ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಏ) ವಿಶೇಷ ಸಂದರ್ಭದ ಹಾಡುಗಳು ಬರಗಾಲ ಮತ್ತು ಯುದ್ಧವನ್ನು ಕುರಿತು ನಿರ್ದಯನಾಗಬೇಡವೋ ಭಗವಂತ ದುರ್ದಿನ ದೂರಮಾಡೋ ದೇಶಕ್ಕೆ ಪ್ರಶಾಂತ ಪ ಮಳೆಗಾಲ ಮರೆತುಹೋಗಿ ಬೇಸಗೆ ಬೆಳೆದು ಬಂದು ನೆಲವೆಲ್ಲ ದುರ್ಭಿಕ್ಷ ತಾಂಡವವಾಡುತಿದೇ 1 ಕೆರೆಕಟ್ಟೆತೊರೆಭಾವಿ ಹೊಳೆಯಲ್ಲಿ ನೀರಿಲ್ಲ ಧರೆಯಲ್ಲಿ ತೃಣವಿಲ್ಲ ಬರಿಗಾಡಾಯ್ತೋ 2 ಹೊಲಗದ್ದೆ ತೋಟಗಳ ಬೆಳೆಯೆಲ್ಲ ಒಣಗಿತು ಫಲವಿಲ್ಲ ಜನವೆಲ್ಲ ಗೋಳಾಡುತಿಹರೋ 3 ಅನ್ನಾಹಾರಗಳಿಲ್ಲ ಗೋಗಳಿಗೆ ಗ್ರಾಸವಿಲ್ಲ ಚಿನ್ನದಂಥ ಮಕ್ಕಳೆಲ್ಲ ಉಣಿಸಿಲ್ಲದಿಹರೋ4 ಧನಿಕರ್ಗೆ ಧನದಾಸೆ ಬಡವರ್ಗೆ ಕೂಳಿಲ್ಲ ದಿನಕಳೆವುದು ಕಷ್ಟವಾಗಿ ಬರಗಾಲ ಬಂತೋ 5 ಕಳವು ಕೊಲೆಯು ದಂಗೆ ದಾರಿದರೋಡೆಯು ಉಳಿಗಾಲ ಬರಲಿಲ್ಲ ಯುದ್ಧದ ಭಯವು6 ಒಂದೊಂಬತ್ತಾರೈದು ಹತ್ತು ಹನ್ನೊಂದರ ಮಧ್ಯೆ ಬಂದು ಜಗದ ಕುತ್ತು ಕತ್ತಿಯಂತೆ ಕಂಡಿತು 7 ಬೆಳಗುಪೂರ್ವ ಆಶ್ವಿಜ ಕಾರ್ತಿಕದೆ ಧೂಮಕೇತು ಇಳೆಗಂಡಕಳೆ ಯಮದ್ವಾರವ ಮುಚ್ಚಿ 8 ಅವಿಶ್ವಾಸದ ವಿಶ್ವವಸುವ ಪರಾಭವದಿಂ ಪ್ರೀತಿತೋರಿ ಭಂಗ ಹರಿಸೋ 9 ಪಾಕಿ-ಚೀನಾ ಪತನಗೈದು ಜೋಕೆಯಿಂ ಭಾರತವ ರಕ್ಷಿಸಿ ಲೋಕಕ್ಕೆ ಕ್ಷಾಮಹರಿಸಿ ಕ್ಷೇಮಕೊಟ್ಟು ಪೊರೆಯೋ10 ನಗೆಯಿಲ್ಲ ಸಂತೋಷ ಸುದ್ಧಿ ಕೇಳುತಲಿಲ್ಲ ಮಿಗಿಲಾಗಿ ಜನರೆಲ್ಲ ಸೊರಗಿ ಸುತ್ತುವರೋ11 ಕನ್ನಡದ ನಾಡಿಗೆ ಹೊನ್ನಿನ ಬಿರುದಿದೆ ಖಿನ್ನತೆ ತಾರದೆ ಉನ್ನತಿ ಕಾಪಾಡು 12 ಮುಂದೆಮಗೆ ಗತಿಯೇನು ಬಾಳುವಬಗೆಯೆಂತು ಬಂಧು ನೀನಿದ್ದುಕೊಂಡು ಅನ್ಯಾಯವಾಗಿದೆ13 ತಂದೆ ತಾಯಿಯು ನೀನು ಹೊಂದಿದ ಬಳಗ ನೀನು ಕುಂದಿಲ್ಲದೆಮ್ಮನ್ನು ಕಾವ ಪ್ರಭು ನೀನು 14 ಸುವೃಷ್ಟಿ ಸಸ್ಯವೃದ್ಧಿ ಜೀವನ ಸಮೃದ್ಧಿಯು ಸುವೃತ್ತಿ ಕರುಣಿಸಿ ಪೊರೆ ಜಾಜಿಶ್ರೀಶ 15
--------------
ಶಾಮಶರ್ಮರು
ಹರಿಮಣಿವರ್ಣ ವಿಠ್ಠಲಾ ನಿನ್ನವನೊ ಪರಮ ಪ್ರೀತಿಯಿಂದ ಪಾಲಿಸ ಬಾರಯ್ಯ ಪ ಪಂಕಜ ದಳ ಕೂಡಿತು ನೋಡು ಮುದರಿಕೊಂಡವು ಕುಮುದವೆಂಬೊ ಕಣ್ಣು ಪದುಮನಾಭನೆ ನಿನ್ನ ನಖವೆಂಬೊ ರವಿ ವದನವೆಂಬೊ ಚಂದ್ರÀಮಾ ಉದಿಸಲಿ 1 ಬಿರಿದಾಗಿ ಕಿವಿ ಎಂಬೊ ಮನೆ ಇಪ್ಪವು ಸ್ಪರಿಶ ಮಾಡುವೆನೆಂದು ಕಲಿ ಸುಳಿದಾ ಕರ್ಣ ಮಂದಿರವೆ ತುಂಬಲಿ ಕಲಿ ಅಡಗಿ ಪೋಪಾ 2 ನಾಸಾ ದುರ್ವಾಸನೆಗೆ ಇಚ್ಛೆ ಮಾಡಿತು ಹೇಸಿಗೆ ರಸಗಳಿಗೆ ಜಿವ್ವೆ ಪೋಗುದದು ಪೂಸಿದಾ ಗಂಧ ದಿವ್ಯವಾಸನೆ ಬರಲಿ ಲೇಸು ನಿನ್ನ ನಾಮರಸ ಸುರಿಸುವಂತೆ ಮಾಡು3 ನೀನಲ್ಲದೆ ತುಲಾ ಕಾವೇರಿಯೊಳಗೆ ಸ್ನಾನ ಜಪ ತಪಗಳು ಮಾಡುವದೇಕೆ ಸಿರಿ ಪ್ರಾಣರಿಗೆ ಪ್ರಾಣನಾದ ಬಲು ಮೋಹನಾ 4 ಈ ಕ್ರೋಧನಾಬ್ಧ್ದ ಆಶ್ವಿಜ ನಿನ್ನ ಪಕ್ಷದ ಏಕಾದಶಿ ರಾತ್ರಿಯೊಳು ಬಾ ಹೃದಯದೊಳಗೆ ಯಾಕೆ ಕೂಡದಯ್ಯ ಜೀಯಾ ಪೇಳೊ ಎನ್ನೊಡಿಯ ಲೋಕ ಚರಿಸುವದೇನು ನಿನ್ನ ಪೋಗಾಡಿ 5 ಧವಳಗಂಗಿಯೊಳಂದು ಬಿದ್ದು ಬಂದಾಗ ಕವಿ ವಾದಿರಾಜಗೊಲಿದು ಬರಲಿಲ್ಲವೇ ಅವರ ದಾಸಾನುದಾಸನು ಸತತ ನಾನು ತವಕದಿಂದಲಿ ಬಾರೊ ಭಕ್ತವತ್ಸಲಾ6 ಅರ್ಚಿಸಬಲ್ಲನೆ ದೇವ ನಿನ್ನನುದಿನಾ ಗಚ್ಚರಿತವಂದಲ್ಲವೆ ಮತ್ತಾವದರಿಯೆ ಅಚ್ಯುತದಾಸರ ಪ್ರೀಯ ವಿಜಯವಿಠ್ಠಲ ಬೆಚ್ಚಿಸಿದೋಪಾದಿಯಲ್ಲಿ ಪೊಂದಿ ಬಾರಯ್ಯ 7
--------------
ವಿಜಯದಾಸ