ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಂದಿ ಬದುಕಿರ್ಯೋ ಪ ಹೊಂದಿ ಬದುಕಿರ್ಯೋ ಒಂದು ಮನದಲಿ | ಮಂದ ಹಾಸ ಮುಕುಂದನಾ | ಕುಂದರ ದನಾ ನಂದನಾ | ವಂದ್ಯನಾದ ಮುಕುಂದನಾ 1 ಕುರುಳ ಗೂದಲು ಸರಳ ಗೊರಳವ | ಗರಳಧರನುತ ಚರಣನಾ | ಸಾರ ಸಂಹರಣನಾ | ತರಳ ಗೊಲಿದ ಕರುಣನಾ 2 ಮರುಳು ಸುಯೋಧನ ಇರಲು ಏಳದೇ | ಉರುಳು ಗೆಡಹಿದ ವೀರನಾ | ಅರಳ ಪೂವಿನ ಹಾರನಾ | ಗರಳಧರ ಮದ ಹಾರನಾ 3 ಹಲ್ಲಿದರಿಗಳ ದಲ್ಲಣಾಗಿಹ | ಪುಲ್ಲಲೋಚನ ರಂಗನಾ | ಮಲ್ಲ ಚಾಣೂರ ಭಂಗನಾ | ಸಲ್ಲಲಿತ ಚಲ್ವಾಂಗನಾ 4 ಸಥಿಯ ನಡೆಸುವ ಇಂಗಿತರ ಮಹಿ | ಪತಿಯ ನಂದನ ಜೀವನಾ | ಸತತ ಭಕ್ತರ ಕಾವನಾ | ಪತಿತ ಪಾವನ ದೇವನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು