ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಹಿಹಳಿ- ಥೂಖೋಡಿಪಾಪಿ ಮನವೇ ಇಂಥ-|ಕುಹಕಬುದ್ಧಿಯ ನೀ ಬಿಡು ಕಾಣೋ ಮನವೇಪಬಣ್ಣದ ಬೀಸಣಿಕೆಯಂತೆ ಹೆಣ್ಣು ತಿರುಗುವುದು ಕಂಡು |ಕಣ್ಣ ಸನ್ನೆಮಾಡಿ ಕೈಯ ಹೊನ್ನ ತೋರಿಸಿ ||ತಣ್ಣೀರು ಹೊಯ್ದ ಹೊಸ ಸುಣ್ಣದಂದದಿ ಕುದಿದು ಕುದಿದು |ಕಣ್ಣಿನೊಳು ಮಣ್ಣ ಚೆಲ್ಲಿ ಕೊಂಬರೇ ಮನವೆ 1ಪಗಡೆ ಚದುರಂಗ ಲೆತ್ತವನಾಡೆ ಕರೆದರೆ |ನಿಗುರಿದುವು ಕರ್ಣಗಳು ಮೊಚ್ಚೆಯಂತೆ ||ಜಗದೀಶ್ವರನ ದಿನದಿ ಜಾಗರಕೆ ಕರೆದರೆ |ಮುಗಿಲ ಹರಿದು ಧರೆಗಿಳಿದಂತೆ ಮನವೇ 2ವಾಸುದೇವನ ಪೂಜೆ ಒಮ್ಮೆ ಮಾಡೆಂದರೆ |ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ||ಆ ಸಮಯದಲೊಬ್ಬ ಕಾಸು ಕೊಡಲು ಅವನ |ದಾಸಿಯ ಮಗನಂತೆ ಬೆಂಬಿಡದೆ ಮನವೇ 3ನೆರೆಮನೆ ಹೊರಮನೆ ಪ್ರಸ್ತವಾದರೆ ಅವರು |ಕರೆಯದ ಮುನ್ನವೆ ಹೊರೆಹೊರಟೆ ||ಬರಿಗಂಟು ಬರಿಮಾತು ಸುಳ್ಳುಸುದ್ದಿಯ ಹೇಳಿ |ಹಿರಿಯ ಮಗನಂತೊಡಲ ಹೊರಕೊಂಬೆ ಮನವೆ 4ಬಿಂದು ಮಾತ್ರವೆ ಸುಖ-ದುಃಖ ಪರ್ವತದಷ್ಟು |ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ||ಎಂದೆಂದಿಗೂ ನಮ್ಮ ಪುರಂದರವಿಠಲನ |ಹೊಂದಿಹೊಂದಿ ನೀ ಸುಖಬಾಳೊ ಮನವೆ 5
--------------
ಪುರಂದರದಾಸರು
ಪುಟ್ಟಿಸಬೇಡವೊ ದೇವ - ಎಂದಿಗು ಇಂಥ-|ಕಷ್ಟಪಟ್ಟು ತಿರುಗುವ ಪಾಪಿ ಜೀವನವ ಪನರರ ಸ್ತುತಿಸಿ ನಾಲಗೆ ಬರಡು ಮಾಡಿಕೊಂಡು |ದರಪೋಷಣೆಗಾಗಿ ಅವರಿವರೆನದೆ ||ಧರೆಯೊಳು ಲಜ್ಜೆ - ಮಾನಗಳೆಲ್ಲವೀಡಾಡಿ |ಪರರ ಪೀಡಿಸಿ ತಿಂಬ ಪಾಪೀ ಜೀವನವ 1ಎಂಟುಗೇಣು ಶರೀರವ ಒಂದು ಗೇಣು ಮಾಡಿಕೊಂಡು|ಪಂಟಿಸುತ್ತ ಮೆಲ್ಲಮೆಲ್ಲನೆ ಪೋಗಿ ||ಗಂಟಲಸೆರೆಗಳುಬ್ಬಿ ಕೇಳುವ ಸಂಕಟ ವೈ-|ಕುಂಠಪತಿ ನೀನೆ ಬಲ್ಲೆ ಕಪಟನಾಟಕನೆ 2ಲೆಕ್ಕದಲಿ ನೀ ಮೊದಲು ಮಾಡಿದಷ್ಟಲ್ಲದೆ |ಸಖ್ಯಕೆವೆಗ್ಗಳಕೊಡುವರುಂಟೆ ||ಕಕ್ಕುಲತೆಪಟ್ಟರಿಲ್ಲ ಕರುಣಾಳು ನಿನ್ನ ಮೊರೆ |ಹೊಕ್ಕೆ ಎನ್ನನು ಕಾಯೊ ಪುರಂದರವಿಠಲ 3
--------------
ಪುರಂದರದಾಸರು
ವೃಂದಾವನದೊಳಾಡುವನಾರೆ - ಗೋಪ-|ಚಂದಿರವದನೆ ನೋಡುವ ಬಾರೆ ಪಅರುಣಪಲ್ಲವಪಾದಯುಗಳನೆ ದಿವ್ಯ-|ಮರುಕತ ಮಂಜುಳಾಭರಣನೆ ||ಸಿರಿವರ ಯದುಕುಲ ಸೋಮನೆ ಇಂಥ-|ಪರಿಪೂರ್ಣ ಕಾಮ ನಿಸ್ಸೀಮನೆ 1ಹಾರ-ಹೀರ ಗುಣಧಾರನೆ - ದಿವ್ಯ |ಸಾರಶರೀರ ಶೃಂಗಾರನೆ ||ಆರಿಗಾದರು ಮನೋದೂರನೆ ತನ್ನ-|ಸೇರಿದವರ ಮಾತ ವಿೂರನೆ 2ಮಕರಕುಂಡಲಕಾಂತಿ ಭರಿತನೆ - ದಿವ್ಯ |ಆಕಳಂಕರೂಪ ಲಾವಣ್ಯನೆ ||ಸಕಲರೊಳಗೆ ದೇವನೀತನೆ - ನಮ್ಮ |ಮುಕುತೀಶಪುರಂದರವಿಠಲನೆ3
--------------
ಪುರಂದರದಾಸರು
ಹರಿನಮ್ಮೊಗತನ ಮಾಡಲೀಸನೆ ಕೇಳಮ್ಮ ಇವನಚರಿಯವಾರ ಮುಂಧೇಳುವನೆ ಗೋಪ್ಯಮ್ಮ ಪತನ್ನೊಳು ತಾನೇ ರುದಿಸುತ ಬಂದ ಕಾಣಮ್ಮ | ಯಾಕೆನೆಕಣ್ಣಿನ ಬೇನೆ ಅತಿ ಕಠಿಣೆಂದಾ ಅವನಮ್ಮ |ಸಣ್ಣನಳುವಳೆ ಮೊಲೆ ಹಾಲ್ತಾ ಎಂದನಮ್ಮ | ನಿನ ಕ-ಯ್ಯನ್ನು ಮುಟ್ಟಿದಿರೆಂದುಮಾನಕೊಂಡನಮ್ಮ 1ತರುಗಳ ಬಾಲಕೆ ತರಳರ ಕೈ ಕಟ್ಟುವನಮ್ಮ | ಯನ್ನಕರದಲ್ಲಿ ಹಿಡಿ ಹಿಡಿಯೆಂದು ತೇಳಿಕ್ಕುವನಮ್ಮ ||ವರಗುವುದೆಲ್ಲಿ ನೀವೆಂದು ಕೇಳುವನಮ್ಮ | ನಿಮ್ಮಪುರುಷರು ಕಾಂಬುವಯಿಲ್ಲ ಎಲ್ಲೆಂಬುವನಮ್ಮ 2ಜೋಗೀ ರೂಪವ ತಾಳಿ ಮನೆಗೆ ಬಂದನಮ್ಮ | ನಾನುಬಾಗಿ ಸುತರಿಲ್ಲೆಂದವನ ಕೇಳಿದೆನಮ್ಮ ||ಹೋಗಲಿ ಎಲ್ಲರೂ ಮಂತ್ರವ ಕೊಡುವೆನೆಂದಮ್ಮಾ | ಕೃಷ್ಣನಾಗಿ ಇದುರಿಗೆ ನಿಂತ ಭಂಡು ಕೇಳಮ್ಮ3ನಾಕು ಬೆರಳ ತೋರಿ ತಲೆದೂಗುವನಮ್ಮ | ಇಂಥ-ದ್ಯಾಕೊ ಎಂದರೆ ಯೀಸೆ ಹಾಲ್ಕೊಡೆಂದನಮ್ಮ ||ಕಾಕುಬುದ್ಧಿಯೊಂದೆರಡೆ ಮೂರೇನಮ್ಮ | ಶ್ರೀ ಪಿ-ನಾಕಿಯಾಣೆ ಕರೆದು ಕೇಳೆ ಗೋಪ್ಯಮ್ಮ4ಮತಿಗೆಠ್ಠೆಣ್ಹುಡುಗರ ಕರೆದೊಯ್ದೋಣ್ಯೊಳಗಮ್ಮಾ | ನಾವುಸತಿಪುರುಷಾಗ್ಯಾಡುವ ಬಾ ಎಂಬೊನಲ್ಲಮ್ಮ ||ಪೃಥಿವಿಯ ಹುಡುಗರ ತೆರದರೆ ಚಿಂತಿಲ್ಲಮ್ಮ | ಇವನುಸುತರನು ಪಡೆವದು ಬಲ್ಲನೇ ಸುಳ್ಳಮ್ಮ 5ನವನೀತವ ಕೊಳ್ಳೆಂದೊದರುತ ಬಂದನಮ್ಮ | ನಾನುಹವರನ ಕಾಶಿಗೆ ಎಷ್ಟೆಂದು ಕೇಳಿದೆನೆಮ್ಮ ||ಖವ ಖವ ನಗುತಲಿ ಬದಿಬದಿಗೆ ಬಂದನಮ್ಮ | ತಕ್ಕೊಯುವತಿ ಇದರಷ್ಟೆಂದು ಕುಚ ಮುಟ್ಟುವನಮ್ಮ 6ಹಿತ್ತಲ ಕದಕೆ ಶೀ(ಕೀ)ಲ್ಯುಂಟೋ ಇಲ್ಲೆಂಬುವನಮ್ಮ | ನಮ್ಮ-ಅತ್ತೆಯ ಕಣ್ಣು ಹೋಗಲಿ ಎನಬೇಕೇನಮ್ಮ ||ಉತ್ತರ ಕೊಡದಿರೆ ಒಪ್ಪಿದೆ ಇದಕೆಂಬುವನಮ್ಮ | ಇಷ್ಟೊಂ-ದರ್ಥೆ ಪ್ರಾಣೇಶ ವಿಠಲಗೆ ಯಶೋದೆಯಮ್ಮ 7
--------------
ಪ್ರಾಣೇಶದಾಸರು