ಒಟ್ಟು 8 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸೆಗೆ ಮೇರೆಯನು ನಿರ್ಮಿಸಿದಿಯಿಲ್ಲವೋ ಬೇಸರವೆ ಇಲ್ಲಿದಕೆ ಎಷ್ಟಾದರಕಟ ಪ ಅನ್ನ ಸಿಗದ್ಹೊತ್ತಿನಲಿ ಅನ್ನ ಸಿಕ್ಕರೆ ಸಾಕು ಅನ್ಯಮೇನೊಲ್ಲೆಂದು ನಿನ್ನ ಕೋರುವುದು ಅನ್ನ ಚೆನ್ನಾಗಿ ಸಿಗಲು ತಣ್ಣಗಿರದುಂಡುಟ್ಟು ಹೊನ್ನು ಚಿನ್ನಕೆ ಸೋತು ಬನ್ನಬಡಿವುದಭವ 1 ಕಡುಕ್ಷೇತ್ರ ಮಾನ್ಯತನಗಡವಿ ತುಂಬಿರ್ದರು ಮಿಡುಕುವುದು ತಡೆಯದೆ ಎಡಬಲದಲಿರುವ ಬಡವರಾಸೆಗೆ ಕಂಡು ಪಡೆವ ಲವಲವಿಕೆಯಿಂ ಬಿಡದೆ ಅವರಿಗೆ ಕೆಡುಕು ಹುಡುಕುವುದು ಹರಿಯೆ 2 ಪೊಡವಿಯೆಲ್ಲನು ಒಂದೇ ಕೊಡೆಯಿಂದಾಳಲು ಮತ್ತು ಪಡೆಯಲಿಚ್ಛಿಪುದಿತರ ಪೊಡವಿಪರ ರಾಜ್ಯ ಸುಡುಗಾಡು ಕಡೆತನಕ ಸುಡುಸುಡೀ ಆಸೆಯನು ಬಿಡಿಸೆನ್ನ ರಕ್ಷಿಸೈ ಒಡೆಯ ಶ್ರೀರಾಮ 3
--------------
ರಾಮದಾಸರು
ಆಸೆಯೆನಗಿಲ್ಲ ಸರ್ವೇಶ ನಿನಬಿಟ್ಟು ವಾಸುಕೀಶಯನ ಜಗದೀಶ ನಿನ್ಹೊರತೆನಗೆ ಪ ನಿಗಮದಾಸೆಗೆ ಹೋಗಿ ನೀರೊಳಗೆ ಮುಳುಗಿ ನೀ ಸುಧೆಯ ಆಸೆಗೆ ಹೋಗಿ ಸುರರ ಕೈ ಸಿಕ್ಕು ನೆಲದ ಆಸೆಗೆ ಮಣ್ಣು ಬಗೆದÀು ಶ್ರಮವನೆ ಬಟ್ಟು ಕೊರಳ ಹಾರದ ಆಸೆ(ಗೆ) ಕರುಳ ಬಗೆವೊದೆ ಕಷ್ಟ1 ಭೂಮಿಯಲಿ ಭಾಳಾಸೆ ಭುವನ ವ್ಯಾಪಿಸಿಕೊಂಡು ಕಾಮಧೇನಿ (ನುವಿ?)ನ ಆಸೆ ಕಾರ್ತವೀರ್ಯಾರ್ಜುನನ ಕೊಂದು ಸಿರಿಯ ಸೌಂದರ್ಯದಾಸೆ ಶಿವನೆಬಲ್ಲನು ನೆಗಹಿ ಉದರದಾಸೆಗೆ ಅಸುರೆಜಗಿದು ವಿಷಮೊಲೆನುಂಡಿ 2 ತ್ರಿಪುರ ಸತಿಯರ ಆಸೆಗ್ವಸನವಿಲ್ಲದೆ ತಿರುಗಿ ಅಶ್ವದಲಿ ಆಸೆ ಅತಿ ಕಲಿಭಂಜನನೆನಿಸಿ ಈಸುಪರಿ ಆಸೆ ಭೀಮೇಶ ಕೃಷ್ಣಗೆ ಇರಲು ನಾಶರಹಿತನೆ ನಿನ್ನ ನಾಮವಿದ್ದರೆ ಸಾಕು 3
--------------
ಹರಪನಹಳ್ಳಿಭೀಮವ್ವ
ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿಮೀನು ಗಾಳವÀ ನುಂಗಿ ಮೋಸಹೋದ ತೆರನಂತೆ ಧ್ರುವ ಸತಿ ನನ್ನ ಸುತರೆಂದೆನಿಸಿಹೊನ್ನುಗಳ ಗಳಿಸಿ ಹೆಚ್ಚಾಗಿ ಹೋರ್ಯಾಡಿಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದುಅನ್ನ ಮೊದಲು ಕಾಣದೆ ಅಂತರ ಪಿಶಾಚಿಯಂತೆ 1 ಬಲುವೋದಿಕೆಯಲ್ಲಿ ಬಲ್ಲವರೆನಿಸಬೇಕೆನುತಹಲವು ಬುದ್ಧಿಯಲ್ಲಿ ಹಿರ್ರನೆ ಹಿಗ್ಗುತಮಲಿನ ಮನಸಿನಜ್ಞಾನದಲಿ ತಾನರಿಯದೆ 2 ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿಹೊಗದಲ್ಲಿ ಹೊಗುವರು ಹೂ ಬಿಟ್ಟು ತಿಳಿಯರುಖಗವಾಹನ ಮುದ್ದು ರಂಗವಿಠಲನ ನಾಮ ಸ್ಮರಿಸಲುವಿಗಡ ಸಂಸಾರ ಹಗರಣ ನೀರಗುಳ್ಳೆಯಂತೆ3
--------------
ಶ್ರೀಪಾದರಾಜರು
ಕವಿಗಳು ಪೊಗಳುವ ವಿವರವ ಪೇಳುವೆ ಪ ಅವನಿಯೊಳ್ ಕೃಷ್ಣನು ಅವತರಿಸುವ ಕಥೆ ಅ.ಪ ಸುರರೊಡೆಯನ ದಿವ್ಯ ತರುವನು ಬಲದಲಿ ಸರಸಿಜನಾಭನು ಧರೆಗೆ ತರುವನೆಂದು ಅರಿಯುತ ವರ ಸುಮನಸರೆಲ್ಲ ಕರಗಳಿಂದಲಿ ಸುಮ ಸುರಿದರೆಂದೆನುತಲಿ 1 ಅಂಬುಜನಾಭನು ಶಿಶುವಾಗಿರಲವನ ಸಂಭ್ರಮದಲಿ ತನ್ನ ವಶಗೊಳುವುದಕೆ ತುಂಬುರು ಗಂಧರ್ವರು ಪಾಡಿದರು ರಂಭೆ ಊರ್ವಶಿಯರು ನೃತ್ಯ ಮಾಡಿದರೆಂದು2 ವಾಸುದೇವನು ತನ್ನ ಶಿಶುವೆಂದರಿಯುತ ವಸುದೇವನ ಬಲು ಆಸೆಗೆ ನಗುತಲಿ ವಸುಗಳು ದೇವರು ವಾಸುದೇವನು ತಮ್ಮ ಕೂಸು ಏಕಲ್ಲವೆಂದು ಹರುಷ ಪೊಂದಿದರೆಂದು 3 ಇಂದುವದನನ ಅಂದವ ನೋಡುತ ಚಂದ್ರಕಲೆಯರ್ಧ ಕುಂದಿದನೆನ್ನುತ ಸುಂದರಕೃಷ್ಣನು ಅಂದು ತನ್ನಯ ಕುಲ ದಿಂದ ಬಂದಿರೆ ಬಲು ನಂದ ಪೊಂದಿದನೆಂದು 4 ಪನ್ನಗಶಯನನು ಸಣ್ಣ ಕೂಸಾಗಿರೆ ತನ್ನ ವಿಭುತನಕೆ ಇನ್ನು ಕುಂದಿಲ್ಲವೆಂದು ಉನ್ನತ ಗಗನ ಪ್ರಸನ್ನನಾಗಿ ದಿವ್ಯ ಸಣ್ಣ ತಾರೆಗಳಿಂದ ಬೆಡಗು ತೋರಿದ ಕಥೆ 5
--------------
ವಿದ್ಯಾಪ್ರಸನ್ನತೀರ್ಥರು
ಪಾದ ಒಮ್ಮಿಗಾದರು ನೆನೆದು ಕರ್ಮ ಪೋಪುವುದು ಎಂತೊ ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ ಕಮ್ಮಗೋಲನ ಬದುಕೀಲಿ ರಂಗಾ ಪ ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು ಬ್ಬಾಳುತನದಿಂದ ಕುಳಿತು ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ ಹೇಳು ಇನ್ನೊಮ್ಮೆ ಎನುತಾ ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು ಪೇಳುವೆನು ಕೈತಿರುವುತಾ ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು ಕೀಳು ವಾರ್ತೆಯ ತಾಹದೊ ಮನಸು1 ಧರೆಯನಾಳುವವನ ಸಮ್ಮುಖದಲ್ಲಿ ನಿಂದು ಕರವೆರಡು ನೊಸಲಿಗೆ ಚಾಚಿ ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ ಸರಿ ಮಿಗಿಲು ಯಿಲ್ಲವೆಂದೂ ಮರಿಯದಲೆ ಸಲಹುವದು ಮಹಾತ್ಮನಹುದೆಂದು ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು ಮರಪು ಬಂದೊದಗಿಹದೊ ರಂಗಾ2 ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು ಬಿಸಿಲು ಬೆಳದಿಂಗಳೆನ್ನದೆ ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ ಕುಸಿದು ಕನಿಷ್ಠನಾಗಿ ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ ಹಿಸುಕಿ ಹಿಂಸೆಗಳ ಬಿಡಿಸಿ ಹಸನಾಗಿ ನಿನ್ನ ನಾಮಾಮೃತವನುಣದೆ ನಾ ಮುಸುರೆ ಎಂಜಲು ಸವಿದೆನೊ ರಂಗಾ 3 ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ ಅನ್ನಿಗರ ಕೊಂಡಾಡುತ ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ ಎನ್ನ ಕುಲ ಉದ್ಧಾರಕಾ ನಾಕ ಬಗೆಯಿಂದ ಮರಿಯದಲೆ ಕುನ್ನಿಯಂತೆ ಕಾಯಿದೆನೊ ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ 4 ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ ಇಂದಿರಾರಮಣ ಶರಣಾಗತವತ್ಸಲ ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ ಎಂದು ಸ್ಮರಿಸದೆ ಘೋರ ಅಂಧ ಕೂಪದಿ ಹೊರಳಿದೆ ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ ತಂದೆ ನೀನೆ ಕಾವುದೋ ಹರಿಯೆ 5
--------------
ವಿಜಯದಾಸ
ಸಂತೋಷವೆಂತು ನಾ ವರ್ಣಿಪೆನು ಎನ್ನಂತರಂಗವ ಸಂತೋಷವೆಂತು ನಾ ವರ್ಣಿಪೆನು ಪ ಕಂತೆ ಜೀವನವÀ ತೊರೆದು ಸಂತತ ನಿನ್ನ ಭಜಿಸುವ ಅ.ಪ ಲೇಸು ಜೀವನದ ಆಸೆಗೆ ಬೆರಗಿ ಮೋಸದಿ ದಿನ ದಿನನೂರಾರು ಮಿತ್ರ ಬಾಂಧವ ಜ ಸಾಸಿರ ದುಷ್ಕøತಿಗಳನು ರಚಿಸಿ ಕರವ ನೀಡಿದೆ 1 ನರು ಯಾರೆನ್ನವುದಕೆ ಕಾರಣರಾದರೋ ನಾನರಿಯೆ ನೀರಜಾಕ್ಷನೆ ನಿನ್ನಯ ಸಾರಸೇವೆಯನು ಮಾಡಿದ 2 ಅನ್ನವನರ್ಜಿಸುವ ಬಗೆ ಹೊರತು ಇನ್ನೊಂದನರಿಯದೆ ಸಣ್ಣತನದಲಿ ದಿನ ಕಳೆಯುತಿರೆ ಮಾನ್ಯ ಯೋಗವನರುಹಿ ಪ್ರಸನ್ನ ಶ್ರೀಹರಿಯ ನುತಿಸುವ 3
--------------
ವಿದ್ಯಾಪ್ರಸನ್ನತೀರ್ಥರು
ಹಸಿವಾಗುತಿದೆಯೆನೆಗೆ ಬಸವಳಿದೆನೆ ಹೀಗೆ ಪ. ಹಸಿವು ಹೆಚ್ಚಿತು ಅಕಟಾ ತೃಷೆಯಿಂದೆನಗತಿಕಾಟ ಪುಸಿಯಲ್ಲಿದು ಒಣಗಿದ ಕಾಷ್ಟಂ ಅ.ಪ. ಅಂಗಜ ಜನಕ ಶ್ರೀರಂಗನಾಯಕ ನಿಮ್ಮ ಸಂಗತಾಪದಿಂ ತಪಿಸುತಲಿ 1 ವಾಸುದೇವನೆ ನಿಮ್ಮ ಸಾಸಿರ ನಾಮಾಮೃತವ ಲೇಸಾಗಿ ಕುಡಿಯದೆ ಆಸೆಗೆ ಸಿಲುಕುತ ಮೋಸವೋದೆನೋ ಮರುಳನಂದದಿ 2 [ಬಂದ] ಅರಿಯದ ಈ ಪಸುಳೆಯನು ಪರಿಭಾವಿಸಿ ನೋಡಿನ್ನು ವರಶೇಷಗಿರಿದೊರೆ ವರದ ನಿನ್ನಡಿದಾವರೆಗಾರಡಿಯಂತಿರಿಸೆನ್ನಂ3
--------------
ನಂಜನಗೂಡು ತಿರುಮಲಾಂಬಾ