ನಿತ್ಯ ಶ್ರೀಕರವು ಪ
ಭೂಪತಿಯಂದದಿ ಭೂಮಿಯಾಳುವುದು
ಕಾಪಾಡುತಿಹುದು ಲೋಕಿಗರಅ.ಪ
ಆಳುವಾರುಗಳು ಆಚಾರ್ಯರುಗಳು
ಪೇಳಿದರಿದರಾಂತರ್ಯವನು
ಕೇಳುತ ಬಾಳಿದ ಬಹು ಭಾಗವತರ
ಪಾಳಯವದು ತಾಂ ಪರಮಪದ 1
ಅಭಿಮತದಿಂದಲಿ ಮುನಿಗಳು ಮೂವರು
ವಿಭವದಿಂದಲದ ಸಲಹಿದರು
ಉಭಯ ವೇದಗಳ ಅಮೃತವರ್ಷದಿಂ ಸು
ರಭಿತ ಕುಸುಮಗಳರಳಿದವು 2
ಶಂಖ ಸುದರ್ಶನ ಲಾಂಛನ ಭುಜಗಳಲ
ಲಂಕಾರದ ಹನ್ನರೆಡು ನಾಮಗಳು
ಪಂಕಜ ತುಳಸೀಮಣಿ ಪವಿತ್ರಗಳು
ನಿಶ್ಶಂಕೆಯ ಮೂರು ಮಂತ್ರವೆ ಕಾಯ್ಗಳು 3
ಶಾಸ್ತ್ರ ಸಿದ್ಧವಾದರ್ಚಾಮೂರ್ತಿಯ
ಕ್ಷೇತ್ರ ತೀರ್ಥಗಳು ಪಕ್ವಫಲ
ಶ್ರೋತೃಗಳಿಗೆ ಮಧುರಾದತಿಮಧುರವು
ಖ್ಯಾತಿಯ ವಿಜಯರಾಘವ ಕೃತಿ-ಪ್ರ-
ಖ್ಯಾತಿಯ ಅಣ್ಣಂಗಾರ್ಯ ಕೃತಿ4
ನಿತ್ಯ ನೈಮಿತ್ತಿಕ ತಿರುವಾರಾಧದಿ
ನವ್ಯ ತದೀಯದ ಕೈಂಕರ್ಯ
ಸ್ತುತ್ಯಪ್ರಬಂಧ ಗೀತಾ ಶ್ರೀಭಾಷ್ಯ
[ದರ್ಥಿ]ಪಾರಾಯಣ ಪರಮಾನಂದ 5
ಶ್ರೀರಂಗ ವೆಂಕಟ ವರದ ನಾರಾಯಣ
[ರಾ ಶ್ರೀ] ಪದಯುಗ ಪೂಜನ ಪ್ರಾಪ್ತಿ ಫಲ
ಓರಂತನುದಿನ ಧ್ಯಾನ ಗಾನಗಳು
[ಬೀರುವವು] ತೃಪ್ತಿಕರ ಸುಧಾನಿಧಿ 6
ಜಾಜೀ ಕೇಶವ ಜಗವ ಪಾಲಿಸಲು
ಮಾಜದೆ ಮಾಡಿದ ಉಪಕೃತಿಯು
ರಾಜಿಪ ಚರಣಗಳಾಶ್ರಿತರಿಗೆ ಸವಿ
ಭೋಜನವೀವುದು ಹರಿಯೆಡೆಯೊಳ್ 7