಗಳ ಮಹಿಮಾ ವಿಹಂಗ ಘೋರ ಭವಭಂಗರಹಿತ ರಣರಂಗ ವಿಜಯ || ಸನ್ನುತ ಶೃಂಗಾರಾಂಗ ರಮಾಂಗನಾಸಂಗ ಪ ಶತಕೋಟಿ ಭಾಸ್ಕರ ಯುತತೇಜ ಮರುತಾಂತರ್ಗತ | ಹರಿಮೃದು ಭಾಷಣ | ಕೌಸ್ತು ಭಾಭರಣ | ಜಿತದಿತಿಸುತಬಾಲ | ಶ್ರಿತಭಕ್ತ ಮಂದಾರ | ಪತಿತ ಪಾವನ ಶ್ರೀರಾಮ ಪಟ್ಟಾಭಿರಾಮ | ಅತುಲಿತ ಚರಿತ ಕಾಮಿತ ಫಲದಾಯಕ | ಶತ ಧೃತಿ ಜನಕಾಚ್ಯುತ ಸರ್ವೋತ್ತಮ | ಸತತವು ನೀನೇ ಗತಿಯೆಂದೆನುತಲಿ | ಹಿತದಿ ನಾನು ನಿಮ್ಮ ಸ್ತುತಿಸುತಲಿರುವೆನು 1 ನಂದನಂದನ ವೇಣುನಾದ ವಿನೋದ ಜಗದ್ವಂದ್ಯ ಶ್ರೀವತ್ಸಲಾಂಛನ ವಾಸುಕಿಶಯನ | ಮಂದಹಾಸ ಮುಚುಕುಂದವರದ ರಾಕೇಂದುವದನ | ಗೋವಿಂದ ಇಂದಿರಾನಂದ ಸಿಂಧು ಗಂಭೀರಾ | ಮುಕುಂದ ಧರಣೀಧರ ಕುಂದರದನ ಕಾಳಿಂದಿರಮಣ ಗಜೇಂದ್ರನ ಸಲಹಿದ ಛೆಂದದೆನ್ನ ಮೊರೆಯಿಂದಿಗೆ ಲಾಲಿಸೊ ಪರಮಾತ್ಮ ಸರಸಿಚೋದರ ಸಕಲಾಣುರೇಣು ಪರಿಪೂರ್ಣ 2 ನಿರುಪಮಧೀರ ಶರಣಾಗತ ರಕ್ಷಣ ಮಧುಸೂದನ ಸುರವರ ಪೂಜಿತ ಚರಣಾಂಭೋರುಹ ಕೃಪಾಕಾರ ಹರುಷದಲಿ 3
--------------
ಹೆನ್ನೆರಂಗದಾಸರು