ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಭಕ್ತನೆವೆ ಧನ್ಯನು ಬಲು ಮಾನ್ಯನು ಪ ಗುರುದಯ ಸಂಗಡಿಯನು ಹಿಡಿದಿಹನು | ತರಣೋಪಾಯವ ಕೂಡಿದಾ ನಲಿದಾಡಿದಾ 1 ಅನ್ಯ ಮಾರ್ಗವ ನೋಡನು ತಾ ಕೂಡನು | ತನ್ನ ನಿಷ್ಠೆಯೊಳಾಡುವಾ ಗತಿ ಬೇಡುವಾ 2 ಗುರು ಮಾತೇ ಮಂತ್ರ ವೆಂಬನು | ಸವಿ ದುಂಬನು | ಗುರು ಸೇವೆಯಲಿ ಬಾಳುವಾ ಅದೇ ಕೇಳುವಾ 3 ಪುಂಡಲೀಕನ ಭಕ್ತಿಯಾ | ಆಸಕ್ತಿಯಾ | ಕಂಡು ತಾನೆವೆ ಬಂದನು ಮುಕುಂದನು 4 ಸಾರಥಿ | ನೆರೆ ಭಕ್ತಿ ಕೀಲ ಬೋಧನಾ ಹೇಳಿದನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಾಲ ಹರಿ ವಿಠಲ ನೀ ಪಾಲಿಸಿವಳಾ ಪ ಪಾಪೌಘಗಳ ಕಳೆದು ಸುಪವಿತ್ರಳನೆ ಮಾಡಿಕೈ ಪಿಡಿದು ಪೊರೆಯಿವಳ | ಗೋಪಾಲ ಬಾಲ ಅ.ಪ. ನಿನ್ನ ಸೇವಿಸೆ ದಾಸ | ಘನ್ನ ದೀಕ್ಷೆಯ ಮನದಿಕನ್ಯೆ ಬಹು ಭಕ್ತಿಯಲಿ | ಬಿನ್ನವಿಸಿ ಇಹಳೊಮನ್ಯು ಸೂಕ್ತೋದಿತನೆ | ಚೆನ್ನ ತೈಜಸನಾಗಿಇನ್ನು ಪೇಳ್ದಂಕಿತವ | ಕನ್ಯೆ ಗಿತ್ತಿಹನೋ 1 ಪತಿಸೇವೆ ದೊರಕಿಸುತ | ಪತಿವ್ರತೆಯಳೆಂದೆನಿಸಿಅತುಳ ವೈಭವ ತೋರಿ | ಹಿತದಿಂದ ಪೊರೆಯೋವ್ರತತಿ ಜಾಸನ ಪಿತನೆ | ಗತಿಗೋತ್ರ ನೀನೆನಿಸಿಸುತೆಸಮಳ ಪೊರೆವುದಕೆ | ಮತಿ ಮಾಡೊ ಹರಿಯೇ 2 ತಾರತಮ್ಯ ಜ್ಞಾನ ಮೂರೆರಡು ಭೇದಗಳಸಾರತತ್ವಗಳುರುಹಿ | ಸಾರತಮ ನಿನ್ನಾಪಾರುಗಾಣದ ಮಹಿಮೆ | ಚಾರುಕೀರ್ತಿಸುವಂತೆತೋರೊ ಸನ್ಮಾರ್ಗವನು | ವಾರಿನಿಧಿ ಶಯ್ಯಾ 3 ಹರಿಗುರೂ ಸದ್ಭಕ್ತಿ | ಹಿರಿಯರಲಿ ಆಸಕ್ತಿಸರ್ವ ಕಾರ್ಯವು ಹರಿಯ ವರಸೇವೆಯೆಂಬಾವರಮತಿಯ ಕರುಣಿಸುತ | ಹರಿಯು ತಾನಿತ್ತುದನಹರುಷದಲಿ ಉಂಬಂಥ | ಅರಿವು ಕೊಡು ಸತತ 4 ಭಾವಜಾರಿಯ ತಾತ | ಪಾವಮಾನಿಯ ಪ್ರೀತಕೇವಲಾನಂದಮಯ | ಜೀವ ಪರತಂತ್ರಾಈ ವಿಧವು ಇರಲಾಗಿ | ನೀವೊಲಿಯಲಿನ್ಯಾರುಕಾವರನು ಕಾಣೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪ್ರಸನ್ನವಿಠಲ ಪಾಲಿಸಿವನ ಪ ಅಸತ್ಯದಲಿ ಮನವಿಡದೆ ಆಸಕ್ತಿ ನಿನ್ನಲ್ಲಿ ಕೊಟ್ಟು ಅ.ಪ. ದೃಢÀ ನಿನ್ನ ಭಕ್ತರಲಿ ಕೊಡುಭಕ್ತಿ ವಿರಕ್ತಿ ದೃಢ ಜ್ಞಾನ ನಿನ್ನಲ್ಲಿ ಬಿಡದೆ ನಿತ್ಯ ಮಡದಿ ಮಕ್ಕಳ ಕೂಡಿ ನಿನ್ನ ಸೇವೆ ಸಲ್ಲಿಸಲಯ್ಯ ಕಡಲಸುತೆ ಶ್ರೀ ರಮಣ ಬೆಂಬಲನು ನೀನಾಗು 1 ಸಜ್ಜನರ ಪದಧೂಳಿ ಆಗಿರಲಿ ಎಂದೆಂದು ದುರ್ಜನರ ಸಹವಾಸ ಕೊಡಬೇಡವಯ್ಯ ಬೊಜ್ಜೆಯಲಿ ಮೂರ್ಜಗವ ಪೊತ್ತ ಮಹಾತ್ಮ ಇವನ ಹೆಚ್ಚಾಗಿ ಪೊರಿ ಬಿಡದೆ ಅಚ್ಚ ಮಾರ್ಗದಿ ಇಟ್ಟು 2 ನಿನ್ನ ನಾಮಾಮೃತ ಸತತ ಸುಖ ಸವಿಯಲಿ ಸ್ವಾಮಿ ಬನ್ನ ಬಡಿಸಲಿ ಬೇಡ ತರಳನಿವನು ಉನ್ನತೋನ್ನತ ಮಹಿಮ ಜಯೇಶವಿಠಲ ಮನ್ನಿಧಿ ನೀನೆಂದು ಪ್ರಾರ್ಥಿಸುವೆ ಕೈಪಿಡಿದು 3
--------------
ಜಯೇಶವಿಠಲ
ಲಕ್ಷ್ಮೀ ವೆಂಕಟೇಶ ವಿಠಲ | ರಕ್ಷಿಸೋ ಇವಳಾ ಪ ವಿಶ್ವ ವ್ಯಾಪಕನೇ ಅ.ಪ. ಪುಟ್ಟಿ ಸತ್ಕುಲದಲ್ಲಿ | ತೊಟ್ಟು ಸತ್ಸಿದ್ಧಾಂತ ಇಷ್ಟ ಪಡುತಿಹಳಯ್ಯ | ಕಷ್ಟದಾಸತ್ವಾಇಷ್ಟ ಮೂರುತಿ ನೀನು | ತೈಜಸೀ ರೂಪದಲಿಸ್ಪಷ್ಟ ತೋರಿದ ಹರಿಯೆ | ಇತ್ತೆ ಉಪದೇಶಾ 1 ಮರುತ ಮತದಲಿ ದೀಕ್ಷೆ | ಹಿರಿಯರನು ಸರಣೆಯಲಿನಿರುತ ಆಸಕ್ತಿಯನು | ಕರುಣಿಸುತ ಭವದಾಶರಧಿಯನೆ ದಾಟಿಸುವ | ಮಾರ್ಗವನೆ ತೋರೊ ಹರಿಕರುಣಾಂಬುನಿಧಿಯೆಂದು | ಮೊರೆ ನಿನಗೆ ಇಡುವೇ 2 ಕಷ್ಟ ನಿಷ್ಠೂರಗಳ | ಸುಷ್ಠುಸಮತೆಲಿ ಉಂಬಶ್ರೇಷ್ಠ ಮತಿಯನೆ ಇತ್ತು | ರಕ್ಷಿಸೋ ಇವಳಾ |ಅಷ್ಟ ಸೌಭಾಗ್ಯಗಳ | ಕೊಟ್ಟು ಕಾಯಲಿ ಬೇಕೊಕೃಷ್ಣ ಮೂರುತಿ ಹರಿಯೆ | ಭಕ್ತ ವತ್ಸಲ್ಲಾ 3 ಪರಮಾರ್ಥ ಸಾಧನಕೆ | ಗುರು ಕರುಣಬೇಕೆಂಬವರಮತಿಯ ಕರುಣಿಸುತ | ಪೊರೆಯ ಬೇಕಿವಳಾಗರುಡ ಗಮನನೆ ದೇವ | ಸರ್ವಾಂತರಾತ್ಮಕನೆಕರುಣದಿಂ ಕೈ ಪಿಡಿದು | ಉದ್ಧರಿಸೋ ಇವಳಾ 4 ಪಾವಮಾನಿಯ ಪ್ರೀಯ | ಭಾವದಲಿ ಮೈದೋರಿಜೀವಿಯನು ಉದ್ಧರಿಸೋ | ದೇವ ದೇವೇಶಾಗೋವತ್ಸದನಿ ಕೇಳಿ | ಆಪು ಪೊರೆವಂತೆ ತೋರಿಗೋವಿದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರ್ಣಿಸಲಳವೆ ಕರುಣಾಳು ಗುರುವರ ನಿಮ್ಮ ವರ್ಣವರ್ಣದ ಚರಿತೆ ಗುಣಗಣಗಳ ಪ. ವರ್ಣಪ್ರತಿಪಾದ್ಯ ದೇವತೆಗಳಿಗೆ ಅಳವಲ್ಲ ಇನ್ನಿದನು ಪಾಮರರು ಅರಿಯುವರೆ ಜಗದಿ ಅ.ಪ. ಪ್ರತಿಪ್ರತಿ ಕಲ್ಪದಲಿ ಅತಿಶಯದ ತಪಚರಿಸಿ ಪತಿತಪಾವನ ಹರಿಯ ಮನ ಮೆಚ್ಚಿಸಿ ಕ್ಷಿತಿಯೊಳಗೆ ಅವತರಿಸಿ ದೇವಾಂಶರೆಂದೆನಿಸಿ ಪತಿತರನು ಪಾವನವಗೊಳಿಪ ಘನಮಹಿಮ 1 ಭಕ್ತರು ಕರೆದಲ್ಲಿ ಆಸಕ್ತಿಯಿಂ ಬಂದು ಯುಕ್ತಯುಕ್ತಗಳಿಂದ ತತ್ವಗಳನರುಹಿ ಮುಕ್ತಿಗೊಡೆಯನ ಮಾರ್ಗ ಮುಕ್ತಾರ್ಥ ಜನಕರುಹಿ ಮುಕ್ತಿಪಥ ಸವಿತೋರ್ವ ಶಕ್ತಿ ಮಹಿಮೆಗಳ 2 ಪಾದ ಪದ್ಮಸುತ ತಂದೆ ಮುದ್ದು ಮೋಹನದಾಸರಾಯರೆಂದೆನಿಸಿ ಮಧ್ವಮತಸಾರಗಳ ಹೀರಿ ಮಕರಂದವನು ಸಿದ್ಧಿಗೊಳಿಸಿ ಸುಜನಕೀವ ಶ್ರೀ ಗುರುವೆ3 ಕರಿಗಿರಿ ನರಹರಿಯ ಚರಣಕಮಲ ಧ್ಯಾನ ಅರಘಳಿಗೆ ಬಿಡದೆ ಮನಮಂದಿರದಿ ಸ್ಮರಿಪ ಕರುಣಜಲನಿಧಿಯೆ ನಿಮ್ಮ ಮೊರೆಹೊಕ್ಕವರ ಕಾಯ್ವ ಪರಮಪ್ರಿಯರೆಂತೆಂಬ ಬಿರುದುಳ್ಳ ಗುರುವೇ 4 ಕಮಲಾಂತ ಪ್ರೀತ ಶ್ರೀ ಕಮಲನಾಭನ ಪಾದ ಕಮಲ ಮನದಲಿ ಸ್ಮರಿಪ ಕಮನೀಯ ಗಾತ್ರ ಕಮಲಾಕ್ಷ ಗೋಪಾಲಕೃಷ್ಣವಿಠ್ಠಲನ ಪದ ಕಮಲ ಮನದಲಿ ತೋರಿ ಕೃಪೆಯಗೈಯ್ಯುವುದು 5
--------------
ಅಂಬಾಬಾಯಿ