ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಐದನೆ ವರ್ಷದ ಅಂತ್ಯ ಭಾಗದೊಳಗೆ ಐದುವೊ ಮಾರ್ಗವನು ನಿಶ್ಚಯಿಸಿದೆ ಪ. ಆದಿಮಾಸದ ಶುದ್ಧನವಮಿ ಸ್ಥಿರವಾರದಲಿ ಮೋದಗುರುಗಳು ಬೋಧಿಸೆ | ದಯದಿ ಅ.ಪ. ಐದನೆ ತಿಂಗಳಲಿ ಅಂಕುರುವು ಪಲ್ಲೈಸಿ ಐದು ಇಂದ್ರಿಯವು ಕಲೆತು ಕಾಯ ಐದಲಾರದು ಜೊತೆಗೆ ಕರ್ಮ ಒಂದು ಈ ದಿವ್ಯ ಮತಿಯೆನಗೆ ಸಾದರದಿ ಪುಟ್ಟಲು ಮೋದವಾಗುತ ಮನದೊಳು ಆದಿದೈವನ ಕರುಣವಾದ ಬಳಿಕಿನ್ನೇನು ಪಾದಪದ್ಮವ ತೋರೆಲೊ | ಸ್ವಾಮಿ 1 ಐದೆರಡು ಒಂದು ಇಂದ್ರಿಯಗಳನೆ ಬಂಧಿಸಿ ಐದಿಸಿ ಮೂಲಸ್ಥಳಕೆ ಐದು ರೂಪಾತ್ಮಕನ ಆದರದಿ ಪೂಜಿಸುತ ಐದೊಂದು ದೂರ ತ್ಯಜಿಸಿ ಐದು ನಾಲ್ಕು ತತ್ವದಧಿಪತಿಗಳನು ಆದರದಿ ಧ್ಯಾನಮಾಡಿ ಐದು ಮೂರು ದಳದಿ ಆದಿತ್ಯನಂತಿರುವ ಶ್ರೀಧರನ ನುತಿಸಿ ನುತಿಸಿ | ಸ್ತುತಿಸಿ 2 ಐದು ಭೇದಗಳ ಮತ ಸ್ಥಾಪಕರ ಕರುಣದಲಿ ಐದು ಮೂರನೆ ಖಂಡಿಸಿ ಐದೆರಡು ರೂಪಕನ ಆದರದಿ ಸ್ತುತಿಸುತ್ತ ಭೇದಿಸಿ ಹೃದಯಗ್ರಂಥಿ ಶ್ರೀದ ಶ್ರೀಗೋಪಾಲಕೃಷ್ಣವಿಠ್ಠಲನ ಪದ ಆದರದಿ ನಂಬಿ ಸ್ತುತಿಸಿ ಈ ದಾರಿ ಕಾಣಲು ಇದಕೆ ಕಾರಣದಿವ್ಯ ಮೋದ ಶ್ರೀಗುರು ಕರುಣವೋ | ದಯವೋ 3
--------------
ಅಂಬಾಬಾಯಿ
ಶ್ರೀಮದನಂತನೀತಾ ಶ್ರೀಮದನಂತನೀತಾ | ಸೀಮರಹಿತಾ ಮಹಿಮನೀತಾ | ನಾಮ ನೆನೆಯೆ ಒಲಿದು ನಿಷ್ಕಾಮ ಫಲವ ನೀವಾನೀತ ಶ್ರೀಮದಾನಂತನೀತನು ಪ ಆದಿದೈವನೀತಾ ಜೀವಾದಿಗಳಿಗಭಯದಾನೀತಾ | ಶ್ರೀಧರಣಿ ದುರ್ಗಾರಮಣನಾದಾತನೊದಾನೀತಾ | ವೇದಪಾಲಕನೀತಾ ಸನಕಾದಿಗಳಿಗೆ ಪ್ರೀತಾನೀತಾ | ನಿತ್ಯ ಸಾಧುಗಳ ಕಾಯಿದನೀತಾ1 ಗಜವರದನೀತಾ ಗಂಗಜನ ಮನೋಭೀಷ್ಟನೀತಾ | ಗಜ ರಜಕ ಬಿಲ್ಲು ಮಲ್ಲರ ವ್ರಜನನಾಳಿದ ದಿಟ್ಟಿನೀತಾ | ತ್ರಿಜಗ ವಂದಿತಾನೀತಾ ಅಂಗಜನ ಪೆತ್ತ ಪ್ರೇಮನೀತಾ | ಪಂಕಜ ಬಾಂಧವನ ಭಾಸನೀತಾ2 ಕಪಟನಾಟಕನೀತಾ ಕರಡಿ ಕಪಿಗಳನಾಳಿದನೀತಾ | ಕಪಿಲಮುನಿಯಾಗಿ ತಾಯಿಗೆ ಉಪದೇಶವ ಪೇಳಿದನೀತಾ | ದ್ರುಪದಸುತೆಯ ಕಾಯದನೀತಾ ಸ್ವಪ್ನ ಸುಷುಪ್ತಿ ಜಾಗ್ರದಾವಸ್ಥೆಗೆ ಗುಪುತವ್ಯಾಪಕ ಗುಣನೀತಾ3 ಪರಮ ಪುರುಷನೀತಾ ದಶಶಿರನ ಕುಲವನಳಿದನೀತಾ | ಗಿರಿಯಲಿ ಧರಿಸಿ ಲೋಕವ ಪೊರೆವ ವಿಶ್ವಾಧಾರನೀತಾ | ಹರನ ವೈರಿಯ ಕೊಂದನೀತಾ | ನಿರುಪಮ ಮೂರುತಿನೀತಾ | ಸುರರಿಗೆ ಉಣಿಸಿದನೀತಾ | ತರಳ ಲೀಲೆಯ ತೋರಿದನೀತಾ4 ನಿತ್ಯ ಜಪತಪಾದಿಗೆ ನೇಮಪ್ರಕಾರ ಚೇಷ್ಟಕನೀತಾ | ಸಾಮ ಲೋಲ ವಿಜಯವಿಠ್ಠಲ ತಾಮರಸನಾಭನೀತಾ 5
--------------
ವಿಜಯದಾಸ
ಸೇತು ಮಾಧವರಾಯನಿಗೆ | ನೀನೆ | ಪ್ರೀತಿಯಾದವಾ | ಭೂತಳದೊಳಗತಿ ಖ್ಯಾತಿ ಮಾರುತಿ ದೇವಾ ಪ ಶ್ವೇತ ಶರೀರ | ಭೂತನಾಥನ ಪ್ರಿಯಾ ಭುಜಗಾಧಿಪಶಯ್ಯಾ | ಮಾತು ಮಾತಿಗೆ ನಗುತ ನೋಡುವ ದೇವ 1 ಭಕುತಿಕೊಡು ಬೇಗ ಎನಗೆ ಶ್ರೀ ಲಕುಮಿಪತಿ ಈಗ | ವಿಕಸಿತ ಮಹಾಕೃತು ಮಹಿಮಾ 2 ಆದಿದೈವನೆ ಸಕಲ ಜೀವಾದಿ ಭೇದವೆ | ಯಾದವ ಕುಲಮಣಿಯಾದ ಅಣೋರಣಿ |ಮಾಧವ ವಿಜಯವಿಠ್ಠಲ ರಘುರಾಮಾ 3
--------------
ವಿಜಯದಾಸ