ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಗಲೊ ಇನ್ನಾವಾಗಲೊ ಈ ತನುವು ಪೋಗದಿರದು ಪ. ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನನಯನ ಅ.ಪ. ಎಂಬತ್ತು ನಾಲ್ಕು ಲಕ್ಷ ಯೋನಿಗಳಲಿ ಬಂದು ಅಂಬುಜಾಕ್ಷನೊಂದೆನಯ್ಯ ಅಂದಂದು ಮಾಡಿದ ಅಘದಿಕುಂಭೀಪಾಕ ಮೊದಲಾದ ಕುತ್ಸ್ಸಿತ ನರಕದಿ ಬಿದ್ದುಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯಕಥನ 1 ಓದನ ಮಾತ್ರಕ್ಕೆ ಸಭೆಯೊಳುವಾದಿಸುವೆ ವೇದಶಾಸ್ತ್ರ ಉಪನ್ಯಾಸಂಗಳನು ಮಾಡುವೆಕ್ರೋಧರಹಿತನಾಗಿ ಅವರು ಕೊಡಲು ಕೊಂಡಾಡುವೆಆದರಿಸದಿದ್ದರವರ ಬೈದು ಬರುವೆ ಖಿನ್ನನಾಗಿ2 ದೇಶದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ ಶ್ರೀನಿ-ವಾಸ ನಿನ್ನ ಪೂಜಿಸದೆ ಮೋಸಹೋದೆನಯ್ಯ ನಾನು3 ಸ್ನಾನಮೌನಂಗಳನು ಮಾಡುವೆ ಸಕಲ ಜನರ ಮುಂದೆಮಾನವರಿಲ್ಲದಾಗಲೆ ಮೌನವಿಲ್ಲ ಮಂತ್ರವಿಲ್ಲಜ್ಞಾನವ ಪೇಳುವೆ ಮೋಸಕಟ್ಟ[ಲೆ]ಯ ಮಾಡಿಕೊಂಡುಧ್ಯಾನಿಸದೆ ಹೊಟ್ಟೆಯನ್ನು ಹೊರೆವೆ ನಿನ್ನ ಮರೆವೆ4 ಕರ್ಣ ಕೇಳದು ಅನ್ಯವಾರ್ತೆ[ಗೆ] ಹೊತ್ತುಸಾಲದುಇನ್ನು ಹೇಸಿಕೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು 5 ಕಂಬುಕಂಧರ ನಿನ್ನ ನೆನೆಯದೆ 6 ವೃದ್ಧನಾದೆನು ಪಲ್ಗಳೆಲ್ಲ ಬಿದ್ದವು ಕಣ್ಣುಕಾಣಬಾರದುಎದ್ದು ನಿಲ್ಲಲಾರೆನಯ್ಯ ಉದ್ಧರಿಸೊ ಹಯವದನತಿದ್ದಿ ಮನವ ನಿನ್ನ ಪಾದಪದ್ಮವ ನೆನೆವಂತೆ ಮಾಡೊಪೊದ್ದಿದವರ ಪೊರೆವ ಕರುಣಾಸಿಂಧು ಎನಗೆ ನೀನೆ ಬಂಧು 7
--------------
ವಾದಿರಾಜ
ಭಂಡನಾದೆ ಸಂಸಾರಕೊಂಡದೊಳಗೆ ಬಿದ್ದು ಕಂಡುಕಾಣದಂತಿರುವರೇ ಪುಂಡರೀಕನಯನ ಪ ಅಶÀನ ವಸನಕ್ಕಾಗಿ ದೆಸೆಗೆಟ್ಟು ಬಾಯ್ಬಿಡುತ ಅಸುವ ಕರದೊಳ್ಪಿಡಿದು ವಸುಧೆಯ ಜನರ ಬಸವಳಿದು ಬೇಡಲು ಕಣ್ಣೆಸಿದು ಬೈಯಲು ತಲೆಬಾ ಗಿಸಿಕೊಂಡು ನಿಂದೆ ಹರಿ ಉಸುರಲಳವಲ್ಲ 1 ರೊಕ್ಕದ ಆಸೆಗಾಗಿಕ್ಕೆಲದ ಜನರನ್ನು ತರ್ಕಿಸದೆ ದೈನ್ಯದಿಂ ಚಿಕ್ಕಮಗ ನಾ ಎನುತ ಫಕ್ಕನೆ ಕೈತಾಳನಿಕ್ಕುವರು ನಗಲು ಮಹ ದು:ಖದಿಂ ತಿರುಗಿದೆನು ಬಿಕ್ಕಿಬಿಕ್ಕಳುತ 2 ಯರ ಮೋಹಿಸಿ ದಂಡಿಸಿದೆ ಮನೆಸತಿಯ ಕಂಡವರು ತಿದ್ದಿದರು ಚಂಡಿತನವಿಡದೆ ಕಂಡವರ ಅರ್ಥವನು ಮನೆಸೇರಿಸಿ ಬಂಡೆದ್ದು ಜನರೊಳಗೆ ಮಂಡೆಯೆತ್ತದೆಹೋದೆ 3 ತಪದಿಂದ ಹರಿಪಾದ ಜಪಿಸುವುದ ಮರೆದು ನಾ ಕೃಪಣತ್ವಜನಸೇವೆ ಅಪರೂಪಗೈದೆ ಚಪಲತ್ವತನದಿಂದ ಅಪಹರಿಸಿ ಪರರರ್ಥ ಸುಪಥಕ್ಕೆ ದೂರಾಗಿ ಅಪರಾಧಿಯಾದೆ4 ಕದ್ದು ತಿಂದೆ ನೆರಹೊರೆಯ ಬಿದ್ದೆ ದುರ್ಬವಣೆಯೊಳು ಬದ್ಧನಾಗಿ ಧರೆಮೇಲೆ ಹದ್ದಿನಂತೆ ಬಾಳ್ದೆ ತಿದ್ದಿ ನೀ ಎನ್ನ ತಪ್ಪುಬುದ್ಧಿಯನು ಕಲಿಸೆನ್ನೊ ಳಿದ್ದು ಪೊರೆ ದಯದಿಂದ ಮುದ್ದು ಶ್ರೀರಾಮ 5
--------------
ರಾಮದಾಸರು
ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ಪ ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ಅ ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ - ರಿಕ್ತಹಸ್ತದಿಂದ ಮನೆಯ ಸೇರುವೆ - ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ - ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ 1 ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ - ದುರಾಸೆಯನ್ನುಮನಸಿನಲ್ಲಿ ಮಡಗಿಕೊಂಡು ಕುದಿವೆನೊಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ2 ಮಾಧವ - ರಂಗಯ್ಯ ರಂಗ3
--------------
ಕನಕದಾಸ