ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಶ್ರಮ ಧರ್ಮ ನಾಲ್ಕು ಉಪದ್ರಆಶ್ರಮ ಧರ್ಮ ಬಿಡೆ ಅವ ಪಟ್ಟ ಬದ್ಧ ಪ ಬ್ರಹ್ಮಚಾರಿಯು ಆಗೆ ಕರ್ಮದ ಉಪದ್ರಬ್ರಹ್ಮಚರ್ಯವು ಹೋಗೆ ಸ್ತ್ರೀಯ ಉಪದ್ರಸುಮ್ಮಗೆ ವಾನಪ್ರಸ್ಥನಾಗೆ ಬೆಂಕಿ ಉಪದ್ರಹಮ್ಮಳಿದು ಸಂನ್ಯಾಸಿಯಾಗೆ ಸ್ನಾನದುಪದ್ರ 1 ಗೃಹಸ್ಥನಾಗೆ ವ್ರತಗಳ ಉಪದ್ರಸತತ ಸಂಧ್ಯಾ ಜಪತಪದ ಉಪದ್ರಮಿತಿ ಇಲ್ಲದ ನಾನಾ ಕರ್ಮಗಳ ಉಪದ್ರಸತತ ಶುಚಿ ಅಶುಚಿ ಎಂಬುದರ ಉಪದ್ರ 2 ಆವ ಆಶ್ರಮದಲಿರೆ ಆವುದೊಂದು ಉಪದ್ರಆವ ಆಶ್ರಮದಿ ಉಪದ್ರವೇ ಅದು ಹೋಗದುಆವಾಶ್ರಮಗಳಿಗೆ ಬೇರೆ ಇರೆ ಸುಖಿಯಿಹದೇವ ಚಿದಾನಂದ ಮಹ ಸರ್ವಮಹೋಪದ್ರವ ಪರಿಹಾರವಯ್ಯ 3
--------------
ಚಿದಾನಂದ ಅವಧೂತರು
ಶ್ರೀ ಮದಾಚಾರ್ಯ ಮುನಿ ಪ್ರೇಮದಲಿ ಸಲಹೊ ಪ. ಕಾಮಪೂರ್ಣನೆ ಎನ್ನ ಕಾಮಿತವನೀಯೊ ಅ.ಪ. ದ್ವಿತೀಯಯುಗದಲಿ ವಾಯುಸುತನಾಗಿ ಅವತರಿಸಿ ಕ್ಷಿತಿಸುತೆಗೆ ಉಂಗುರವ ಹಿತದಿಂದಲಿತ್ತೆ ತೃತಿಯುಗದಲಿ ಕುಂತಿಸುತನಾಗಿ ಕೌರವರ ಹತಗೊಳಿಸಿ ಹರಿಯಪದ ಹಿತದಿ ಧ್ಯಾನಿಸಿದೆ 1 ಕಲಿಯುಗದೊಳವತರಿಸಿ ಕಲಿಕಲ್ಮಷವ ಕಳೆದು ಒಲಿಸಿ ಹರಿಯನು ತುರಿಯ ಆಶ್ರಮದಲಿ ಸುಲಭಮಾರ್ಗವ ತೋರಿ ಸುಜನರನು ರಕ್ಷಿಸಿದೆ ಕಲಿಕಾಲ ಸಲಹೆನ್ನ ನೆಲಸಿ ಹೃದಯದಲಿ 2 ಆಚಾರ್ಯರೂಪದಲಿ ಗೋಚರಿಸಿ ಸ್ವಪ್ನದಲಿ ಸೂಚಿಸಿದೆ ದಾಸತ್ವ ಸಿದ್ಧಿಸಲಿ ಎಂದು ಯಾಚಿಸೆನೊ ಅನ್ಯರನು ನಾಚಿಕೆಯ ತೊರೆದಿನ್ನು ನೀಚತನವನೆ ಬಿಡಿಸಿ ಗೋಚರಿಸೊ ಸತತ 3 ಉಪದೇಶವನೆ ಇತ್ತೆ ಗುಪಿತದಿಂ ಸ್ವಪ್ನದಲಿ ಚಪಲತನದಲಿ ನಾನು ಅರಿಯಲಿಲ್ಲ ಅಪರಿಮಿತ ಮಹಿಮ ಶ್ರೀ ಗುರುಗಳಲಿ ನೀ ನಿಂತು ತಪ್ಪನೆಣಿಸದೆ ಎನ್ನ ನಮನ ಸ್ವೀಕರಿಸೊ 4 ವೇದವ್ಯಾಸರ ಪ್ರಿಯನೆ ಮೋದದಲಿ ಶಿಶುವಾದೆ ಶ್ರೀ ದುರ್ಗೆ ತಾ ಬಂದು ಎತ್ತಿದಳೊ ನಿನ್ನ ವಾದಿಗಳ ಗೆದ್ದ ಅನಾದಿ ಮುನಿ ನಮಿಸುವೆನೊ ಶ್ರೀದ ಗೋಪಾಲಕೃಷ್ಣವಿಠ್ಠಲನ ತೋರೊ 5
--------------
ಅಂಬಾಬಾಯಿ
ಸತಿ ಸಹಿತ ಕಶ್ಯಪರು ರತುನದಾರತಿ ಪಿಡಿದು ರತಿಪತಿಪಿತನಿಗೆ ಅತಿಹರುಷದಿ ಅತಿಶಯದ ಮಹಿಮೆಗಳ ಪೊಗಳುತಲಿ ಶ್ರೀಹರಿಗೆ ಕುಶಲದಾರತಿ ಎತ್ತಿಬೆಳಗಿದರು ನಿತ್ಯ ಶುಭ ಮಂಗಳಂ 1 ಅನಸೂಯ ಸಹಿತ ಅತ್ರಿಯರು ಬೇಗನೆ ಬಂದು ನಳಿನಾಕ್ಷನ ಚರಣಕ್ಕೆರಗಿ ನಿಂದು ವಿಧವಿಧದ ಆಟಗಳ ಆಡಿದ ಶ್ರೀಹರಿಗೆ ಪದುಮದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 2 ಶೀಲವತಿಯಾದ ಸುಶೀಲೆ ಸಹಿತ ಭಾರದ್ವಾಜ ಋಷಿಗಳು ತಮ್ಮ ಆಶ್ರಮದಲಿ ಶ್ರೀಲಕುಮಿವಲ್ಲಭಗೆ ಶೀಘ್ರದಿಂದಲಿ ತಾವು ಗೋಮೇಧಿಕದಾರುತಿ ಬೆಳಗಿದರು ನಿತ್ಯ ಶುಭಮಂಗಳಂ 3 ಕುಮುದ್ವತಿ ಸಹಿತ ವಿಶ್ವಾಮಿತ್ರ ಋಷಿಗಳು ಕನಕ ಮಂಟಪದಿ ಮೆರೆಯುವ ದೇವಗೆ ಸನಕಾದಿವಂದ್ಯನಿಗೆ ವನಜಾಕ್ಷಿಯರಸನಿಗೆ ಕನಕದಾರತಿ ಎತ್ತಿ ಬೆಳಗಿದರು ನಿತ್ಯ ಶುಭಮಂಗಳಂ 4 ಪ್ರಹ್ಲಾದವರದನಿಗೆ ಅಹಲ್ಯೆಯ ಸಹಿತದಿ ಫುಲ್ಲಲೋಚನಪ್ರಿಯಗೆ ಋಷಿಗೌತಮ ಮಲ್ಲಿಗೆಹಾರಗಳು ಧರಿಸಿ ಶೋಭಿಪ ಹರಿಗೆ ಚಲ್ವನವರತ್ನದಾರತಿ ಎತ್ತುತಾ ನಿತ್ಯ ಶುಭಮಂಗಳಂ 5 ರೇಣುಕಾ ಸಹಿತ ಜಗದಗ್ನಿ ಋಷಿಗಳು ತಮ್ಮ ಧ್ಯಾನಗೋಚರನಾದ ಪರಮಾತ್ಮನ ಮಾನಿನಿಮಣಿ ಲಕುಮಿಯೊಡನೆ ಶ್ರೀಕೃಷ್ಣನಿಗೆ ನೀಲಮಾಣಿಕ್ಯದ ಆರತಿ ಎತ್ತುತ ನಿತ್ಯ ಶುಭಮಂಗಳಂ 6 ಸತಿ ಸಹಿತ ವಶಿಷ್ಠ ಋಷಿಗಳು ಇಷ್ಟಮೂರುತಿಯಾದ ವರಕಮಲನಾಭ ವಿಠ್ಠಲನ ಸ್ಮರಿಸುತ ನಿತ್ಯ ನವರತ್ನದಾರತಿ ಬೆಳಗಿದರು ನಿತ್ಯ ಶುಭಮಂಗಳಂ 7 ಮಂಗಳಂ ಸಪ್ತಋಷಿಗಳು ಪರ್ಣಶಾಲೆಯೊಳು ಗಾಂಗೇಯನುತನ ಪೂಜಿಸಿ ಹರುಷದಿ ಸಂಗೀತಲೋಲನಿಗೆ ಶೃಂಗಾರ ಪುರುಷನಿಗೆ ರಂಗಿನಾರತಿಯೆತ್ತಿ ಬೆಳಗಿದರು ನಿತ್ಯ ಶುಭಮಂಗಳಂ 8
--------------
ನಿಡಗುರುಕಿ ಜೀವೂಬಾಯಿ