ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲ್ಲೆ ಸಂಪದವನೆಲ್ಲವನು ತೆಗೆದುಕೊ ಚೆಲ್ವ ವೇಲಾಪುರೀಶಾ ಸ್ವಾಮಿ ಪ ಬಲ್ಲವರು ನಿನಗೆ ಸರಿಯಿಲ್ಲೆಂದು ಪೊಗಳುತಿಹ ಸೊಲ್ಲ ನಾ ಕೇಳಲಾರೆ ಸ್ವಾಮಿ ಅ.ಪ ಪೆತ್ತಯ್ಯ ತಿರುಮಲಾರ್ಯರು ವರ್ಣಕರ ಚಕ್ರ ವರ್ತಿಯೆಂಬಾ ಬಿರುದನು ಒತ್ತಿ ಪೊಗಳಿಸಿಕೊಂಡುದೇನಂದದಲಿ ತಿರು ಗುತ್ತಿರ್ದಡೇನು ಭಾಗ್ಯಾ ಮತ್ತದೆನಗಾರ್ಜಿತವೆ ಸತ್ತವರ ಸಂಪದವ- ನತ್ತಲೇ ಕಳುಹಿಕೊಡದೆ ಇತ್ತಪರೆ ನಿನ್ನ ದಾಸನುದಾಸರಿಗೆ ಸೇ ವ್ಯೋತ್ತಮನೆ ಕೆಡಿಸಬೇಡಾ ಸ್ವಾಮಿ 1 ಹರಿಯೆ ನೀ ಒಲಿದೂಳಿಗವನು ಮಾಡಲು ಬಳಿಕ ಕಿರುನುಡಿಯ ಮೀರದಿರಲು ಕರುಣದಿಂದಾಗಾಗ್ಯೆ ಕರೆದುಡುಗೊರೆಯ ಕೊಡಲು ಬಿರುದುಗಳು ಮೆರೆಯುತಿರಲೂ ಸ್ಥಿರವಿಲ್ಲದಷ್ಟ ಮಹದೈಶ್ವರ್ಯವಿರುತಿರಲು ಪಿರಿಯರೆಲ್ಲರು ಪೊಗಳಲೂ ಮೆರೆಯನೇ ಮಿಗೆ ಅಹಂಕರಿಸನೇ ಬೆರೆಯನೇ ನರಕಕಿಳಿಯನೇ ಮರಳಿ ಜನಿಸನೇ ಸ್ವಾಮಿ 2 ಸುಖವಿಲ್ಲ ಸುಖವಿಲ್ಲ ಸುಖವಿಲ್ಲ ಭಾಗ್ಯದಾ ಸಕರೆಯನು ನಾನೊಲ್ಲೆನೂ ಭಕತವತ್ಸಲನೆ ಭಾಗವತಲೋಲುಪನೆ ದುಃ ಖಕೆ ಕಾರಣವಿಲ್ಲವೆ ಅಕಳಂಕ ಚರಿತನೆ ಆದಿನಾರಾಯಣನೆ ಮಕರಧ್ವಜನ ತಾತನೆ ಸುಖವೀಯೊ ವೈಕುಂಠ ವೇಲಾಪುರಾಧೀಶ ಭಕುತಿಯನು ಕೊಟ್ಟು ಸಲಹೊ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ
ದಾಸ ಶೇಷಾದ್ರಿಯ ವಾಸ ತಿಮ್ಮಪ್ಪನ |ದಾಸನನು ಕರೆದೊಯ್ದು ||ಸಾಸಿರನಾಮ ವಿಲಾಸನ ಮೂರ್ತಿಯ |ಲೇಸಾಗಿ ತೋರೆನಗೆ ಪಬೆರಳು ಇಲ್ಲದ ಕೈಯೊಳುಂಡು ಜೀವಿಸುವನ |ಶಿರದ ಅಂದದ ದೇವನ ||ಉರುವ ಶಾಪಕೆ ತಾನು ಕಿರಿದಾಗಿ ಇರುವನ |ಶಿರದೊಳು ಧರಿಸಿದನ ||ಕೊರಳ ಮಾಲೆಯ ಪೆಸರೊಪ್ಪಿದ ಗಿರಿಯೊಳು |ಸ್ಥಿರವಾಗಿ ನೆಲಸಿಪ್ಪನ ||ಕರುಣವಾರಿಧಿ ವೆಂಕಟೇಶನ ಚರಣವ |ಕರೆದೊಯ್ದು ತೋರೆನಗೆ 1ವಾರಿಯೊಳುದಿಸಿದ ನಾರಿಯ ಮಧ್ಯದಿ |ಏರಿಯೆ ಕುಳಿತವನ ||ವಾರಿಜವದನದಿ ತೋರಿದ ಸಾರದಿ |ಮೂರೊಂದು ಪೆಸರವನ ||ಮೇರುವಿನಗ್ರದಿ ಊರಿದ ಚರಣವ |ಸಾರಿದವರ ಜೀವನ ||ಊರಿಗೆ ಕರೆದೊಯ್ದು ಶ್ರೀ ವೆಂಕಟೇಶ ಪ-||ದಾರವಿಂದವ ತೋರೆನಗೆ 2ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ |ಮಾತೆಯ ಸಲಹಿದನ ||ನೀತಿ ತಪ್ಪಿಯೆ ನಡೆವ ವಾತಭಕ್ಷಕರನ್ನು |ಘಾತಿಸಿ ತರಿದವನ ||ನೂತನವಾಗಿಹ ನಾಮ ಶೈಲದ ಮೇಲೆ |ಕಾತರದೊಳು ನಿಂದನ ||ಪಾತಕನಾಶನ ಶ್ರೀವೆಂಕಟೇಶನ |ರೀತಿಯ ತೋರೆನಗೆ 3ಋಷಿಯ ಮಕ್ಕಳನೆಲ್ಲ ಹಸಿವಿಗೆ ಗುರಿಮಾಡಿ |ವಶತಪ್ಪಿ ನಡೆವವನ ||ಬಸಿರೊಳಗುದಿಸಿಯೆ ಬಿಸಿಯನೆಲ್ಲವ ಅಂದು |ಎಸೆವ ಮಹಾವೀರನ ||ಪೆಸರೊಳಗೊಪ್ಪಿದ ಹಸನಾದ ಗಿರಿಯೊಳು |ಕುಶಲದಿ ನಿಂದವನ ||ನಸುಮುದ್ದು ಶ್ರೀ ವೆಂಕಟೇಶನ ಚರಣದ |ಬಿಸರುಹ ತೋರೆನಗೆ 4ಪಾದನಾಲ್ಕನು ಮೋದಿನಿಯೊಳಗೂರಿಯೆ |ಆದರಿಸುತ ಬಪ್ಪನ ಮೇ ||ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ |ಕಾದು ಕೊಳ್ಳುತಲಿಪ್ಪನ ||ಆದಿಯ ನಾಮಕ್ಕೆ ಅದ್ರಿಯನೊಡಗೊಂಡು |ಹಾದಿಯನಿತ್ತವನ ||ಸಾಧಿಸಿ ಇಂತಹ ಶ್ರೀ ವೆಂಕಟೇಶನ |ಪಾದವ ತೋರೆನಗೆ 5ಆದಿನಾರಾಯಣನೆಂಬ ಪರ್ವತನು |ಭೇದಿಸಿ ನಿಂತವನ ||ಸಾಧಿಸಿ ಮುಂದಣ ವೆಂಕಟಾದ್ರಿಯ ಮೇಲೆ |ಪಾದವನೂರಿದನ ||ಮೇದಿನಿಯೊಳಗುಳ್ಳ ಸಾಧುಭಕ್ತರನೆಲ್ಲ |ಕಾದುಕೊಳ್ಳುತಲಿಪ್ಪನ - ವಿ ||ನೋದ ಮೂರುತಿಯಾದ ಶ್ರೀ ವೆಂಕಟೇಶನ |ಪಾದವ ತೋರೆನಗೆ 6ಅತ್ತೆಯ ವರಿಸೆಯೆ ಮೆತ್ತ ಅಳಿಯಗಾದ |ಪುತ್ರಿಯ ತಂದವನ ||ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ |ನಿತ್ಯದೊಳಿರುತಿಪ್ಪನ ||ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ |ಪುತ್ರನೆಂದೆನಿಸಿದನ ||ಹತ್ತಿರ ಕರೆದೊಯ್ದು ಪುರಂದರವಿಠಲನ |ನಿತ್ಯದಿ ತೋರೆನಗೆ 7
--------------
ಪುರಂದರದಾಸರು