ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯತಿಗಳು, ದಾಸರು ಆಸೆಗಾರ ನಾನು ದಾಸಯ್ಯ ನಿನ್ನ ಧ್ಯಾ ನಿಸಿ ಬಂದೆನು ದಾಸಯ್ಯ ಪ ದೋಷದೂರನೆ ಎನ್ನ ಆಸೆಯ ತೀರಿಸಿ ಪೋಷಿಸು ಬೇಗನೆ ದಾಸಯ್ಯ ಅ.ಪ ಬಡತನಗಳು ಎನ್ನ ದಾಸಯ್ಯ ಇನ್ನು ಕಡೆತನಕಳಿಯಲೋ ದಾಸಯ್ಯ ಗಡಕಡಿ ಜಡಭವದೆಡರು ತೊಡರುಗಳು ಕೆಡದಪದವಿ ನೀಡು ದಾಸಯ್ಯ 1 ನುಡಿಯಂತೆ ನಡೆಕೊಡು ದಾಸಯ್ಯೆನ್ನ ಒಡಲ ಜಡರುತೊಳಿ ದಾಸಯ್ಯ ಕಡಿದು ಹಾಕಲು ಎನ್ನ ಪಿಡಿದು ನಿನ್ನಡಿಭಕ್ತಿ ಬಿಡದ ಮನವು ಕೊಡು ದಾಸಯ್ಯ 2 ಸುಂದರ ಶ್ರೀರಾಮ ದಾಸಯ್ಯ ಎನ್ನ ತಂದೆ ತಾಯಿ ನೀನೆ ದಾಸಯ್ಯ ಕುಂದುವ ಜಗದೊಳು ಬಂಧನಪಡಿಸದೆ ಕುಂದದ ಸುಖ ನೀಡು ದಾಸಯ್ಯ 3
--------------
ರಾಮದಾಸರು
ಶೋಧಿಸದೆ ನಿಜ ಬೋಧಿಪೆನೆಂಬ ಈ ಹಾದಿಯೆಲ್ಲಿ ಕಲಿತಿರೆಲೊ ಎಲೋ ಆಧರವರಿಯದ ವಾದಿಮೂರ್ಖರಿಗೆ ಬೋಧ ಸಿದ್ಧಿಪುದೇನೆಲೋ ಎಲೋ ಪ ಋತುಯಿಲ್ಲದವಳಲ್ಲಿ ರತಿಕಲಹ ಬೆಳೆಸಲು ಸುತರ ಪಡೆವಳೇನೆಲೋ ಎಲೋ ಅತಿಮಂದಮತಿಗಳಿಗಹಿತವ ಬೋಧಿಸೆ ಸು ಗತಿಗೆ ಬಾಹರೇನೆಲೋ ಎಲೋ ಕತ್ತೆಗೆ ಮುತ್ತಿನ ಕಂಟಲಿ ಹೇರಲು ಅರ್ತೀತೆ ಬೆಲೆಯನು ಎಲೋ ಎಲೋ ಕೃತ್ರಿಮರಿಗಾತ್ಮದ ಸ್ಮøತಿಯ ಬೋಧಿಸೆ ದು ರ್ಗತಿಯು ತಪ್ಪೀತೇನೆಲೋ ಎಲೋ 1 ಕೋಣನ ಮುಂದೆ ವೇಣುಬಾರಿಸಲು ಅನಂದತಾಳೀತೇನೆಲೋ ಎಲೋ ಶ್ವಾನನ ಮುಂದೆ ಸುಗಾನ ಮಾಡಲದು ಧ್ಯಾನಕ್ಕೆ ತಂದೀತೇನೆಲೋ ಎಲೋ ಹೀನಸಂಸಾರಿಗೆ ದಾನಿಗಾಂಭೀರ್ಯದ ಖೂನ ತಿಳಿದೀತೇನೆಲೋ ಎಲೋ ಜ್ಞಾನಬೋಧಾಮೃತ ಅಜ್ಞಾನಿಗೆ ಉಸುರಲು ಹೀನಭವ ಬಿಟ್ಟೇತೇನೆಲೋ ಎಲೋ 2 ಆಸೆಗಾರಗೆ ಮಹ ಶಾಶ್ವತ ಪೇಳಲು ಲೇಸಾಗಿ ತೋರೀತೇನಲೋ ಎಲೋ ದಾಸರ ದೂಷಿಪ ನಾಶಮತಿಗೆ ಯಮ ಪಾಶವು ತೊಲಗೀತೇನೆಲೋ ಎಲೋ ಈಶನೊಲಿಮಿಲ್ಲದೆ ನಿಜಬೋಧಲಂಬಿಸಿ ಮುಕ್ತಿ ಅಸನ ಸಿಕ್ಕೀತೇನೆಲೋ ಎಲೋ ಹೇಸಿಜನರಿಗೆಲ್ಲ ಶ್ರೀಶ ಶ್ರೀರಾಮನ ದಾಸತ್ವ ದೊರಕಿತೇನೆಲೋ ಎಲೋ 3
--------------
ರಾಮದಾಸರು