ಕಂಡರ ಕಾಣಬೇಕು ಮಂಡಲ ದೊಡೆಯನ
ತುಂಡ ಮುಂಡಾಗ್ಹೋಗುದು ಖಂಡಿ ತಾಗ್ಯನುಮಾನ ಧ್ರುವ
ಕಾಣುವದೊಂದೆ ಖೂನ ಜ್ಞಾನಾಗಬೇಕು ಪೂರ್ಣ
ಸ್ವಾನುಭವದ ಸ್ಥಾನ ತಾನೆ ಗುರು ನಿಧಾನ 1
ಸಾಧಿಸಲಿಕ್ಕ್ಯುಪಾಯ ಇದೆ ಸದ್ಗುರು ಕೈಯ
ಬೋಧಿಸುವ ನಮ್ಮಯ್ಯ ಆದಿತತ್ವದ್ಹಾದಿಯ 2
ತನ್ನಿಂದ ತಾನೆ ಎಂದು ಕಣ್ಣಿನೊಳಾದ ಸಿಂದು
ಧನ್ಯಗೈಸಿದ ಮಹಿಪತಿ ಗುರು ಕೃಪಾಸಿಂಧು3