ಗುರುಭಕ್ತನೆ ಭಕ್ತ ಮೂರುಗುಣಕೆ ತಾ ವಿರಕ್ತ ಧ್ರುವ
ನಾದಬಿಂದು ಕಳೆಯು ಭೇದಿಸಿದವಗ್ಯಾತರ ಚಳಿಯು
ಆದಿತತ್ವದ ಕಳೆಯು ಎದುರಿಟ್ಟು ದಾವನ ಬಳೆಯು 1
ಆಶಾಪಾಶಕೆ ಸಿಲ್ಕಿ ಮೋಸಹೋಗನು ಎಂದಿಗೆ ಹೋಕ
ವಾಸುದೇವನ ಸಖ ಭಾಸುತಿಹುದು ಆವಾಗನೇಕ 2
ಅಲ್ಪನಲ್ಲವೆ ತಾನು ಕಲ್ಪತರು ಕಾಮಧೇನು
ಕಲ್ಪನೇಕರಹಿತನು ನಿಲುಕಡೆ ಕಂಡಿಹ್ಯ ನೆಲೆನಿಭನು 3
ಯೋಗಿ ನಾ ನೀನೆಂಬುದು ನುಡಿಯಲಿ ತ್ಯಾಗಿ
ಭೋಗಿ ಜನನ ಮರಣ ಕಳೆದಿಹ ನೀಗಿ4
ಅಮೃತ ಸ್ವಾದ ನೀಡುವ ಭಯ ನಿಜವಾದ
ಬೋಧ ಪಾದ 5