ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರ್ಣಿಸಲಳವೆ ಕರುಣಾಳು ಗುರುವರ ನಿಮ್ಮ ವರ್ಣವರ್ಣದ ಚರಿತೆ ಗುಣಗಣಗಳ ಪ. ವರ್ಣಪ್ರತಿಪಾದ್ಯ ದೇವತೆಗಳಿಗೆ ಅಳವಲ್ಲ ಇನ್ನಿದನು ಪಾಮರರು ಅರಿಯುವರೆ ಜಗದಿ ಅ.ಪ. ಪ್ರತಿಪ್ರತಿ ಕಲ್ಪದಲಿ ಅತಿಶಯದ ತಪಚರಿಸಿ ಪತಿತಪಾವನ ಹರಿಯ ಮನ ಮೆಚ್ಚಿಸಿ ಕ್ಷಿತಿಯೊಳಗೆ ಅವತರಿಸಿ ದೇವಾಂಶರೆಂದೆನಿಸಿ ಪತಿತರನು ಪಾವನವಗೊಳಿಪ ಘನಮಹಿಮ 1 ಭಕ್ತರು ಕರೆದಲ್ಲಿ ಆಸಕ್ತಿಯಿಂ ಬಂದು ಯುಕ್ತಯುಕ್ತಗಳಿಂದ ತತ್ವಗಳನರುಹಿ ಮುಕ್ತಿಗೊಡೆಯನ ಮಾರ್ಗ ಮುಕ್ತಾರ್ಥ ಜನಕರುಹಿ ಮುಕ್ತಿಪಥ ಸವಿತೋರ್ವ ಶಕ್ತಿ ಮಹಿಮೆಗಳ 2 ಪಾದ ಪದ್ಮಸುತ ತಂದೆ ಮುದ್ದು ಮೋಹನದಾಸರಾಯರೆಂದೆನಿಸಿ ಮಧ್ವಮತಸಾರಗಳ ಹೀರಿ ಮಕರಂದವನು ಸಿದ್ಧಿಗೊಳಿಸಿ ಸುಜನಕೀವ ಶ್ರೀ ಗುರುವೆ3 ಕರಿಗಿರಿ ನರಹರಿಯ ಚರಣಕಮಲ ಧ್ಯಾನ ಅರಘಳಿಗೆ ಬಿಡದೆ ಮನಮಂದಿರದಿ ಸ್ಮರಿಪ ಕರುಣಜಲನಿಧಿಯೆ ನಿಮ್ಮ ಮೊರೆಹೊಕ್ಕವರ ಕಾಯ್ವ ಪರಮಪ್ರಿಯರೆಂತೆಂಬ ಬಿರುದುಳ್ಳ ಗುರುವೇ 4 ಕಮಲಾಂತ ಪ್ರೀತ ಶ್ರೀ ಕಮಲನಾಭನ ಪಾದ ಕಮಲ ಮನದಲಿ ಸ್ಮರಿಪ ಕಮನೀಯ ಗಾತ್ರ ಕಮಲಾಕ್ಷ ಗೋಪಾಲಕೃಷ್ಣವಿಠ್ಠಲನ ಪದ ಕಮಲ ಮನದಲಿ ತೋರಿ ಕೃಪೆಯಗೈಯ್ಯುವುದು 5
--------------
ಅಂಬಾಬಾಯಿ