ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಹಿ ಪಾಂಡವ ಪರಿಪಾಲ ನೀನೇ ನಿತ್ಯ ಮಹದಾದಿವಂದ್ಯಾ ಸುಶೀಲಾ ಪ ದೈಹಿಕ ಮೊದಲಾದ ಕರ್ಮವ ಮಾಡಿಸಿ ಮೋಹಕ ಪಾಶವ ಓಡಿಸು ಕೇಶವಾಅ.ಪ ಇಂದ್ರತನಯಾ ಮಾನಭಂಗ ಮಾಡಿದೆ ನೀನು ಇಂದು ಉಂಡೆನೋ ಸಿರಿರಂಗಾ ಮಂದರೋದ್ಧರ ಕೋಮಲಾಂಗಾ ಕೇಳೊ ಪೊಂದಿಸು ಸುಜನರ ಸಂಗಾ ಕಂದರ್ಪಜನಕ ಆನಂದ ವಿಗ್ರಹ ಪೂರ್ಣ ಮಾತನು ಸುಂದರ ನಿಜ ಭಕ್ತ ವೃಂದ ಮಹೋದಧೇ 1 ಕಾಲಕರ್ಮ ಗುಣದಿಂದಾ ವೃಥಾಯು ವೇಳೆಯ ಕಳದೆ ಮುಕುಂದಾ ಪೇಳಾ ಲೇಸೊ ಪ್ರತಿ ಬಂಧಾ ಇನ್ನು ನಾನು ತಾಳಲಾರೆ ದು:ಖದಿಂದಾ ಆಲಸ ತಾಳದೆ ಆಲಿಸು ಮಾತನು ಆಳುಗಳೊಳಗಿಹ ಆಳಾನೆಂದು 2 ಅನಾದಿಯಿಂದಲಿ ನಿನ್ನ ಪದಗಳ ಧ್ಯಾನವ ಮಾಡುವೆ ಚನ್ನಾ ನಾನಾ ಬಗೆಯಿಂದ ಯೆನ್ನಾ ಸಾಕುತಲಿಪ್ಪ ನೀನೆ ಮುಖ್ಯನೊ ಪ್ರಸನ್ನ ಅನಂತಶಯನ ಭೋ ವಿಜಯವಿಠ್ಠಲರೇಯ ಮಾನದಲಿ ನಿಂದು ಪ್ರಾಣಪ್ರೇರಕನಾಗೊ 3
--------------
ವಿಜಯದಾಸ