ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶ್ರೀಕರವು ಪ ಭೂಪತಿಯಂದದಿ ಭೂಮಿಯಾಳುವುದು ಕಾಪಾಡುತಿಹುದು ಲೋಕಿಗರಅ.ಪ ಆಳುವಾರುಗಳು ಆಚಾರ್ಯರುಗಳು ಪೇಳಿದರಿದರಾಂತರ್ಯವನು ಕೇಳುತ ಬಾಳಿದ ಬಹು ಭಾಗವತರ ಪಾಳಯವದು ತಾಂ ಪರಮಪದ 1 ಅಭಿಮತದಿಂದಲಿ ಮುನಿಗಳು ಮೂವರು ವಿಭವದಿಂದಲದ ಸಲಹಿದರು ಉಭಯ ವೇದಗಳ ಅಮೃತವರ್ಷದಿಂ ಸು ರಭಿತ ಕುಸುಮಗಳರಳಿದವು 2 ಶಂಖ ಸುದರ್ಶನ ಲಾಂಛನ ಭುಜಗಳಲ ಲಂಕಾರದ ಹನ್ನರೆಡು ನಾಮಗಳು ಪಂಕಜ ತುಳಸೀಮಣಿ ಪವಿತ್ರಗಳು ನಿಶ್ಶಂಕೆಯ ಮೂರು ಮಂತ್ರವೆ ಕಾಯ್ಗಳು 3 ಶಾಸ್ತ್ರ ಸಿದ್ಧವಾದರ್ಚಾಮೂರ್ತಿಯ ಕ್ಷೇತ್ರ ತೀರ್ಥಗಳು ಪಕ್ವಫಲ ಶ್ರೋತೃಗಳಿಗೆ ಮಧುರಾದತಿಮಧುರವು ಖ್ಯಾತಿಯ ವಿಜಯರಾಘವ ಕೃತಿ-ಪ್ರ- ಖ್ಯಾತಿಯ ಅಣ್ಣಂಗಾರ್ಯ ಕೃತಿ4 ನಿತ್ಯ ನೈಮಿತ್ತಿಕ ತಿರುವಾರಾಧದಿ ನವ್ಯ ತದೀಯದ ಕೈಂಕರ್ಯ ಸ್ತುತ್ಯಪ್ರಬಂಧ ಗೀತಾ ಶ್ರೀಭಾಷ್ಯ [ದರ್ಥಿ]ಪಾರಾಯಣ ಪರಮಾನಂದ 5 ಶ್ರೀರಂಗ ವೆಂಕಟ ವರದ ನಾರಾಯಣ [ರಾ ಶ್ರೀ] ಪದಯುಗ ಪೂಜನ ಪ್ರಾಪ್ತಿ ಫಲ ಓರಂತನುದಿನ ಧ್ಯಾನ ಗಾನಗಳು [ಬೀರುವವು] ತೃಪ್ತಿಕರ ಸುಧಾನಿಧಿ 6 ಜಾಜೀ ಕೇಶವ ಜಗವ ಪಾಲಿಸಲು ಮಾಜದೆ ಮಾಡಿದ ಉಪಕೃತಿಯು ರಾಜಿಪ ಚರಣಗಳಾಶ್ರಿತರಿಗೆ ಸವಿ ಭೋಜನವೀವುದು ಹರಿಯೆಡೆಯೊಳ್ 7
--------------
ಶಾಮಶರ್ಮರು
ರಾಮಾನುಜಾಚಾರ್ಯ ಮೌನಿವರ್ಯ ನೇಮದಿಂದಲಿ ಗೈದೆ ನೀಂ ಸ್ವಾಮಿ ಕಾರ್ಯ ಪ ಆದಿಯೊಳು ನೀನಾದಿಶೇಷನು ಹರಿಶಯ್ಯೆ ಮೋದಕರ ಪ್ರಹ್ಲಾದ ಎಂದೆನಿಸಿದೆ ಸೋದರದಿ ಸೌಮಿತ್ರಿ ಸಂಕರ್ಷಣನು ಆದೆ ನಾಥ ಯಾಮಾನ ಪಥದಿ ಅರಿಗಳನು ಗೆಲ್ದೆ 1 ಗೀತ ಸೂತ್ರಕೆ ಭಾಷ್ಯಕಾರ ನೀನಾಗಿರುವೆ ಖ್ಯಾತಿಸಿದೆ ವ್ಯಾಸ ಪರಾಶರರ ಹೆಸರ ಪೂತ ಆಳುವಾರುಗಳ ಶ್ರೀಸೂಕ್ತಿ ಪ್ರಕಟಿಸಿದೆ ಮಾತೆವೊಲು ಉಭಯವೇದಗಳ ಪೊರೆದೆ 2 ನೂರೆಂಟು ತಿರುಪತಿಯ ಯಾತ್ರೆಗಳ ಮಾಡುತ್ತ ದಾರಿತೋರಿದೆ ಹರಿಯ ಸೇವಿಸುವ ಪರಿಯ ಪರಮಾರ್ಥಿಕರಾಗಿ ಪರಮವೈಷ್ಣವರಿರಲು ಸಾರಸುಖ ಪದತೋರ್ದೆ ಯತಿಸಾರ್ವಭೌಮ 3 ಎಂದೆಂದು ಮರೆಯದ ಕೂರೇಶರಾ ಸಖ್ಯ ಅಂದು ಬೋಧೆಯ ಕೊಟ್ಟ ಪೂರ್ಣಾರ್ಯರ ನೊಂದಕಾಲವ ನೆನೆದು ಕಣ್ಣೀರ ಕರೆಯುವೆನು ತಂದೆ ಗುರುವಿನ ಗುರುವೆ ದೇವಮಾನ್ಯ 4 ಯಾದವನ ಚೋಳನ ಕೃತ್ರಿಮದ ಕೋಟೆಗಳು ಮಾಧವನ ಡೆಲ್ಲಿಯಿಂ ಕರೆತಂದುದು ಬಾಧಿಸದೆ ಬ್ರಹ್ಮಪೀಡೆಗಳು ಓಡಿದುದು ಈ ಧರೆಯ ಕೀರ್ತಿಗೆ ಮೊದಲಾದವು 5 ರಾಮಚಂದ್ರನ ಕಾಡವಾಸವಂ ನೆನಪೀವ ಸ್ವಾಮಿಯರು ಗಿರಿಸೇರ್ದ ಗುರಿ ಎಲ್ಲವೂ ತಾಮಸರು ಸಾವಿರರ ಒಂದೆ ವಾರದಿ ಗೆಲ್ದ ಮಾಮೈಮೆ ಯಾರಿಗಿದೆ ಭೋಗಿರಾಜಾ 6 ಸಿರಿರಂಗ ತಿರುಪತಿ ಕಂಚಿ ಯದುಶೈಲಗಳ ಪರಮಪದಕೂ ಮಿಗಿಲು ವೈಭವವ ಗೈದೆ ನಿರುತ ತಮ್ಮವರಿಂಗೆ ಸಕಲ ಪಾಪವ ಸುಟ್ಟು ಹರಿಯ ಭರವಸೆ ಪಡೆದೆ ಮೋಕ್ಷ ಕೊಡುವಂತೆ 7 ನಿನ್ನಂತೆ ನಡೆವ ಪ್ರಪನ್ನರೇ ಧನ್ಯರು ಮನ್ನಣೆಯ ಪಡೆದಿರವ ಶ್ರೀಮಂತರು ಎನ್ನ ಬಿನ್ನಪ ಕೇಳಿ ನಿನ್ನವನ ಮಾಡಿಕೋ ಮೂರ್ತಿ ಜಾಜೀಶ ಕೀರ್ತಿ 8
--------------
ಶಾಮಶರ್ಮರು