ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಉನ್ನತ ಮಹಿಮೆಯನ್ನು ಬಣ್ಣಿಪ ಶಕ್ತಿ ಎನಗೆಂತು ಕರುಣಾರ್ಣವ ಪ ಅನ್ಯಕುಲದಲಿ ಜನಿಸಿ ಅನ್ಯ ಆಹಾರಗಳುಂಡು ಕುನ್ನಿಯಂತೆ ಕಳೆವೆ ದಿನವ ಅಭವ ಅ.ಪ ಶೋಧಿಸಿಶಾಸ್ತ್ರಪದ ಛೇದಿಸಿ ಬಣ್ಣಿಸಲೆ ಓದು ನಾ ಕಲಿತಿಲ್ಲವೋ ವೇದಪೂರ್ವಕಮಾಗಿ ಸಾಧನದಿ ಬಣ್ಣಿಸಲೆ ವೇದ ಎನಗೊಳುಪಿಲ್ಲವೋ ಸಾಧುವರ್ತನದ ಮಹಾದಾದಿಯಿಂ ಬಣ್ಣಿಸಲೆ ಸಾಧುಪಥ ಗುರ್ತಿಲ್ಲವೋ ಆದಿಮೂರುತಿ ನಿನ್ನ ಪಾದಪೊಗಳಲು ಒಂದು ಹಾದಿಗೊತ್ತೆನಗಿಲ್ಲವೋ 1 ದೃಢಮಾಗಿ ನಿನ್ನ ಸಮದೃಢ ಮಹಿಮೆ ಬಣ್ಣಿಸಲೆ ದೃಢಭಕ್ತಿಯೆನಗಿಲ್ಲವೋ ಎಡಬಿಡದೆ ಬಣ್ಣಿಸಲೆ ಪೊಡವಿಯೋಳ್ನಿನ್ನವರ ಒಡನಾಟ ಎನಗಿಲ್ಲವೋ ಕಡು ಗೂಢವಾಗಿ ನಿನ್ನಡಿಗಳನು ಬಣ್ಣಿಸಲೆ ಜಡಮತಿ ನಾ ಬಣ್ಣಿಪೆನೆ ಕಡೆಯಿಲ್ಲದ ತವಮಹಿಮೆ ಮೃಡ ಅಜರಿಗಸದಳವೋ ತಿಳಿವೋ 2 ಸುಗುಣಗುಣಾಂತ ನಿನ್ನ ಸುಗುಣಗಳ ಬಣ್ಣಿಸಲು ಸುಗುಣಗುಣ ಎನಗಿಲ್ಲವೋ ನಿಗಮಾತೀತನೆ ನಿನ್ನ ಗುಟ್ಟು ಬಣ್ಣಿಸಲೆ ನಿಗಮವ ನಾನರಿತಿಲ್ಲವೋ ಅಗಣಿತಮಹಿಮ ನಿನ್ನ ಹಗರಣದ ಮಹಿಮೆಯ ಬಗೆಬಲ್ಲವ ನಾನಲ್ಲವೋ ಪೊಗಳುವೆನು ಮಿಗಿಲೆನ್ನುತ ಸತತ3
--------------
ರಾಮದಾಸರು
ಹರಿವಾಸರದುಪವಾಸದ ಫಲವು ಕಂಡವರಿಗೆ ದೊರಕುವುದೆ ಪ. ಹಿರಿದು ಜನ್ಮಗಳಲಿ ಹರಿಯನಾರಾಧಿಪ ಪರಮ ಭಾಗವತರ ಭಕ್ತರಿಗಲ್ಲದೆ ಅ.ಪ. ಸ್ನಾನಸಂಧ್ಯಾನವು ಮೊದಲಾದ ಕರ್ಮ ನ್ಯೂನದ ಪಾಪಂಗಳು ದೀನತ್ವದಿಂದ ತುಚ್ಛರಕೈಯ ಹಿಡಿದ ದು ರ್ದಾನದ ಪಾಪಂಗಳು ಭಾನುಬಿಂಬವ ಕಂಡ ಹಿಮದಂತೆ ಚಿದಾನಂದವಾದ ವ್ರತಕೆ ಸರಿ ಬಾರದು 1 ಪರಸತಿಯರ ನೋಡಿ ಮನವಿಟ್ಟ ಪಾಪವು ಪರದೂಷಣೆಯ ಪಾಪವು ಪರಮಾತ್ಮನ ಹೊಗಳುವ ನಾಲಗೆಯಲ್ಲಿ ನರರ ಹೊಗಳುವ ಪಾಪವು ಪರ ವಸ್ತುಗಳನಪ- ಹರಿಸುವ ಪಾಪಂಗಳು ಕರಿ ಓಡುವಂತೆ ದುರಿತ ಕೋಟಿಗಳನು ಪರಿಹರಿಸುವ ಶ್ರೀ 2 ಆಡುವ ಅನೃತವಾಕ್ಯಗಳಿಂದ ಸಂಭವವಾಗುವ ಪಾಪಂಗಳು ನೋಡಿಕೊಳ್ಳದೆ ದುರಾನ್ನವನುಂಬ ದುರ್ದಾನದ ಪಾಪಂಗಳು ಮಾಡಬಾರದ ದಿನದಲಿ ಸ್ತ್ರೀಗೋಷ್ಠಿಯ ಮಾಡಿದ ಪಾಪಂಗಳು ಓಡುವುದಘಸಂಘ ಉತ್ತಮವಾಗಿಹ3 ಮತ್ತೆ ಈ ಬಹಳ ಪಾಪಗಳಿಗೆಲ್ಲ ತಾ ಪಕ್ಷ ಪ್ರಾಯಶ್ಚಿತ್ತವು ಉತ್ತಮವಾದ ವ್ರತಗಳಿಗೆಲ್ಲ ತಾ ಉತ್ತಮವೆನಿಸುವುದು ಚಿತ್ತಶುದ್ಧಿಯನಿತ್ತು ಜ್ಞಾನವೈರಾಗ್ಯದಿ ಭಕ್ತಿ ಮಾರ್ಗವನೀವುದು ಮುಕ್ತಿಗೆ ಸೋಪಾನವಾಗಿ ಭವಾಭ್ಧಿಯ ದಾಟಿಸಿ ಹರಿಯ ಸನ್ನಿಧಿಗೆ ದಾರಿಯನೀವ 4 ತೋರುವ ದಶಮಿ ದ್ವಾದಶಿಗಳು ಸಂಪುಟಾಕಾರದಿ ಹರಿದಿನವು ಮೂರುದಿನದ ವ್ರತ ನಾಲ್ಕು ಹೊತ್ತಿನ ಆಹಾರಗಳು ವರ್ಜಿತವು ಊರುದಾರಿಗಳ ನಡೆಯದೆ ತಾಂಬೂಲ ಚರ್ವಣಂಗಳೊರ್ಜಿತವು ಜಾಗರ ಮಾಡಿ ವ್ರತವಾಚರಿಸುವ 5 ಅತಿಶಯವಾದ ಶ್ರೀಹರಿದಿನದಿ ಪಿತೃತರ್ಪಣಗಳು ವಜ್ರ್ಯವು ಪ್ರತಿವರುಷದಲಿ ಆಚರಿಸುವ ತಾಯಿತಂದೆ ತಿಥಿಗಳೆಲ್ಲ ವಜ್ರ್ಯವು ಸತತವು ಮಾಡುವ ಯಜ್ಞಪುರುಷಗೆ ಆಹುತಿಗಳೆಲ್ಲ ವಜ್ರ್ಯವು ಇತರ ಭೋಗ ಕೃತ್ಯಗಳನೆಲ್ಲ ವರ್ಜಿತಮಾಡಿ ಈ ವ್ರತವನಾಚರಿಸುವ 6 ಹಲವು ವ್ರತಗಳಾಚರಿಸಿ ದಾನಂಗಳ ಹಲವು ಮಾಡಿದರೇನು ಹಲವು ಪುಣ್ಯತೀರ್ಥನದಿಯಲ್ಲಿ ಸ್ನಾನವÀ ಮುದದಿ ಮಾಡಿದರೇನು ಹಲವು ಪುರಾಣಂಗಳ ಹಲವು ಶಾಸ್ತ್ರಂಗಳ ಹಲವು ಕೇಳಿದರೇನು ಶ್ರೀಹಯವದನನ್ನ ದಿನಕೆ ಸರಿಬಾರದು 7
--------------
ವಾದಿರಾಜ