ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣಪತೇ - ಪಾಹಿ - ಗಣಪತೇ ಪ ಗಣಪತಿ ಪಾರ್ವತಿ ತನಯಾ | ಭಕ್ತಜನಕೆ ಕೊಡುವುದು ವಿನಯಾ | ಆಹಮನದೊಳು ನೀನಿಂತು | ಅನುಗಾಲ ಹರಿಗುಣಗಣಗಳ ಪೊಗಳುವ | ಮನವ ನೀ ಪಾಲಿಸೋ ಅ.ಪ. ಬಾಲೇಂದು ಮೌಳಿಯ ತನುಜ | ವರಶೈಲಜೆ ಶರೀರ ಮಲಜಾ | ಪುಟ್ಟಿಶ್ರೀಲೋಲ ಕೃಷ್ಣ ರುಕ್ಮಿಣಿಜ | ನೆಂದುಪೇಳುವರು ಮಾರನನುಜಾ | ಆಹಕಾಳಗದೊಳು ಬಲು | ಅಸುರರ ಅಸುಗಳಕೀಲಿಸುತಲಿ ಬಹು | ಭೂಭಾರ ನಿಳುಹಿದ 1 ಸುಜ್ಞ ಭಕ್ತಾಧೀನ ಗಣಪಾ | ಬಂದವಿಘ್ನಗಳ್ಹರಿಸುವೆ ಭೂಪ | ನೀನುಭಗ್ನ ಗೈಸೋ ಮನಸ್ತಾಪಾ | ಇಂಗಿತಜ್ಞ ಬೇಡುವೆ ತವ ಕೃಪಾ | ಆಹಮಗ್ನ ಮಾಡಿಸು ಮನ | ಮೊದಲಾದ ಕರುಣವಯಜ್ಞೇಶ ಶ್ರೀಹರಿ | ಪದದ್ವಯ ವನಜದಿ 2 ಸಿಂಧುರಾಸ್ಯನೆ ಬಹು ಗುಣ | ಪೂರ್ಣಮಂದರೋದ್ಧಾರಿಯೆ ಕರುಣ | ಪಾತ್ರನೆಂದು ಹೊಕ್ಕನೊ ತವ ಚರಣ | ಕಂದನೆಂದು ಕಾಯೆಲೊ ಬಹು ಕರುಣ | ಆಹನಂದ ನಂದನ ಗುರು | ಗೋವಿಂದ ವಿಠಲನಬಂಧುರ ಚರಣವಾ | ನಂದದಿ ತುತಿಪಂತೆ 3
--------------
ಗುರುಗೋವಿಂದವಿಠಲರು