ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ - ಜನ್ಮ ಪ ಸಾರ್ಥಕವಿಲ್ಲದವರೆಲ್ಲ ಭಾಗವತರೆ ಅ ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿನಿಗಮಾಗಮ ಪುರಾಣಗಳನೋದಿ ತಿಳಿದುಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವಂಥಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೆ ? 1 ಪಟ್ಟೆ ನಾಮವ ಬಳಿದು ಪಾತ್ರೆ ಕೈಯಲಿ ಹಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? 2 ಲಿಂಗಾಂಗದೊಳಗಿರುವ ಚಿನ್ಮಯವ ತಿಳಿಯದೆಅಂಗಲಿಂಗದ ನೆಲೆಯ ಗುರುತರಿಯದೆಜಂಗಮ ಸ್ಥಾವರದ ಹೊಲಬನರಿಯದ ಇಂಥಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ ? 3 ಅಲ್ಲಾ ಖುದಾ ಎಂಬ ಅರ್ಥವನು ತಿಳಿಯದೆಮುಲ್ಲ ಶಾಸ್ತ್ರದ ನೆಲೆಯ ಮುನ್ನರಿಯದೆಪೊಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥಕಳ್ಳ ಸುಳ್ಳರಿಗೆಲ್ಲ ವೀರ ಸ್ವರ್ಗವುಂಟೆ ?4 ವೇಷ ಭಾಷೆಯ ಕಲಿತು ಗೋಸಾಯಿ ಉಡೆದೊಟ್ಟುಆಸೆಯನು ತೊರೆಯದೆಯೆ ತಪಕೆ ಕುಳಿತುವಾಸನೆಯ ಗುರುತಿನಾ ಹೊಲಬನರಿಯದ ಇಂಥವೇಷಧಾರಿಗಳೆಲ್ಲ ಸಂನ್ಯಾಸಿಗಳೆ ? 5 ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿಮೂರು ಮೂರ್ತಿಯ ಮೂರು ಕಡೆಯೊಳಿರಿಸಿಮಾರ ಪಿತನಹ ಕಾಗಿನೆಲೆಯಾದಿ ಕೇಶವನಸಾರಿ ಭಜಿಸಿದವರಿಗೆ ಕೊರೆವ ಕೊರತೆಯುಂಟೆ ? 6
--------------
ಕನಕದಾಸ
ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ಯದುಪತಿಯನಗಲಿಸಿದ ಒಮ್ಮಿಂದಲೊಮ್ಮೆ ಅ.ಪ. ಎವೆಯ ಮರೆಯ ಮಾತನಾಡಿ ಪೋದ ಯಾಕೋ ವಿಧಿಯೇಸುಳಿಗುರುಳು ಕಡೆಗಣ್ಣ ನೋಟದಿಂದಲಿಕವಕವಿಸಿ ನಗುವ ಮುದ್ದು ಮುಖವನುತವಕದಿಂದ ಮರಳಿ ಮರಳಿ ನೋಡದ್ಹೋದೆವೆ 1 ಹಕ್ಕಿಯ ಮ್ಯಾಲುಳ್ಳ ದಯ ನಮ್ಮ ಮ್ಯಾಲೆಇಕ್ಕದೇಕೆ ಹೋದ್ಯೋ ವಿಧಿಯೇರೆಕ್ಕೆ ಎರಡುಳ್ಳರೆ ಮಧುರೆಗೆ ಪೋಗಿಫಕ್ಕನೆ ಶ್ರೀ ಹರಿಯೊಡನೆ ಕೂಡುತಿದ್ದೆವಲ್ಲ 2 ತಂಗೀ ನಮ್ಮೆದೆಯು ಕಲ್ಲಾಗಿ ಇದ್ದೇವೆಹಿಂಗುವರೆ ಸಖಿಯರು ಒಮ್ಮಿಂದಲೊಮ್ಮೆರಂಗವಿಠಲನ್ನ ಅಂಗ ಸಂಗವ ಬಿಟ್ಟು ಇಂಥಭಂಗ ಜೀವ ಸುಡ ಸುಡ ಸುಡಲ್ಯಾತಕೋ 3
--------------
ಶ್ರೀಪಾದರಾಜರು