ರಚ್ಚೆ ಕಟ್ಟೆ ಪುರಾಣ ರಾದ್ಧಾಂತವು -ಇದು ಪ
ಹುಚ್ಚುತನದಲಿ ನೀ | ಚೋಚ್ಚ ನುಡಿಗಳನಾಡುವುದು ಅ.ಪ
ನವನವ ಆಸ್ತಿಗಳೆಲ್ಲ | ಇವನ ಮನೆಗೆ ಸೇರಿ ಬಂತು 1
ಸೊಟ್ಟಮೂತಿ ನಾಗಪ್ಪನ ಸೋದರಿಯರು ಏನು ಹೇಳಲಿ 2
ಇವನಿಗೆ ಬಂತು
ಮತ್ತೆ ನಾವು ಬಡವರು ನಮಗೆಲ್ಲಿಂದ ಬಹುದು? 3
ದುರ್ಯೋಧನ ಯೋಗ್ಯ ಕುಂತೀತರಳರದೇ ಅನ್ಯಾಯ
ಕೃಷ್ಣನು ನೆರೆ ಮೋಸಗಾರನು ಭಾರತ ಕಥೆಯೆಂಬುವುದು4
ಮೋಸಗಾರರೀವೂರೆಲ್ಲ ಆಶೆ ಪಾತಕರು 5
ತಂಗಿ ಆಸ್ತಿ ಸೇರಿತಿವಗೆ ಭಂಗಿ ಕೋರ ವೆಂಕಟರಾಯ
ಮಂಗಿ ಸಂಗದಿಂದಲೀ ಕಮಂಗನಾನನು 6
ಮಧ್ವರಾಯನ ಮಗನ ಕಥೆ ಏನು ಹೇಳೋಣ 7
ಕಾಸಿದ್ದವರೇನು ಮಾಡಿದರೂ ಮಾಡಬಹುದು 8
ದಾರಿಹೋಕರೆಲ್ಲ ಕೂಡಿ ಭಾರಿ ಭಾರಿ ಮಾತುಗಳಾಡಿ
ಸೂರೆಗೊಂಬುವರು ಪಾಪ ಶರಧಿಯನ್ನು 9
ಶರಣರ ದೂರಿಪಾತಕಕ್ಕೆ ಭಾಗಿಗಳಹರು 10