ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ಧನ್ಯ ನಾ ಧನ್ಯ ನಾ ಧನ್ಯನಿಂದು ಪ ಹೇ ದಯಾನಿಧೇ ನಿನ್ನ ಪಾದಾನುಗ್ರಹದಿಂದ ಅ.ಪ. ಏತರವ ನಾನೆಂದುದಾಸೀನ ಮಾಡದೆಲೆ ಲೇಸು ಮಮತೆಯ ಕೋರಿ ಈ ಸ್ಥಳಕೆ ಬಂದಿ ಆಸುರೀ ಭಾವವನು ನಾಶಗೊಳಿಸಿ ಎನ್ನ ನೀ ಸಲಹಿದೆಯೋ ಜಗದೀಶ ನಿರುಪಮ ಕರುಣಿ 1 ಸತ್ವಗುಣ ಪ್ರಚುರರಲಿ ನೀ ತೋರುವುದಕ್ಕಿಂತ ಅತ್ಯಧಿಕ ವಾತ್ಸಲ್ಯವೆನ್ನೊಳಗೆ ತೋರ್ಪೆ ಕರ್ತೃ ನೀನೆಂಬ ತತ್ವ ಮನಸಿಗೆ ತಂದೆ ಭಕ್ತವಾತ್ಸಲ್ಯಕ್ಕಿದು ಕುರುಹಲ್ಲವೇ ದೇವ 2 ಸುರಲೋಕಕ್ಕಿಂತಧಿಕ ಪದವಿ ಎನಗಿತ್ತೆ ನಿರುತಲೆನ್ನಯ ಬೆನ್ನು ಕಾಯುತಲಿರುವೆ ಕರುಣಿಗೆಣೆಗಾಣೆ ಕರಿಗಿರೀಶನೇ ನಿನ್ನ ಸ್ಮರಣೆಯನನವರತ ಇರುವಂತೆ ಕೃಪೆಮಾಡೋ 3
--------------
ವರಾವಾಣಿರಾಮರಾಯದಾಸರು
ನಿತ್ಯ ನೂತನ ಮಹಿಮಭೃತ್ಯನನು ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ ಅ.ಪ. ವಿತ್ತ ಕರ್ತು ನೀನಾಗಿರಲುಆರ್ತರುದ್ಧರ ಕಾರ್ಯ | ಪೂರ್ತಿಗೊಳಿಸೋ 1 ಉದಧಿ ವಿಧಿ ಜನಕ ವಿಶ್ವೇಶ | ಮುದ ಮುನಿಯ ಸದ್ವಂದ್ಯವದಗಿ ವರಪ್ರದನಾಗಿ | ಮುದವನ್ನೆ ಬೀರೋ 2 ಯೇಸೊ ಜನ್ಮದ ಪುಣ್ಯ | ರಾಶಿ ವದಗಿತೊ ಇವಗೆಆಶಿಸುವ ಹರಿದಾಸ್ಯ | ವಾಸವಾನುಜನೇ ಆಸುರೀ ಭಾವಗಳ | ನಾಶನವ ಗೈಯ್ಯುತ್ತಪೋಷಿಸುವುದಿವನ ಹರಿ | ದಾಸ್ಯ ಕರುಣಿಸುತಾ 3 ನಾನು ನನ್ನದು ಎಂಬ | ಹೀನ ಮತಿಯನೆ ಕಡಿದುದಾಸವಾಂತಕ ಸಲಹೊ | ಜ್ಞಾನ ಪ್ರದನಾಗೀಮೌನಿ ಮಧ್ವರ ಮತದಿ | ಸಾನು ಕೂಲಿಸಿ ದೀಕ್ಷೆಮಾನನಿಧಿ ಗುಣಪೂರ್ಣ | ನೀನಾಗಿ ಪೊರೆಯೋ 4 ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ಸರ್ವೇಶ | ಸರ್ವಸಮ ಮೂರ್ತೇಗುರ್ವಂತರಾತ್ಮಕನೆ | ದರ್ವಿಜೀವಿಯ ಕಾಯೊದುರ್ವಿ ಭಾವ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ರಾಮ ರಮಾರಮ ರಾಮ ಶ್ರೀರಾಮ ಪ ರಾಮ ಸೀತಾರಾಮ ರಾಮ ಜಯರಾಮ ಅ.ಪ. ಶ್ರೀ ರಘುವಂಶ ಲಲಾಮನೆ ರಾಮ ತಾರಕ ಮಂಗಳ ರಾಮನೆ ರಾಮ ನೀರದ ನಿರ್ಮಲ ಶ್ಯಾಮನೆ ರಾಮ ಸಾರಸಲೋಚನ ಸೌಮ್ಯನೆ ರಾಮ 1 ಕೌಸಲ್ಯದೇವಿ ಕುಮಾರಕ ರಾಮ ಕೋಸಲ ದೇಶಾನಂದಕ ರಾಮ ಆಸುರೀ ತಾಟಕ ಶಿಕ್ಷಕ ರಾಮ ಕೌಶಿಕ ಯಜ್ಞ ಸಂರಕ್ಷಕ ರಾಮ 2 ಮುನಿಪತಿ ಶಾಪ ವಿಮೋಚಕ ರಾಮ ಕಾರ್ಮುಕ ಭಂಜಕ ರಾಮ ಜನಕ ಸುತಾನಂದ ವರ್ಧಕ ರಾಮ ಅನುಪಮ ಲೀಲಾದ್ಯೋತಕ ರಾಮ 3 ಸತ್ಯಪರಾಕ್ರಮ ಸಾತ್ವಿಕ ರಾಮ ಪಿತೃವಾಕ್ಯ ಪರಿಪಾಲಕ ರಾಮ ಉತ್ತಮ ಚರಿತಾದರ್ಶಕ ರಾಮ ಚಿತ್ರಕೂಟಾದ್ರಿ ನಿವಾಸಕ ರಾಮ 4 ಕಾಕುತ್ಥವಂಶ ಸುಧಾರಕ ರಾಮ ಲೋಕೇಶ ಲೋಕ ಮನೋಹರ ರಾಮ ಶ್ರೀಕರಾಶ್ರಿತ ಜನ ಮಂದಾರ ರಾಮ ಶ್ರೀ ಕರಿಗಿರೀಶ ಸುಂದರ ರಾಮ 5
--------------
ವರಾವಾಣಿರಾಮರಾಯದಾಸರು
ಸರಸಿಜಾಸನ ಮೊದಲು ಸ್ತಂಭ ಪರ್ಯಂತವು ಚರಚರಾತ್ಮಕ ಜಗವು ಎಲ್ಲವು ಪ ಪರತರನಾದ ಯಾವಾತನಾಧೀನವೋ ಆ ಹರಿಯೇ ಬಲವು ನಿನಗೆ ಎನಗೆ ಮತ್ತೆಲ್ಲರಿಗೆ ಅ.ಪ. ಕಾಲ ಉರುಕ್ರತು ಭಾಸುರತೇಜ ಓಜಸು ಸತ್ವನೊ ಬಲು ಶಕ್ತನೊ ಸರ್ವಜಗತ್ಸøಷ್ಟಿ ಸ್ಥಿತಿ ಲಯಕಾರನೊ ಆ ಸರ್ವೇಶÀನ ಬಿಟ್ಟು ಬಲವಾವುದಿನ್ನಯ್ಯಾ 1 ಆರು ವರ್ಗಗಳೆಂಬ ವೈರಿಗಳ್ ಕಳ್ಳರಂತೆ ಸೇರಿಕೊಂಡಿಹರು ಶರೀರದೊಳು ಗಾರು ಮಾಡುವರವರಗಲ್ಲದೆ ಧರೆಯಲ್ಲಿ ಭೂರಿ ಜಯಿಸಿದೆನೆಂಬ ಗರ್ವ ಸಲ್ಲುವುದೇನೊ 2 ನಿನ್ನ ಆಸುರೀಭಾವ ಇನ್ನಾದರೂ ಬಿಟ್ಟು ಘನ್ನಮಹಿಮ ಕರಿಗಿರೀಶನೊಳ್ ಮನವ | ಚೆನ್ನಾಗಿ ಕಲಿಸಿ ನೀ ಸಮಚಿತ್ತನಾದೊಡೆ ಇನ್ನು ನಿನಗೆ ವೈರಿಗಳು ಯಾರು ಇಹರಯ್ಯಾ 3
--------------
ವರಾವಾಣಿರಾಮರಾಯದಾಸರು
ಪ್ರಜೋತ್ಪತ್ತಿ ಸಂವತ್ಸರ ಸ್ತೋತ್ರ148ರಾಜ ರಾಜೇಶ್ವರಗೆ ರಾಜರಾಜೇಶ್ವರಿ ಪತಿಗೆರಾಜೀವಭವಪಿತಗೆ ಶರಣು ನಮೋ ಶ್ರೀಪದ್ಮನಾಭನಿಗೆಪಪ್ರಭವಾದಿ ಷಷ್ಠಿ ಸಂವತ್ಸರದಿ ಪ್ರಾಬಲ್ಯ ಪೆಚ್ಚಿವುದು ಈ ವರುಷಸುಪ್ರಜೋತ್ಪತ್ತಿ sಸಾಧು ಕ್ಷೇಮಕರ ಯೋಜನೆಗಳಿಗೆ ಸುಸಂಸ್ಕøತರುಪ್ರಾರಂಭಿಸುವುದಕೆ ಅನುಕೂಲ ಅಧಿಕಾರವರ್ಗವುಈ ರೀತಿ ತಿಳಿವುದು 1ಸಂವತ್ಸರ ರಾಜ ಸೂರ್ಯ ಮಂತ್ರಿಯೂ ಸಹ ತಂದತರ್ಯಾಮಿಸೂರಿಪ್ರಾಪ್ಯಘೃಣಿಯುಸರ್ವವಿಧದಲ್ಲು ದಯೆ ಪಾಲಿಸುವನವನಾಯಕರೊಳು ಸಹ ಇದ್ದುಸರ್ವೇಶ ಶ್ರೀಪ ಪದ್ಮನಾಭನು ಸ್ಮರಿಸುವವರ ಸುರಧೇನುವು 2ಸುಖಪೂರ್ಣ ಚಿನ್ಮಯನು ನಿತ್ಯತೃಪ್ತನುಪಜÕನ್ಯನೊಳುಇದ್ದು ಮಳೆಗರೆವಶ್ರೀಹರಿ ಅರ್ಕವಿಧು ಗ್ರಹನಕ್ಷತ್ರಗಳೊಳ್ಇದ್ದು ಜ್ಯೋತಿಹರಿಬೆಳಕುಕೊಡುವ ಮಕ್ಕಳು ಮೊಮ್ಮಕ್ಕಳು ಸುಖವೀವ ಶ್ರೀರಮೇಶನುವೇದನಾಯಕಿ ಎಂಬ ಉಮೆಯರಸನ ಸಂಗಮೇಶ್ವರೊಳಿದ್ದು 3ಸರ್ವವಾಂಛಿತವೀವ ಸರ್ವಸ್ಥ ಲಕ್ಷ್ಮೀರಮಣ ಸರ್ವೋತ್ತಮನುಸರ್ವಕಲ್ಯಾಣ ಸುಗುಣಾರ್ಣವನು ನಿದÉರ್ೂೀಷನುವಾಂಛಿüಸುವವರು ಪರವಿತ್ತಸ್ಥೇಯಪರನಿಂದಾ ವ್ಯಭಿಚಾರರೇತಸ್ಸÀ್ಸಂಗಮ ತ್ಯಜಿಸಲೇಬೇಕು 4ಬಾಲ ಮತ್ತು ಪ್ರೌಢ ವಿದ್ಯಾರ್ಥಿಗಳಿಗೆ ದೈವಭಕ್ತಿಮತ್ತು ಸಾಧುನೀತಿಗಳಪಾಠಗಳ ಬೋಧಿಸುವುದು ಅಧಿಕಾರವರ್ಗದವರು ಮಾಡಲೇಬೇಕುಇಳೆಯಲ್ಲಿ ಪ್ರಜಾಕ್ಷೇಮ ಅಭಿವೃದ್ಧಿ ಆಗಲಿಕ್ಕೆ ಇದುಉಪಾಯ ಹರಿದಯದಿ 5ವಸುಂಧರೆಯಲ್ಲಿ ಇನ್ನು ಬೆಳೆಯುವುದು ಪ್ರಜಾ ಉಪಯೋಗಆಗಿ ಮಿಕ್ಕದ್ದೇ ಪರದೇಶಕೆ ಕೊಡಬಹುದುಆಸುರೀ ಸಂಪತ್ತು ಬೆಳಸದೆ ದೈವಿ ಸಂಪತ್ತೇ ಗುರಿಯಾಗಿ ಸರ್ವರುತಮ್ಮ ತಮ್ಮ ಸಮಯಗಳ ನೀತಿಗಳ ಆಚರಿಸಲುರಾಷ್ಟ್ರ ಲೋಕಗಳಿಗೆ ಲಾಭ 6ಎನ್ನ ಮಾತುಗಳಲ್ಲ ಇವು ಕ್ಷೇಮಕರ ಪ್ರಜೋತ್ಪತ್ತಿಸ್ವಾಮಿಶ್ರೀಪದ್ಮನಾಭ ಶ್ರೀನಿವಾಸ ನುಡಿಸಿದವುಎನ್ನನ್ನು ಎನ್ನವರನ್ನು ಸರ್ವಲೋಕಜನರನ್ನುರಕ್ಷಿಸಲಿ ಶ್ರೀಹರಿ ಸರ್ವದಾ 7
--------------
ಪ್ರಸನ್ನ ಶ್ರೀನಿವಾಸದಾಸರು