ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲರ ಮನೆ ದೋಸೆ ತೂತು ಪ ಚಿಲ್ಲರೆಯಲ್ಲವಿದೀ ಮಾತು ಅ.ಪ ಗಾಜಿನ ಮನೆಯಲಿ ವಾಸಿಸುವ ಪರ ಗೇಹಕೆ ಕಲ್ಲುಗಳೆಸೆಯುಬಹುದೇ ಮೂರ್ಜಗನಿಂದಕ ತನ್ನಯ ನಾಶಕೆ ಬೀಜ ಬಿತ್ತಿ ಫಲ ಭೋಜನ ಮಾಡುವ 1 ನೀರ ಕ್ಷೀರ ನ್ಯಾಯವ ಕೇಳದ ಜನ ರ್ಯಾರಿರುವರು ಈ ಧರೆಯೊಳಗೆ ಬಾರಿಬಾರಿಗದ ಮನಕೆ ತಾರದೆಲೆ ದೂರಿನ ನುಡಿಯಲಿ ರುಚಿಯು ಉಚಿತವೆ 2 ಗೂಳಿಯು ಹಳ್ಳಕೆ ಬಿದ್ದ ಕಾಲದಲಿ ಆಳಗೊಂದು ಕಲ್ಲೆಸೆಯುವರು ಬಾಳಿಬಾಳಿಸುವ ನರನ ಪ್ರಸನ್ನನು ಕಾಲಕಾಲದಲಿ ಸಲಹದೇ ಇರುವನೆ 3
--------------
ವಿದ್ಯಾಪ್ರಸನ್ನತೀರ್ಥರು