ತುಳಸಿ ನಿನ್ನ ಭಜಿಸುವೆ | ಬಳಸಿ ಬಳಸಿ ನಮಿಸುವೆ ಪ
ಕೊಳಲಬಾಲನರಸಿಯೇ | ನಳಿನವಿಸರಗಂಧಿಯೇ ಅ.ಪ
ಗಾನಕೊಲಿದು ನಲಿವಳೇ | ಜ್ಞಾನವಿತ್ತು ಕಾವಳೆ
ನಿನ್ನಕರುಣೆ ಕೃಷ್ಣನೊಲವು | ನಿನ್ನಸ್ಮರಣೆ ಪಾಪಹರವು 1
ಮಂಗಳಾಂಗಿ ತುಳಸಿದೇವಿ ರಂಗಗಿರಿಯ ನೀವದೇವಿ
ಮಾಂಗಿರೀಶ ದಯಿತೆ ಮಹಿತೆ ಇಂಗಿತಾರ್ಥವೀವ ಮಾತೆ 2
ಬೃಂದಾವನ ದಿವ್ಯಸದನೆ ಇಂದೀವರ ಭವ್ಯವದನೆ
ಕುಂದಾವಳಿ ಸದೃಶರದನೆ ನಂದಾತ್ಮಜ ಮನಮೋಹನೆ 3
ಸರಸವಿರಸಭರಿತೆ ನಮಿತೆ ಪರಮಚತುರೆ ಸುರಸನ್ನುತೆ
ಮುರಳಿಗಾನಲಸಿತೆ ಮಾತೆ ವಂದೆ ಮಾಂಗಿರೀಶಸಹಿತೆ 4