ಕೋರಬೇಡ ದುರ್ವಿಷಯಸುಖಗಳನು ಕೋತಿಮನವೆ ನೀನು ||ಪ||
ಯಾರಿದ್ದರೇನು ನಿನ್ನ ಯೋಗ್ಯತೆಯ
ಮೀರಿನಡಯಲಸಾಧ್ಯ ಶತಕಲ್ಪಕು ಅ.ಪ
ಕಷ್ಟ ಒದಗಲಿ ನಿಷ್ಠುರ ನುಡಿಯಲಿ ಕೆಟ್ಟವನಿವನೆನಲಿ
ಇಷ್ಟ ಬಂಧುಗಳು ಶತ್ರುಗಳಾಗಲಿ ಇಲ್ಲದೆ ನಿಂದಿಸಲಿ
ಹೊಟ್ಟೆತುಂಬ ಆಹಾರವಿಲ್ಲದಿರಲಿ ಹುಚ್ಚನೆಂದು ಬೈಯಲಿ
ಸಂಕಲ್ಪವು 1
ಬನ್ನ ಅನ್ಯರಂತೆ ತಾನಿರಬೇಕೆಂದಾಯಾಸ ಹೊಂದಬೇಡ
ತತ್ವನಂಬಬೇಡ | ಮೂಢಾ 2
ಪರಿಪರಿ ಸಂಕಟ ಬಂದರೂ ನೊಂದು ಪರರ ದೂಷಿಸಬೇಡ
ಸ್ಥಿರವೀ ಶರೀರವೆಂದು ನಂಬಿ ಛೀ ಎನಿಸಿಕೊಳ್ಳಬೇಡ
ತಿಳಿಯಲೊ ಮೂಢಾ 3