ಉದಯ ಕಾಲವಿದು ನಮ್ಮ ಪದುಮನಾಭನ
ಉದಯಕಾಲವಿದು ಪ
ಉದಯಕಾಲವಿದು ಪದುಮನಾಭನ ದಿವ್ಯ
ವಿಧವಿಧ ಸೃಷ್ಟಿಯ ಮುದದಿ ಸಾಗಿಸುವಂಥ ಅ.ಪ
ಪರಮ ಕರುಣಿ ದೇವ ತನ್ನ ಚರಣದಾಸರ ಕಾವ
ಮರವೆ ಮಾಯದೊಳು ಹೊರಳುತ ಒರಲುವ
ನರರಿಗರಿವನಿತ್ತು ವರವ ಪಾಲಿಸುವ 1
ಅನ್ನ ಆಹಾರವಿತ್ತು ಸೃಷ್ಟಿಯ ಭಿನ್ನವಿಲ್ಲದೆ ಪೊತ್ತು
ಬನ್ನಬಡುತ ಬಲು ಕುನ್ನಿಪ್ರಾಣಿಗಳ್ಗೆ
ಉನ್ನತ ಸುಖವಿತ್ತು ತನ್ನಂತೆ ನೋಡುವ 2
ಮಾಧವ ಸುಜನರ ಪಾಲಿಸುವ
ನಿಜಮನದೊಳು ತನ್ನ ಭಜಿಸುವ ಜನರಿಗೆ
ಸಾಯುಜ್ಯ ನೀಡುವ 3
ಯೋಗಿ ಜನರ ಪ್ರಿಯ ಕ್ಷೀರಸಾಗರಕನ್ಯೆಯೊಡೆಯ
ಬಾಗಿ ಸದೃಢದಿ ಸುರಾಗದಿ ಪಾಡುವ
ಭಾಗವತರ ನಿಜ ಯೋಗಕ್ಷೇಮ ಕೇಳ್ವ 4
ಶಾಮಸುಂದರಾಂಗ ಪುಣ್ಯನಾಮ ಕೋಮಲಾಂಗ
ಕಾಮಿತಜನಪೂರ್ಣ ಕಾಮಜನಕ ತ್ರಿ
ಭೂಮಿಗಧಿಕ ಮಮಸ್ವಾಮಿ ಶ್ರೀರಾಮ 5