ಒಟ್ಟು 9 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಲಕ್ಷ್ಮೀದೇವಿ ಏನೆಂದು ವರಿಸಿದೆಯೆ ಹರಿಯ ಲಕುಮಿ ತಾಯೇ ಪ ಆನಂದಪ್ರದನೆಂದು ಭ್ರಮಿಸಿದೆಯಾ ಶ್ರೀಯೇ ಅ.ಪ. ಮಕ್ಕಳನು ಹೆರುವ ಮನದಭಿಲಾಷೆಯಿಂದೇನೆಹೊಕ್ಕುಳಲಿ ಬ್ರಹ್ಮನನು ಪಡೆದು ಕುಳಿತನು ತಾನೆರಕ್ಕಸರ ಕಂಡೊಡನೆ ಹೆಣ್ಣಾಗಿ ನಿಲ್ಲುವನೆ ಅಕ್ಕ ಇಂಥವನೊಡನೆ ಸರಸವೆಂತಾಡುವೆಯಾ 1 ತಾನು ಸೇವೆಯಕೊಂಡು ಮಾನವನು ಪಡೆಯದೇದೀನನಂದದಿ ಭಕ್ತಜನ ಸೇವೆಗೆಳಿಸುವನೂಆನೆ ಕರೆದೊಡೆ ನಿನ್ನ ಬಿಟ್ಟೋಡಲಿಲ್ಲೇನೆಜ್ಞಾನಿಗಿಂತ ನೀನವಗೆ ಹೆಚ್ಚಿನವಳೇನೆ 2 ಮುದಿಋಷಿಯ ಕರೆತಂದು ಒದೆಸಿಕೊಂಡವನೆಹದನ ಬಂದೊಡನೆ ಬಹುರೂಪ ಧಾರಕನಮದುವೆಯಾದರು ತನ್ನ ಗುಟ್ಟನ್ನು ಕೊಡದವನಗದುಗಿನೊಡೆಯ ಶ್ರೀ ವೀರನಾರಾಯಣನ 3
--------------
ವೀರನಾರಾಯಣ
ಕಂಡೆನೋ ಕಂಡೆ ಗುರುಚಿದಂಬರನಾ ತನು ಗೊಂಡು ಭೂಮಂಡಲದೊಳು ಚರಿಸುವನಾ ಪ ಪರಮಾತ್ಮ ಪರತತ್ವವನು ತಿಳಿದವನ ಧರೆಯ ಜನರನÀು ಪಾವನವ ಮಾಡುವನಾ ಕರುಣ ಸಮುದ್ರ ದೀನರ ದಯಾಪರನಾ ನೆರೆನಂಬಿದವರಿಗೆ ವರವ ಕೊಡುವನಾ 1 ಮಳೆ ಛಳಿ ಬಿಸಿಲು ಹಸಿವಿಗಂಜದವನ ಕಲ್ಲು ಮುಳ್ಳು ಬೆಟ್ಟವೆನ್ನದೆ ಚರಿಸುವನ ನೆಲೆಗಾಣದಂತಹ ಅಪಾರ ಮಹಿಮನು ಕಲಿಮನದೊಡ್ಡದಾನಂದ ನಿರ್ಗುಣನ 2 ಸ್ಮರಹರನಂತೆ ಭಸಿತ ದಿಗಂಬರನಾ ಕೆರೆಬಾವಿ ದೇವಾಲಯವನು ಕಟ್ಟಿಸುವನ ಪುರಹರನಂತೆ ಢಿಕ್ಕನೆ ಧರಿಸಿಹನ ನರ ಗುರಿಗಳು ಬಲ್ಲರೇನೋ ಇಂಥವನಾ 3 ಯಮನಿಯಮ ಅಷ್ಟಾಂಗ ನಿರತನ ಕಮಲಾರಿ ಪಿತನಂತೆ ಗಂಭೀರದವನ ಹಿಮವಂತನಂತೆ ಧೈರ್ಯದೊಳಿರುತಿಹನ ಕಮಲ ಬಾಂಧವನಂತೆ ತೇಜದಿಂದಿರುತಿಹನ 4 ಅರಿಗಳನರುವರ ನುಗ್ಗೊತ್ತಿದವನ ಕರಣೇಂದ್ರಿಯಂಗಳ ನಿಗ್ರಹಿಸಿದವನ ಪರಮ ದಾಸಗೆ ಆಲಿಂಗನವನಿತ್ತನಾ ಸ್ಥಿರ ಚಿದಾನಂದ ಪುರದ ದಿಗಂಬರನ 5
--------------
ಕವಿ ಪರಮದೇವದಾಸರು
ಕೊರಡು ಎಂಬೆನು ಇಂಥವನ ಕಂಡು ಕೊರಡು ಎಂಬೆಹುಸಿಯದೆಕೊರಡು ಅಲ್ಲದೆ ಶಿವನಿರೆ ಜೀವನೆಂಬುವನ ಕೊರಡು ಎಂಬೆ ಪ ಹಿರಿಯರು ಬರಲು ಏಳದವನನು ಕಂಡು ಕೊರಡು ಎಂಬೆಮರೆತು ತನ್ನನು ಕಲ್ಲ ಪೂಜಿಪ ಕಂಡು ಕೊರಡು ಎಂಬೆಅರಿತು ತನ್ನನು ಅಹುದಲ್ಲವೋ ಎಂಬುವನ ಕೊರಡು ಎಂಬೆಗುರುಪಾದ ಹೊಂದಿ ತನ್ನನು ತಿಳಿಯದವನು ಕೊರಡು ಎಂಬೆ 1 ತನ್ನೊಳು ಪರಮಾತ್ಮನಿರಲು ಕಾಣದವನನು ಕೊರಡು ಎಂಬೆಅನ್ನವ ಬಿಟ್ಟು ತೊಪ್ಪಲ ತಿಂಬನ ಕಂಡು ಕೊರಡು ಎಂಬೆತಿನ್ನುವನಿರುಲು ಉಪವಾಸ ಬೀಳ್ವನ ಕಂಡು ಕೊರಡು ಎಂಬೆಚೆನ್ನಾಗಿ ಹಮ್ಮಳಿಯದೆ ಶ್ರೇಷ್ಠನೆಂಬುವನ ಕೊರಡು ಎಂಬೆ 2 ನೀನಾರು ಎಂಬುವನ ಅದಾರೆನ್ನದನ ಕಂಡು ಕೊರಡು ಎಂಬೆವೇದಶಿರವನೋದಿನರ ತನ್ನನೆಂಬನ ಕೊರಡು ಎಂಬೆವಾದಕ್ಕೆ ಠಾವಿಲ್ಲ ಖೇದ ಮಾಡುವನ ಕಂಡು ಕೊರಡು ಎಂಬೆಬೋಧ ಚಿದಾನಂದನಿರೆ ಕಾಣದವನನು ಕೊರಡು ಎಂಬೆ 3
--------------
ಚಿದಾನಂದ ಅವಧೂತರು
ನಾನೆ ಭ್ರಮಿಸಿದೆನೊ ವಿಷಯದಿ ಮಮತೆ ನೀನೆ ಸೃಜಿಸಿದೆಯೊ ಪ. ಅನಾದಿ ನಿಧಾನ ನೀನೆ ತಿಳಿದು ನೋಡೊ ಅ.ಪ. ಬನ್ನ ಬಡಿಸುತಿದೆಕೈವಲ್ಯದರಸನೆ ನೀ ವಿಚಾರಿಸಿ ಕಾಯೊ 1 ಸ್ವತಂತ್ರ ನೀನು ಅಸ್ವತಂತ್ರ ನಾನು ದೂತನ್ನ ಈ ತೆರಕಾತುರಗೊಳಿಪುದು ಏತರಘನವೊ ಇದರಿಂದಖ್ಯಾತೇನುಫಲವೊ ಎನ್ನೊಳು ನಿನಗೇತಕೀ ಛಲವೊ ಭವದಿ ಕೈ-ಸೋತು ಬಿನ್ನೈಸುವೆ ಮಾತುಮನ್ನಿಸಿ ಕಾಯೊ2 ಕಕ್ಕಸ ಭವದೊಳು ಠಕ್ಕಿಸಿ ಸಿಗಹಾಕಿ ಸಿಕ್ಕುಬಿಡಿಸದೆ ನೀ-ನಕ್ಕು ಸುಮ್ಮನಿರಲು ದಿಕ್ಕ್ಯಾರೊ ಎನಗೆ ದಣಿದು ಮೊರೆ-ಯಿಕ್ಕುವೆ ನಿನಗೆ ಬಂದು ಬೇಗ ನೀ ತಕ್ಕೊನೀ ಕೈಗೆ ಎನ್ನವಗುಣ ಲೆಕ್ಕಿಸದಲೆ ಕಾಯ್ಯಬೇಕಯ್ಯ ಕೊನೆಗೆ 3 ಪ್ರಿಯ ನೀನೆನಗೆಂದು ಅಯ್ಯ ನಿನ್ನ ನಂಬಲು ಮಯ್ಯ ಮರೆಸಿ ವಿ-ಷಯದುಯ್ಯಾಲೆಗೊಪ್ಪಿಸಿದೆ ಸಯ್ಯಲೊ ದೊರೆಯೆ ಇಂಥವನೆಂದುಅಯ್ಯೊ ಮುನ್ನರಿಯೆ ಕರುಣಿ ಎಂಬೊ ಹಿಯ್ಯಳಿ ಸರಿಯೆ ಇನ್ನಾದರುಕಯ್ಯ ಪಿಡಿಯಲು ಕೀರ್ತಿ ನಿನಗೆಲೊ ಹರಿಯೆ4 ಮೊದಲೆಮ್ಮಾರ್ಯರು ನಿನ್ನ ಪದನಂಬಲವರಘ ಸದೆದು ಸಮ್ಮುದದಿಸಂ-ಪದವ ನೀಡಿದೆಯಂತೆ ಅದನು ಮರೆದೆಯೊ ಶಕುತಿಯು ಸಾಲದಲೆ ಜ-ರಿದೆಯೊ ಜನರು ಪೇಳಿದ ಮಾತು ಪುಸಿಯೊ ನಿಜ ತೋರಲು ಬುಧನುತ ಗೋಪಾಲವಿಠಲ ಕೀರುತಿಯೊ 5
--------------
ಗೋಪಾಲದಾಸರು
ಮೂಲೋಕದೊಳಗೆ ಮುಕುಂದನೆ ದೈವವಿದ- ಕಾಲೋಚನೆಯ ಮಾಡಬೇಡ ಇವ ಲೋಲಾಕ್ಷಿ ಎಂದೆಂದು ಬಿಡ ಅಲ್ಲದಿದ್ದರೆ ಮೇಲಣ ಸಂಪದವ ಕೊಡ ಇಂಥವನಾವ ಪ. ಆಡÀಲೇಕಿನ್ನು ಸಖಿ ಅಂಜಿದವನಂತೋಡುವ ಕಾಡುವ ಖಳನಾಗಿ ನಿತ್ತ (ನಿಂತ?) ಇವ ರೂಢಿಯೊಳಗೆ ಬಲುದೈತ್ಯ ಇದನೋಡಿ ಪಾಡುವರು ಸುಖ ನಲಿವುತ್ತ ಇಂಥವನಾವ 1 ಕಾಳಿಯ ನಾಗನ ತುಳಿದ ಮತ್ತವಗೊಲಿದ ಬಾಲಗೋಪಾಲ ಸುಕೃಪಾಳು ಇವ ನಾಳು ನಾನೆಂದು ಸಖಿ ಬಾಳು ಗಿರಿಯ ಭಾರವ ತಾಳಿತಿವನದೊಂದು ತೋಳು ಇಂಥವನಾವ 2 ಕಣ್ಣಾರೆ ಕಂಡೆವಲ್ಲ ಮಣ್ಣಮೆದ್ದೆಯೆನಲು ಸಣ್ಣ ಬಾಯೊಳು ಸರ್ವಜಗವ ಎಲೆ ಹೆಣ್ಣೆ ತೋರಿ ತೊಳೆದ ನಮ್ಮಘವ ಇನ್ನು ಹಯವ ದನ್ನ ತನ್ನವನೆನ್ನಾಳುವ ಇಂಥÀವನಾವ 3
--------------
ವಾದಿರಾಜ
ಶ್ರೀ ಹರಿಸ್ತುತಿ ಗೋಪಿ ನಿನ್ನ ಮಗ ಪ ಯಥೇಷ್ಟ ಮಾಡುವ ಈ ಕಳ್ಳ ಕೃಷ್ಣನು ಅ.ಪ ಅಡಗಿ ಮನೆಯೊಳಡಗಿಕೊಂಡಿರುವ ಅಲ್ಲಿದ್ದ ಭಾಂಡಗಳ್ ಬುಡಮೇಲ್ ಮಾಡಿ ಅಡಕಲೇರಿಸುವಾ ಅಡಿಗಳನು ಮೆಲ್ ನಿಡುತ ನೆಲವಿಲಿ ಇಡುವ ಪಾಲ್ ಮೊಸರನೆಲ್ಲ ಸವಿಯುವ ಗಡನೆ ಗೆಳೆಯರ ನೊಡನೆ ಬಂದು ಕಡೆವ ಗಡಗಿಯ ನೊಡೆದು ಪೋಗುವಾ 1 ಸಿಕ್ಕಮನೆ ಮನೆ ಹೊಕ್ಕು ನೋಡುವನೆ ತಾ ಸಿಕ್ಕದಿರನು ತಕ್ಕ ಕಳ್ಳಿವ ಠಕ್ಕನಾಗಿಹನು ಅಕ್ಕ ಕೇಳೆÀ ಅಕ್ಕರದಿ ಕೈಯಿಕ್ಕಿ ಕಡೆದಿಹ ಚೊಕ್ಕ ಬೆಣ್ಣೆಯ ಚಿಕ್ಕ ಬಾಲರಿಗಿಕ್ಕಿ ತಿನ್ನುವ ಮಿಕ್ಕ ಬೆಣ್ಣೆಯ ಬೆಕ್ಕಿಗ್ಹಾಕುವ 2 ಎಂಥವನಿವ ಖಳರಂತೆ ಮಾಡುವನೆ ಬೇ ಕಂತೆ ಕರುಗಳ ತಂತುಬಿಚ್ಚಿ ನಿಂತುನೋಡುವನೆ ಅಂಥ ಇಂಥವನಲ್ಲ ನಿನ್ನ ಮಗ ಸಂತ ಜನಮನ ದಂತರಂಗನು ಕಾಂತೆಯರು ಮನದಂತೆ ಬೈದರೆ ನಿಂತು ನಗವಾನಂತಾದ್ರೀಶನು 3
--------------
ಅನಂತಾದ್ರೀಶರು
ಹರಿಪಾದ ತೀರ್ಥವನು ಕರದಿ ಪಿಡಿದವರೆಲ್ಲ ತಿರುನಾಮದವರೆನಲು ನಂಬಬಹುದೇ ಪ ಪರವಾಸುದೇವನನು ಮರೆತು ಸತಿಸುತರ ವರಾಭರಣವೇ ಹಿರಿದೆಂಬ ನರರಿಲ್ಲವೇ ಅ.ಪ ಹರಿನಿವೇದನಕಾಗಿ ಕರದಿ ಫಲಪುಷ್ಪಗಳ ತರುವವರು ದಕ್ಷಿಣೆಯ ಇರಿಸಿಹರೋ ಎಂದು ಪರಿಪರಿಯ ದೃಷ್ಟಿಯಲಿ ಪರಿಕಿಸುತ ಅಲ್ಲವೆಂ ದರಿತಾಗ ಕೋಪ ನಿಷ್ಠುರ ಗೈಯುವರು 1 ಈಶಾಯನಮಃ ಓಂ ಶ್ರೀಶಾಯ ನಮಃ ಪ ರೇಶಾಯ ನಮಃ ಎಂಬುದಕೆ ಬದಲು ಆಶೋತ್ತರವನಾಂತು ಕ್ಲೇಶಪೂರಿತರಾಗಿ ನಾಶವಾಗಲಿ ಕುಡದಜನರೆಂಬರಕಟಾ 2 ಮಾನವೋತ್ತಮ ಮಾತ್ರ ತಿರುನಾಮಧಾರಿ ಜ್ಞಾನಿ ಇಂಥವನಿಂದ ತೀರ್ಥವನು ಪಡೆದವರು ಶ್ರೀನಾಥ ಮಾಂಗಿರಿಯ ಭಕ್ತರೆನಿಸುವರು3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್