ಬೇಡಿದರೆ ನೀಡುವುದೇನು ಹಿರಿದೆ ಗೋವಿಂದ
ಬೇಡದೆ ನೀಡೆ ನಿನ್ನಂತಸ್ತಿಗತಿಚೆಂದ ಪ
ನೀಡುವನು ನೀನಿರಲು ಬೇಡಿಕೆಗೆ ಕೊನೆಯುಂಟೆ
ಬೇಡಿ ಬೇಸತ್ತರೂ ಆಸೆಯಿಂಗುವುದುಂಟೆ
ಬೇಡಿದಮಣಿ ನೂರುಜನುಮ ಸಾಕಹುದುಂಟೆ
ಬೇಡದೇ ಭಜಿಪವಗೆ ಹುಟ್ಟು ಸಾವುಗಳುಂಟೆ 1
ಹಿಂದೆ ನೀನಿತ್ತುದನು ಇಂದುಣುತಲಿಹೆವಯ್ಯ
ಮುಂದೆ ನಾನುಣಲೇನು ಬೇಡವಯ್ಯ
ಸಂದಿರ್ಪುವೈ ಸಾಲಸೋಲಂಗಳೇನಯ್ಯ
ಮುಂದೇನು ಬೇಡ ಮಾಂಗಿರಿವಾಸ ರಂಗಯ್ಯ 2