ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲವಂತನೇ ನೀನು ಎಲೋ ಪರಮಾನಂದ ಕುಲಹೀನನೇ ನಾನು ಪೇಳೆಲವೊ ಸ್ವಾಮಿ ಪ ಹೊಲೆಯ ಪೆದ್ದಯ್ಯಗೆ ಒಲಿದವನ ಆಳಾದಿ ಕುಲದಿ ಮಾದಿಗರ್ಹರಳಯ್ಯನ ಮನೆಲುಂಡಿ ಚೆಲುವ ಕೂಸಿನ ಕೊರತೆ ಸಲಿಸಿದಿ ಬಲುಹಿತದಿ ಮಲಿನಸೀರೆಯ ನಿನ್ನ ತಲೆಗೆ ಸುತ್ತಿಕೊಂಡಿ 1 ಡೊಂಬಿತಿಯ ಗುಡಿಸಿಲಲಿ ಸಂಭ್ರಮದಿ ಮಲಗಿದಿ ಶಂಭೋ ಕುಣಿದೆಲೋ ಕುಂಬಾರಗೊಲಿದು ಸಾಂಬ ನೀ ನಡ ಪೊತ್ತು ಇಂಬು ಸುಡುಗಾಡು ನಿನಗಂಬುಧಿಧರನೆ 2 ಪುಲಿಚರ್ಮ ಹಾಸಿಕೊಂಡ್ಹೊಲಸು ಚರ್ಮುಟ್ಟಿರುವಿ ತಲೆ ಬುರುಡೆ ಕೊರಲಿಗೆ ಮಾಲೆ ಧರಿಸಿರುವಿ ಎಲೊ ದೇವ ಇನಿತಿರ್ದು ಕುಲವನೆಣಿಸುವಿ ನಿನ್ನ ಒಲವು ಬೇಡುವರಿಗೆ ಶ್ರೀರಾಮಸಖನೆ 3
--------------
ರಾಮದಾಸರು
ಮತಿಗೆಟ್ಟೆ ಭವತಾಪವ್ಯಥೆಯಿಂದ ನಾನು ಸುತನರಿಕೆ ಹಿತದಿಂದ ಕೇಳು ಮಮಪಿತನೆ ಪ ವಿಧಿವಶದಿ ಸಿಲ್ಕಿ ನಾ ಉದಿಸಿ ಈ ಬುವಿಯೊಳಗೆ ಸದಮಲನೆ ತವಸ್ಮರಣವಿಧಿಯ ತಿಳಿಯದಲೆ ಉದಯದೇಳುತ ನಾನು ಅಧಮ ಉದರಕ್ಕಾಗಿ ವದನತೆರೆದನ್ಯರನು ಹುದುಗಿ ಬೇಡುತಲಿ 1 ಹಸಿತೃಷೆಯ ತಡೆಯದೆ ಪುಸಿಯಾಡಿ ದಿನಗಳೆದೆ ನಿಶೆಯೆಲ್ಲ ಸಂಸಾರವ್ಯಸನದೊಳು ಕಳೆದೆ ವಸನ ಒಡೆವೆಗೆ ಮೆಚ್ಚಿ ವಸುಧೆಯೊಳ್ತಿರುತಿರುಗಿ ಪುಸಿಯ ಮಾನವರನ್ನು ರಸನೆಯಿಂದ್ಹೊಗಳಿ 2 ವಾನರಗೆ ವಶನಾದಿ ದಾನವನ ರಕ್ಷಿಸಿದಿ ಮಾನವಗೆ ಆಳಾದಿ ದೀನದಯಾಸಿಂಧು ನೀನೆ ಗತಿಯೆನಗಿನ್ನು ಜ್ಞಾನಬೋಧಿಸಿ ಕಾಯೊ ಹೀನಭವ ಗೆಲಿಸಿ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು