ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ದೂರಮಾಡುವಿ ಎನ್ನ ಬಂಧನವನು ಸಿಂಧುಶಯನ ತಂದೆ ಈ ಭವದಂದುಗವನು ಸಹಿಸಲಾರೆ ಪ ಸತಿಪತಿಯ ರತಿಯ ಕಲಹದಿ ಪತನಾದಿಂದ್ರಿಯಿಂದೆ ನಾನು ಪೃಥಿವಿಮೇಲೆ ಬಿದ್ದು ಘನ ವ್ಯಥೆಯಬಡುವ ತಾಪತ್ರಯವ 1 ಮಂದಭಾಗ್ಯನಾಗಿ ಆಗಿ ನಾನಾ ಸಂದಿನೊಳಗೆ ಬಂದು ಬಂದು ಮಂದಿಸೇವೆಗೈದು ನರಕ ಬಂಧರುರುಳವಂಥ ಕೆಡುಕು 2 ಆಸೆದೆಳಸಿ ಪರರಾಸ್ತಿ ಮೋಸತನದಿ ಕದಿಸಿ ಯಮನ ಪಾಶದೊಳಗೆ ನೂಕುವಂಥ ಹೇಸಿ ಎನ್ನ ನಾಶಬುದ್ಧಿ 3 ಅವನಿಯೊಳು ಜನಿಸಿಬಿಟ್ಟ ಬವಣೆ ನೆನೆಸಿ ನೆನೆಸಿ ಎನಗೆ ಸವೆಯದಯ್ಯೋ ದು:ಖ ಈ ದು ರ್ಭವ ಪಾಪ ಸಂಕಟ 4 ದಾಸಜನರ ಪ್ರಾಣಪ್ರಿಯ ಶ್ರೀಶ ಶ್ರೀರಾಮ ನಿಮ್ಮ ಚರಣ ಧ್ಯಾಸ ಮರೆಗೆ ಬಳಲಿಸುವ ಹೇಸಿಭವದ ವಾಸನವ 5
--------------
ರಾಮದಾಸರು