ಒಟ್ಟು 8 ಕಡೆಗಳಲ್ಲಿ , 1 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರಿಗೆ ಬಂದರೆ ದಾಸಯ್ಯ - ನಮ್ಮಕೇರಿಗೆ ಬಾ ಕಂಡ್ಯ ದಾಸಯ್ಯ ಪ ಕೈಲಿ ಕೋಲು ಕೊಳಲು ದಾಸಯ್ಯಕಲ್ಲಿಗೆ ವರವಿತ್ತೆ ದಾಸಯ್ಯಮಲ್ಲನ ಮರ್ದಿಸಿ ಮಾವನ ಮಡುಹಿದನೀಲಮೇಘಶ್ಯಾಮ ದಾಸಯ್ಯ 1 ಕೊರಳೊಳು ವನಮಾಲೆ ದಾಸಯ್ಯ - ಬಲುಗಿರಿಯನು ನೆಗಹಿದೆ ದಾಸಯ್ಯಇರುಳು ಹಗಲು ನಿನ್ನ ಕಾಣದೆ ಇರಲಾರೆಮರುಳು ಮಾಡುವಂಥ ದಾಸಯ್ಯ 2 ಆದಿನಾರಾಯಣ ದಾಸಯ್ಯಮೋದದೊಂದು ಸಾಸಿರ ನಾಮದ ದಾಸಯ್ಯಮೇದಿನಿಯೊಳು ಪುಟ್ಟಿ ಗೋವ್ಗಳ ಕಾಯ್ದಆದಿಕೇಶವರಾಯ ದಾಸಯ್ಯ3
--------------
ಕನಕದಾಸ
ಏನು ಮಾಡಲಯ್ಯ ಬಯಲಾಸೆ ಬಿಡದು ಪ ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ಅ ಜ್ಯೋತಿರ್ಮಯವಾದ ದೀಪದ ಬೆಳಕಿಗೆ ತಾನುಕಾತರಿಸಿ ಬೀಳುವ ಪತಂಗದಂದದಲಿಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ 1 ಅಂದವಹ ಸಂಪಗೆಯ ಅರಳ ಪರಿಮಳವುಂಡುಮುಂದುವರಿಯದೆ ಬೀಳ್ವ ಮಧುಪನಂತೆಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂಗಂಧ ವಾಸಿಸುವ ಘ್ರಾಣೇಂದ್ರಿಯಕೆ 2 ಗಾಣದ ತುದಿಯೊಳಿಪ್ಪ ಭೂನಾಗನಂ ಕಂಡುಪ್ರಾಣಾಹುತಿಯೆಂದು ಸವಿವ ಮೀನಿನಂತೆಏಣಾಕ್ಷಿಯರ ಚೆಂದುಟಿಯ ಸವಿಯ ಸವಿಸವಿದುಜಾಣತನದಲಿ ನಲಿವ ಜಿಹ್ವೇಂದ್ರಿಯಕೆ 3 ದಿಮಿದಿಮ್ಮಿ ಘಣಘಣಾ ಎಂಬ ಘಂಟೆಯ ರವಕೆಜುಮುಜುಮನೆ ಬೆಮೆಗೊಳ್ಳುವ ಹರಿಣದಂತೆರಮಣಿಯರ ರಂಜಕದ ನುಡಿಗಳನು ಕೇಳಿ ಪ್ರ-ಣಮವೆಂದು ತೋಷಿಸುವ ಕರ್ಣೇಂದ್ರಿಯಕೆ 4 ತ್ವಕ್ಕು ಮೊದಲಾದ ಪಂಚೇಂದ್ರಿಯಗಳೊಳು ಸಿಕ್ಕಿಕಕ್ಕುಲಿತೆಗೊಂಬುದಿದ ನೀನು ಬಿಡಿಸೊಸಿಕ್ಕಿಸದಿರು ಸಿಕ್ಕಿಗೆ ಆದಿಕೇಶವರಾಯದಿಕ್ಕಾಗಿ ನಿನ್ನಂಘ್ರಿಯೊಳೆನ್ನ ಮನವನಿರಿಸೊ 5
--------------
ಕನಕದಾಸ
ಕೊಡಲು ನೀನಾರು ಬಿಡಲು ನೀನಾರುಪೊಡವಿಗೊಡೆಯ ಶ್ರೀಹರಿ ಲೀಲೆಯದು ಪ ಪಾಡುವ ಪದ್ಯಗಳಲಿ ಭಾವವಾಗಿರುವನೋಡುವ ನೋಟಗಳ ನೋವು ಗ್ರಹಿಸುವನುಡಿವ ನುಡಿಯ ತಾತ್ಪರ್ಯವನರಿವನಾಡಿ ನರಗಳಂತೊಲಿವ ಆದಿಕೇಶವರಾಯ 2
--------------
ಕನಕದಾಸ
ತೊರೆದು ಜೀವಿಸುಬಹುದೆ ಹರಿ ನಿನ್ನ ಚರಣವನುಬರಿಯ ಮಾತೇಕಿನ್ನು ಅರಿತು ಪೇಳುವೆನಯ್ಯ ಪ ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದುದಾಯಾದಿ ಬಂಧುಗಳ ಬಿಡಲುಬಹುದುರಾಯ ಮುನಿದರೆ ಮತ್ತೆ ರಾಜ್ಯವನು ಬಿಡಬಹುದುಕಾಯಜಪಿತ ನಿನ್ನಡಿಯ ಬಿಡಲಾಗದು 1 ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದುಪಡೆದ ಕ್ಷೇತ್ರವ ಬಿಟ್ಟು ಪೋಗಬಹುದುಮಡದಿ ಮಕ್ಕಳ ಕಡೆಗೆ ತೊಲಗಿಸಿಯು ಬಿಡಬಹುದುಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು 2 ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದುಮಾನಾಭಿಮಾನ ತಗ್ಗಿಸಲು ಬಹುದುಪ್ರಾಣನಾಯಕನಾದ ಆದಿಕೇಶವರಾಯಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು 3
--------------
ಕನಕದಾಸ
ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ ಪ ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿಮನಸಿಜನೊಡೆಯನೆ ಕನಕಗರ್ಭನ ಜನಕ ಅ ಮಚ್ಚ್ಯಾವತಾರ ನೀನಾದರೆ - ಆಕೆಮಚ್ಚ್ಯಗಂಗಳೆ ತಾನಾದಳೊಹೆಚ್ಚಿನ ಶಂಖವ ಪಿಡಿದರೆ - ಆಕೆನಿಚ್ಚ ಶಂಖಕಂಠಳಾದಳಯ್ಯ 1 ನೀಲವರ್ಣ ನೀನಾದರೆ - ಆಕೆನೀಲಕುಂತಳೆ ತಾನಾದಳೊಲೋಲ ಕಮಲನಾಭನಾದರೆ - ಆಕೆಬಾಲ ಕಮಲಮುಖಿಯಾದಳಯ್ಯ2 ಬೆಟ್ಟವ ನೀನೊಂದು ಪೊತ್ತರೆ - ಆಕೆಬೆಟ್ಟದಂಥ ಕುಚವೆರಡು ಪೊತ್ತಳೊಮೆಟ್ಟಿ ಶೇಷನ ನೀ ತುಳಿದರೆ - ಆಕೆಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ3 ಗಜರಾಜವರದ ನೀನಾದರೆ - ಆಕೆಗಜಗಮನೆಯು ತಾನಾದಳಯ್ಯನಿಜ ನರಸಿಂಹ ನೀನಾದರೆ - ಆಕೆಭಜಿಸಿ ಸಿಂಹಮಧ್ಯೆಯಾದಳಯ್ಯ 4 ಈ ಪರಿಯೊಳು ನೀನು ಜನಿಸಿದೆ - ಭಲೆಭಾಪುರೆ ಬಾಡದೊಳು ನೆಲೆಸಿದೆಗೋಪಿಯರ ಮೋಹ ಸಲಿಸಿದೆ - ಚೆಲುವಶ್ರೀಪತಿ ಆದಿಕೇಶವರಾಯ ಮೆರೆದೆ5
--------------
ಕನಕದಾಸ
ಯಾದವರಾಯ ಬೃಂದಾವನದೊಳು ವೇಣುನಾದವ ಮಾಡುತಿರೆ ಪ ರಾಧೆ ಮುಂತಾದ ಗೋಪಿಯರೆಲ್ಲಮಧುಸೂದನ ನಿಮ್ಮನು ಸೇವಿಸುತ್ತಿರೆ ಅ ಸುರರು ಅಂಬರದಿ ಸಂದಣಿಸಿರೆ ಅ-ಪ್ಸರ ಸ್ತ್ರೀಯರು ಮೈಮರೆದಿರೆಕರದಲಿ ಕೊಳಲನೂದುತ ಪಾಡುತಸರಿಗಮ ಪದನಿ ಸ್ವರಗಳ ನುಡಿಸುತ 1 ಹರಬ್ರಹ್ಮರು ನಲಿದಾಡುತಿರೆ ತುಂ-ಬುರು ನಾರದರು ಪಾಡುತಿರೆಪರಿಪರಿ ವಿಧದಲಿ ರಾಗವ ನುಡಿಸುತತುರು ಹಿಂಡುಗಳ ಕೂಡುತ ಪಾಡುತ2 ತುರು ಹಿಂಡುಗಳ ತರತರದಲಿ ತನ್ನಕರದಿಂ ಬೋಳೈಸಿ ಸಂತೈಸುತಅರವಿಂದ ನಯನ ಆದಿಕೇಶವರಾಯಕರುಗಳ ಸಹಿತ ಗೋವ್ಗಳ ತಿರುಹುತ3
--------------
ಕನಕದಾಸ
ರಂಗ ಬಾರೋ ರಂಗಯ್ಯ ಬಾರೋ - ನೀ ಪ ಬಾರದಿದ್ದರೆ ಎನ್ನ ಪ್ರಾಣ ಉಳಿಯದು ಅ ಅತ್ತಿಗೆ ಮೈದುನ ಬಾರೊ ಅತ್ತೆಯ ಮಗಳ ಗಂಡಅತ್ತಿಗೆ ಮೇಲತ್ತಿಗೆ ನಾದಿನಿ ಸೊಸೆಯ ಗಂಡ1 ಮಾವನ ಅಳಿಯನೆ ಬಾರೊ ಮಾವನ ಬೀಗನ ತನುಜಮಾವನ ಮಡದಿಯ ಮಗಳ ತಂಗಿಯ ಗಂಡ 2 ಅಂಬುಧಿ ಶಯನನೆ ಬಾರೊ ಆದಿ ವಸ್ತುವೆ ರಂಗಕಂಬದೊಳು ನೆಲಸಿದ ಆದಿಕೇಶವರಾಯ 3
--------------
ಕನಕದಾಸ
ಸಾಕು ಸಾಕಿನ್ನು ಸಂಸಾರ ಸುಖವು ಪ ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆಅ ಉದಿಸಿದುವು ಪಂಚಭೂತಗಳಿಂದ ಓಷಧಿಗಳುಉದಿಸಿದುದು ಓಷಧಿಗಳಿಂದನ್ನವುಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡುಉದಿಸಿದುವು ಸ್ತ್ರೀ ಪುರುಷರಲ್ಲಿ ಹರಿಯೆ 1 ಮಾಸ ಪರಿಯಂತ ಹರಿಯೆ2 ಮಾಸ ನಖ ರೋಮ ನವರಂಧ್ರಮಾಸ ಏಳರಲಿ ಧಾತು ಹಸಿವು ತೃಷೆಯು 3 ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳಗುಂಗಿನಲಿ ನಾನಿಂತು ಭವಭವದೊಳುಅಂಗನೆಯರುದರದಲಿ ಮತ್ತೆಮತ್ತೆ ಬಂದುಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ 4 ಮಾಸ ಪರಿಯಂತರದಿತನು ಸಿಲುಕಿ ನರಕದಲಿ ಆಯಾಸಗೊಂಡುಘನ ಮರುತ ಯೋಗದಿಂ ನರಳುತಿಲ್ಲಿಗೆ ಬಂದುಜನಿಸುವಲ್ಲಿ ಮೃತಭಾವದಿಂದ ನೊಂದೆನೈ ಹರಿಯೆ 5 ಧರೆಯ ಮೇಲುದಿಸಿ ಬಹು ವಿಷ್ಣು ಮಾಯಕೆ ಸಿಲುಕಿಪರವಶದೊಳಿರಲು ನೀರಡಿಕೆಯಾಗಿಹೊರಳಿ ಗೋಳಿಡುತ ಕಣ್ದೆರೆದು ಹರಿಯನು ಮರೆವದುರಿತ ರೂಪದ ತನುವ ಧರಿಸಲಾರೆ6 ಶಿಶುತನದೊಳಗೆ ಸೊಳ್ಳೆ ನೊಣ ಮುಸುಕಿ ಅತ್ತಾಗಹಸಿದನಿವನೆಂದು ಹಾಲನೆ ಎರೆವರುಹಸಿವು ತೃಷೆಯಿಂದಳಲು ಹಾಡಿ ತೂಗುವರಾಗಪಶು ತೆರದಿ ಶಿಶುತನದೊಳಿರಲಾರೆ ಹರಿಯೆ 7 ನಡೆಯಲರಿಯದ ದುಃಖ ಮನಸಿನಲಿ ಬಯಸಿದುದನುಡಿಯಲರಿಯದ ದುಃಖ ವಿಷಯದಿಂದಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲುನುಡಿವ ಬಾಲ್ಯದೊಳಿರಲಾರೆ ಹರಿಯೆ 8 ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತುಗೋಳಿಡುತ ವಿದ್ಯೆ ಕರ್ಮಗಳ ಕಲಿತುಮೇಲೆ ಯೌವನದ ಉಬ್ಬಿನೊಳು ಮದುವೆಯಾಗಿಬಾಲೆಯರ ಬಯಸಿ ಮರುಳಾದೆ ಹರಿಯೆ9 ಜ್ವರದ ಮೇಲತಿಸಾರ ಬಂದವೊಲು ಯೌವನದಿತರುಣಿಯೊಡನಾಟ ಕೂಟದ ವಿಷಯದಿತರುಣಿ ಸುತರ್ಗನ್ನ ವಸ್ತ್ರಾಭರಣವೆನುತಪರರ ಸೇವೆಯಲಿ ಘಾಡ ನೊಂದೆ ಹರಿಯೆ10 ನೆತ್ತರು ತೊಗಲು ಮೂಳೆ ಮಜ್ಜೆ ಮಾಂಸದ ಹುತ್ತುಜೊತೆಗಿಂದ್ರಿಯಗಳ ರೋಗ ರುಜಿನದಲಿಮತ್ತೆ ಕಾಲನ ಬಾಯ ತುತ್ತಾಗುವ ಕರ್ಮದಕತ್ತಲೆಯೊಳೀ ದೇಹ ಕರಡಾಯಿತು 11 ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರುಕಟ್ಟಿ ಕಾದಿಹರು, ಮುಪ್ಪಡಿಸಿದಾಗತಟ್ಟನೆ ಬಲು ಕೆಟ್ಟ ನುಡಿಗಳಲಿ ಬೈಯುತ್ತಕಟ್ಟಕಡೆಗೆ ಕಣ್ಣೆತ್ತಿ ನೋಡರೈ ಹರಿಯೆ12 ತುಂಬಿ ಮೃತವಾಗಲುಕುಟ್ಟಿಕೊಂಡಳಲುತ್ತ ಹೋಯೆಂದು ಬಂಧುಗಳುಮುಟ್ಟರು ಹೆಣನೆಂದು ದೂರವಿಹರು 13 ಸತ್ತ ಹೆಣಕಳಲೇಕೆ ಎಂದು ನೆಂಟರು ಸುಯ್ದುಹೊತ್ತು ಹೋಯಿತೆನ್ನುತ ಕಸಕೆ ಕಡೆಯಾಗಿಹೊತ್ತು ಕೊಂಡಗ್ನಿಯಲಿ ತನುವನಿದ ಬಿಸಡುವರುಮತ್ತೆ ಬುವಿಯಲಿ ಜನಿಸಲಾರೆ ಹರಿಯೆ 14 ಯೋನಿ ಮುಖದಲಿ ಬಂದುಬನ್ನವನು ಪಡಲಾರೆ ಭವಭವದೊಳುಜನನ ಮರಣಾದಿ ಸರ್ವ ಕ್ಲೇಶಗಳ ಪರಿಹರಿಸಿಸನ್ಮತಿಯೊಳಿರಿಸೆನ್ನ ಆದಿಕೇಶವರಾಯ 15
--------------
ಕನಕದಾಸ