ದಾಸನಾಗಬೇಕು ಮನದಲಿ ಆಸೆಯಿಂಗಬೇಕು ಪ
ಮೋಸಮೆಂಬುದಂಕುರಿಸದ ಅದರ
ವಾಸನೆಯಂಟದ ಮಾನಸದಲಿ ಹರಿಅ.ಪ
ಅತಿಮಾತಾಡುವ ಸತಿಯಿರಬೇಕು
ಖತಿಯಿಂತೆರಳುವ ನೆಂಟರು ಬೇಕು
ಹಿತವನು ಬಯಸದ ಸುತರೂ ಬೇಕು
ಸತತಮಿವೆಲ್ಲರ ಸಹಿಸಿ ಭಜನೆಗೈವ 1
ತಣಿವಿಲ್ಲದೆ ತಿಂಬ ಅಣುಗರು ಬೇಕು
ಹಣವ ಕೊಡೆಂಬುವ ಅಳಿಯರು ಬೇಕು
ಋಣಬಾಧೆಗಳೊಳು ಕೊರಗಲು ಬೇಕು
[ಅಣು ಅಣು ಕಾಡುವ ಸಂಸಾರಕಂಟದೆ] 2
ಮಾನಸವ ಬಿಗಿಹಿಡಿದಿರಬೇಕು
ಧ್ಯಾನದೊಳಾತ್ಮಶಾಂತಿಯು ಬರಬೇಕು
ಶ್ರೀನಿವಾಸನೇ ಶರಣೆನಬೇಕು
ಜ್ಞಾನದಿ ಮಾಂಗಿರಿರಂಗನ ಪಾದದ 3