ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಾವ ಬಗೆಯಿಂದ ನೀನೆ ರಕ್ಷಿಸುವೆಯೊದÉೀವಾದಿ ದೇವ ಶ್ರೀಕೃಷ್ಣ ನೀನೆನ್ನನು ಪ ಹಿಂದಿನ ಕಾಲವ ವ್ಯರ್ಥವಾಗಿ ಕಳೆದೆನೊಮುಂದಿನ ಗತಿ ಚಿಂತೆ ಲೇಶವಿಲ್ಲವೊಸಂದು ಹೋಯಿತು ದೇಹದೊಳಗಿನ ಬಲವೆಲ್ಲಮಂದವಾದವು ಇಂದ್ರಿಯ ಗತಿಗಳೆಲ್ಲ 1 ಆಸೆಯೆಂಬುದು ಅಜನ ಲೋಕಕ್ಕೆ ಮುಟ್ಟುತಿದೆಕಾಸು ಹೋದರೆ ಕ್ಲೇಶವಾಗುತ್ತಿದೆಮೋಸಮಾಡಿ ಮೃತ್ಯು ಬರುವುದ ನಾನರಿಯೆವಾಸುದೇವನೆ ಎನ್ನ ದಯಮಾಡಿ ಸಲಹೊ2 ಜನರು ದೇಹವ ಬಿಟ್ಟು ಪೋಪುದ ನಾ ಕಂಡುಎನ್ನ ದೇಹ ಸ್ಥಿರವೆಂದು ತಿಳಿದುಕೊಂಡುದಾನ ಧರ್ಮ ಮೊದಲಾದ ಹರಿಯ ನೇಮವ ಬಿಟ್ಟುಹೀನ ವಿಷಯಂಗಳಿಗೆರಗುವೆ ಸಿರಿಕೃಷ್ಣ3
--------------
ವ್ಯಾಸರಾಯರು
ಏನಿದು ಬಯಲ ಪಾಶ ನೋಡಿದರಿಲ್ಲಿ ಏನು ಹುರುಡುಗಾಣೆನೊ ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ ಪ. ನೀರಬೊಬ್ಬುಳಿಯಂದದ ದೇಹವ ನೆಚ್ಚಿ ದೂರ ಹೊತ್ತೆನು ಹರಿಯೆ ಯಾರು ಎನಗೆ ಸರಿಯಿಲ್ಲೆಂಬಹಂ- ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ ಸದ್ಗತಿ ತೋರೊ 1 ಬಡವರಾಧಾರಿ ಕೇಳೊ ಸಂಸಾರದ ಮಡುವಿನೊಳಗೆ ಧುಮುಕಿ ಕಡೆಹಾಯಿಸೊ ಕೈಪಿಡಿದು ಕೃಪೆಯೊಳೆನ್ನ ದಡವ ಸೆÉೀರಿಸೊ ಜಗದೊಡೆಯ ಶ್ರಿರಂಗಯ್ಯ 2 ಸುತ್ತೆಲ್ಲ ಬಂಧು ಬಳಗ ನವಮಾಸದಿ ಹೊತ್ತು ಪಡೆದ ಜನನಿ ಪುತ್ರ ಸಹೋದರರ ಘಳಿಗ್ಯಗಲಲಾರದೆ ಮತ್ತೆ ಯಮನವರೊಯ್ವಾಗ ಯಾರು ಸಂಗಡ ಇಲ್ಲ 3 ಆಸೆಯೆಂಬುದು ಬಿಡದು ಈ ಭುವನದೊಳ್ ಲೇಸುಗಾಣೆನು ಹರಿಯೆ ಭಾಷೆಯ ಕೊಡು ಮುಂದೆ ಜನುಮಬಾರದ ಹಾಗೆ ಈಶಸನ್ನುತ ಹೆಳವನಕಟ್ಟೆರಂಗಯ್ಯ 4
--------------
ಹೆಳವನಕಟ್ಟೆ ಗಿರಿಯಮ್ಮ
ಬೇಗದಿ ಮುಕುಂದ ಪ. ಮಾಡುವ ಭಾಗ್ಯ ಕರುಣಿಸೊ ಕೃಪೆಯಿಂದ ಅ.ಪ. ನಿರುತ ನಿನ್ನೊಳಗಿಹವು ಸರಸಿಜ ಭವಮುಖರು ನಿನ್ನಪಾಂಗಮಸ್ಮರಣೆಯಿಂದಲಿ ಬಾಳ್ವರು ಪೀತಾಂಬರದಿಸರಿರವ ರೂಪಿಯಾಗಿ ಹೊಂದಿರುವಳು ನಗುತ 1 ನಿತ್ಯ ಸಂತೃಪ್ತರೂಪ ಸಕಲ ಲೋಕ ವ್ಯಾಪ್ತನಾಗಿರುವ ಭೂಪ ಜ್ಞಪ್ತಿ ಮಾತ್ರದಿ ಎನಗೆ ಒಲಿವ ಪರಮಾಪ್ತ ನೀನಿರುತಿರಲು ನೆನೆದು ಮರುಳಾದೆನು ವಿಲಿಪ್ತಿಯ ಸಲಿಸು 2 ತೋರದೊ ವರದ ನಿನ್ನನು ಮರೆದ ಕಾಯುವರ ಕಾಣೆ ನಿನ್ನಾಣೆ ಸಲಹೊ ಪುರಂದರಗೊಲಿದ 3 ಧರ್ಮಮಾರ್ಗವ ತೊರೆದು ಶೃತ್ಯದಿತ ಸತ್ಕರ್ಮಗಳ ಮರೆದು ನಿರ್ಮಲರನು ಜರಿದು ನೀಚರನೆಲ್ಲ ಭರ್ಮಗೋಸುಗ ತರಿದು ಸುಖವ ನೀಗಿ ನಾ ಬಾಗಿ ಕೂರ್ಮನಂತಿರುವೆ 4 ಆಸೆಯೆಂಬುದು ಎನ್ನನು ನಾನಾವಿಧ ಕ್ಷೇಶಬಡಿಸುವುದಿನ್ನು ಘಾಸಿಗೆ ಒಳಗಾದೆನು ಕೈಯಲಿ ಒಂದು ಕಾಸಿಲ್ಲದವನಾದೆನು ಶ್ರೀಶ ನೀ ಕರುಣಿಸಿನ್ನು ಸದ್ಗತಿಯನ್ನು ಸುಜನಪಹಾಸಗೊಳಿಸದೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮರವೆ ಮರವೆ ಮಾಡಿತೋಅಂತರಂಗದಲಿ ಭೋರೆಂದು ತುಂಬಿಅಂತು ಅಂತೆನಲು ಕೂಡದು ಪ್ರಣವನಾದ ಪ ಹೊಟ್ಟೆಗುಣ್ಣುವುದನೆ ಮರೆಸಿತು ಈ ಪ್ರಣವನಾದಮುಟ್ಟು ಚಟ್ಟನೆ ಮರೆಸಿತುಕೆಟ್ಟಕೇಡನೇನ ಹೇಳಲಿಉಟ್ಟ ಬಟ್ಟೆಯ ಅರಿವೇ ಇಲ್ಲ 1 ಆಸೆಯೆಂಬುದ ಮರೆಸಿತು ಈ ಪ್ರಣವನಾದದ್ವೇಷವೆಂಬುದು ತೊರೆಸಿತುನಾಶವಾಯಿತು ಜಪತಪವೆಲ್ಲಮೋಸವೆನಗಿಂತು ಮಾಡಿತು2 ಧ್ಯಾನವೆಂಬುದು ಮರೆಸಿತು ಈ ಪ್ರಣವನಾದಓಂಕಾರವೆಂಬುದು ಕಲಿಸಿತುಜ್ಞಾನಮೂರುತಿ ಚಿದಾನಂದತಾನೆ ತಾನೆ ತಾನೆ ಎಂಬ 3
--------------
ಚಿದಾನಂದ ಅವಧೂತರು
ಯೋಗಿ ಮತ್ತೆಲ್ಲಿದ್ದರೇನುಫುಲ್ಲ ಲೋಚನನರಿತು ಪುರುಷೋತ್ತಮನಾದ ಬಳಿಕ ಪ ಈಷಣ ತ್ರಯವಳಿದು ಇಷ್ಟ ಕಾಮ್ಯಗಳಳಿದುದೋಷವೆಂಬುದ ನಳಿದು ದ್ವೇಷವಳಿದುಆಸೆಯೆಂಬುದು ಅಳಿದು ಅಷ್ಟಪಾಶಗಳಳಿದುಈಶ ಸರ್ವೇಶವಿಭು ತಾನಾಗಿರುವವನು 1 ಮನದ ವರ್ತನೆಯಳಿದು ದುಷ್ಟಮದಗಳ ಕಳೆದುಕನಸು ಜಾಗೃತಿ ಸುಷುಪ್ತಿ ಕರ್ಮವಳಿದುಜನನ ಮರಣಗಳಳಿದು ಜಠರ ಬಾಧೆಗಳಳಿದುಘನ ಪುರುಷನಾಗಿ ಘನ ತಾನಾಗಿ ಇರುವನವನು 2 ಪತಿ ಚಿದಾನಂದ ಮೂರುತಿ ತಾನಾದವನು3
--------------
ಚಿದಾನಂದ ಅವಧೂತರು
ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯಎನ್ನ ಗುಣದೋಷಗಳ ಎಣಿಸಬೇಡಯ್ಯ ಪಬಾಲ್ಯದಲಿ ಕೆಲವು ದಿನ ಬಿರಿದೆ ಹೋಯಿತು ಹೊತ್ತುಮೇಲೆ ಯೌವನಮದದಿ ಮುಂದರಿಯದೆ ||ಸ್ಥೂಲ ಸಂಸಾರದಲಿ ಸಿಲುಕಿ ಬಳಲಿದೆ ನಾನುಪಾಲಿಸೈ ಪರಮಾತ್ಮ ಭಕುತಿಯನು ಕೊಟ್ಟು 1ಆಸೆಯೆಂಬುದು ಅಜನ ಲೋಕ ಮುಟ್ಟುತಲಿದೆಬೇಸರದೆ ಸ್ತ್ರೀಯರಲಿ ಬುದ್ದಿಯೆನಗೆ ||ವಾಸುದೇವನೆ ನಿನ್ನ ಪೂಜೆಗೆಯ್ದವನಲ್ಲಕೇಶವನೆ ಕ್ಲೇಶವನು ನಾಶ ಮಾಡಯ್ಯ 2ಈ ತೆರದಿ ಕಾಲವನು ಕಳೆದೆ ನಾನಿಂದಿರೇಶಭೀತಿ ಮೋಹದಿ ಙ್ಞÕನರಹಿತನಾದೆ ||ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆದಾತಶ್ರೀಪುರಂದರವಿಠಲ ದಯಮಾಡೈ3
--------------
ಪುರಂದರದಾಸರು
ಬರಿದೆ ಹೋಯಿತು ಹೊತ್ತು - ಹರಿಯೆ |ಶರೀರವೆ ಸ್ಥಿರವೆಂದು ಮರೆತು ನಾನಿದ್ದೆನೆ ಪಆಸೆಯೆಂಬುದು ಎನ್ನ ಕ್ಲೇಶಪಡಿಸುತಿದೆ |ಗಾಸಿಯಾದೆನೊ ಹರಿಯೆ ||ಶೇಷಶಯನನು ನೀನು ನಿನ್ನ ನಂಬಿದೆ ನಾನು |ನಾಶವಾಯಿತು ದಿನ ಮೋಸ ಹೋದೆನಯ್ಯ 1ಸತಿಸುತರೆಂದೆಂಬ ಅತಿ ಭ್ರಾಂತಿಗೊಳಗಾದೆ |ಮತಿಹೀನ ನಾನಾದೆನೊ ||ಸತತ ನಿರಂತರ ಜಡದೇಹ ನಾನಾದೆ |ರತಿಗೆಳೆಯುತಿದೆ ಮನಸು ಹರಿಸರ್ವೋತ್ತಮನೆ 2ಪರರ ಸೇವೆಯ ಮಾಡಿ ಪರರನೆ ಕೊಂಡಾಡಿ |ಮರೆತೆನೊ ನಿನ್ನ ಧ್ಯಾನ |ಕರುಣದಿಂದಲಿ ಎನ್ನ ಕಾಯ್ದು ನೀ ಸಲಹಯ್ಯ |ಪುರಂದರವಿಠಲ ನಿನ್ನನೆ ನಂಬಿದೆ ನಾನು3
--------------
ಪುರಂದರದಾಸರು