(ಇ) ಲೋಕನೀತಿ
ಮಾಧವ ಎನಬಾರದೆ ಜೀವ
ಕಾಲ ಪ
ಆಚಿಂತೆ ಈ ಚಿಂತೆ ಎಲ್ಲಾ ಚಿಂತೆಯನು
ಕಿಂಚಿತ್ತು ಹೊತ್ತು ಬಂತೆಯಾದೆ ನಾನು ಅ.ಪ
ಪತಿಯ ಚಿಂತೆ ಪರಸತಿಯ ಚಿಂತೆ
ಅತಿಯಾದ ಮೋಹದ ಮಕ್ಕಳ ಚಿಂತೆ
ಪ್ರತಿದಿನ ತುತ್ತಿನ ಚೀಲದ ಚಿಂತೆ
ಮತ್ತೇನು ಅದಕಾಗಿ ಆಸ್ತಿಯ ಚಿಂತೆ 1
ಆಸ್ತಿಮಾಡಿದರೆ ಕಾಯುವ ಚಿಂತೆ
ಜಾಸ್ತಿ ಸೇರಿದರೆ ಕನಲುವ ಚಿಂತೆ
ಸುಸ್ತಿ ಬಡ್ಡಿಯಲಿ ಬೇಯುವ ಚಿಂತೆ
ಸುಸ್ತಾಗಿ ಸೊರಗುವ ನೋವಿನ ಚಿಂತೆ 2
ಬದುಕಿದರೂ ಚಿಂತೆ ಬಾಳಿದರೂ ಚಿಂತೆ
ಬದುಕ ಸಹಿಸದ ಮೂಢರಿಂದ ಚಿಂತೆ
ಮುದದಿ ಕಾಯುವ ಮಾಧವನ ಚಿಂತೆ
ಬಾಧಿಸದಲ್ಲೋ ಕೊಂಚವು ತಂದೆ 3
ಆ ಚಿಂತೆ ಈ ಚಿಂತೆ ಯಾಚಿಂತೆಯೊಳಗಿಂದ
ಆಚೆಗೆ ಎಳೆತಂದು ಮತಿಯನು ನೀಡೋ
ಅಚಿಂತ್ಯ ನಿನ್ನನೆ ಚಿಂತಿಸುವಂತೆನ್ನ
ನಿಶ್ಚಿಂತನಾಗಿಸೊ ಜಾಜಿಪುರೀಶ 4