(1) ಸತಿ-ಪತಿ ಭಾವದ ಸ್ತುತಿಗಳು (ಜಾವಡಿಗಳು)
ಎಂದಿಗೆ ತೀರಿದೆ ಸುಂದರನಾಯಕಿ
ಅಂಗಜ ಬಾಣದ ಅತುರವನ್ನೂ ಪ
ಚಂದ್ರಮುಖಿಯೇ ನೀ ನಾದಿನ ಹೇಳಲ್
ಬಂದೆನುನಾನಹುದೇ ಭಾವಕರನ್ನೇ
ಕುಂದುಗಳನೀಪರಿ ಉಸುರುವೆ ಉಚಿತವೆ
ಸಂದಣಿಯಾಗೆನ್ನೊಳಿಂದಿನ ಕಾಲಯೆಂದಿಗೆ 1
ಬಲ್ಲೆನು ನಿನ್ನಂ ಭಾವದ ಸೊಲ್ಲಂ
ಬೆಲ್ಲದ ಮಾತನಾಡಿ ಕಳುಹಿಪೆನೇಂ
ಬೊಲ್ಲಿದಿಗೆ ಸಾಕುಬಿಡು ಇಂಪಿನ ಕವಚತೊಡು
ಸಲ್ಲಿದೆ ಸುಂಕವ ಸಮ್ಮತಿಯಿಂದಾ 2
ಮಾರನು ಬಂದೂ ಮನದೊಳು ನಿಂದೂ
ದಾರಿಯನು ತಪ್ಪಿಸಿ ಧಣಿಸುವ ಕಾಣೆ
ಓರದೆ ಕೋರಿದ ಕಾರ್ಯವ
ತೀರಿಸೆ ಕಾಂಕಳು ನೀನಾಗಿ ಕಾಮಶಾಸ್ತ್ರವಂ 3
ಈ ಸುಖಸಂಪದ ಈಶ್ವರ ಬಲ್ಲಂ
ಆಸೆಯ ತೋರಿ ನೀ ಮೋಸವಗೆಯ್ವೆ
ದಾಸನು ವಂದಿಪ ಸುಖತೋರಿದೆ
ದೇಶಿಕನಲೆ ತುಲಸಿರಾಮಾ 4