ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಾವಯ್ಯ ಇಹದ ಕುಲಗಳುಆವಾವಯ್ಯ ಇಹದ ಕುಲಗಳುಅಷ್ಟಮದಗಳನ್ನೇ ಗೆದ್ದುಭಾವಶುದ್ಧಿಯಿಂದ ಮುಕ್ತಿಭಾಮಿನಿಯನ್ನು ಸೇರಿದವಗೆ ಪ ಮೂರನಳಿದು ಏಳ ಕಳೆದು ಮೂರ ಖಂಡಿಸಿಏಳ ಮುರಿದು ಆರ ಮೂರ ಮೀರಿದವಗೆ 1 ನಾಕ ಕಳೆದು ಎರಡ ಮರೆತು ನಾಲ್ಕು ಮರೆತು ಎರಡ ತಿಳಿದುನಾಲ್ಕು ಎಂಟು ಎಂಬ ಜರೆದು ನಾಲ್ಕರಲ್ಲಿ ನಿಂತವನೆ2 ಹತ್ತನಟ್ಟಿ ನವವ ಮೆಟ್ಟಿ ಹರಿಯ ಕೋಟಿ ಕಿರಣವೆಂಬತತ್ವ ಚಿದಾನಂದ ತಾನೆ ತಾನೆ ಆದವಗೆ 3
--------------
ಚಿದಾನಂದ ಅವಧೂತರು
ಒಲಿದೆ ಯಾತಕಮ್ಮಾ ಲಕುಮಿವಾಸುದೇವಗೆ ಪ ಶುದ್ಧ ನೀಲವರ್ಣದ ಮೈಯಕಪ್ಪಿನವನಿಗೆ ಹ್ಯಾಗೆ ಅ.ಪ. ಹುಟ್ಟಿದ ಮನೆಗಳ ಬಿಟ್ಟು ಕಳ್ಳ-ದಿಟ್ಟತನದಿ ಗೋಕುಲದಲ್ಲಿ ಬೆಳೆದ ಚಟ್ಟಿ ಸಹಿತ ಹಾಲು ಕುಡಿದ- ಅಲ್ಲಿದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ 1 ಗೊಲ್ಲರ ಮನೆಗಳ ಪೊಕ್ಕು- ಅಲ್ಲಿಗುಲ್ಲು ಮಾಡದೆ ಮೊಸರೆಲ್ಲ ಸವಿದಮೆಲ್ಲನೆ ಸವಿಮಾತನಾಡಿ-ಅಲ್ಲಿಎಲ್ಲ ಸಖಿಯರ ಅಭಿಮಾನಗೇಡಿಗೆ 2 ಮಾವನ ಮರ್ದಿಸಿದವಗೆ -ಅಲ್ಲಿಸೋಳ ಸಾಸಿರ ಗೋಪೇಯರ ಮದುವೆ ಆದವಗೆಹಾವಿನ ಮ್ಯಾಲೊರಗಿದವಗೆಕಾವೇರಿ ತೀರದ ರಂಗವಿಠಲಗೆ 3
--------------
ಶ್ರೀಪಾದರಾಜರು
ಯಾಕೆ ಮರುಳಾದೆಮ್ಮ ಎಲೆ ಭಾರತೀ |ಸಾಕಲಾರದೆ ವಿವಿಧ ರೂಪ ತಾಳ್ದನಿಗೇ ಪ ಕಂಜಾಕ್ಷಿ ಸೀತೆಯನು | ಅರಸಲ್ಕೆ ಅಬ್ಧಿಯನುಅಂಜದಲೆ ಉತ್ತರಿಸಿ | ಶತ್ರು ಮಧ್ಯಾ |ಸಂಜೆಯಲಿ ಕಂಡು | ಕಂಜಾಕ್ಷಿ ಗುಂಗುರವಅಂಜದಲೆ ಇತ್ತಿಹ ಪ್ರ | ಭಂಜನಗೆ ನೀನು 1 ವಿಷದ ಲಡ್ಡಿಗೆಯನ್ನು | ಹಸನಾಗಿ ತಿಂದವನುವಿಷಧಿಯೊಳು ಮುಳುಗಿರಲು | ವಿಷಗಣವು ಕಡಿಯೇ |ವಿಷಗಣವು ಪಲ್ಮುರಿದು | ಅಸುವ ನೀಗಲು ಕ್ಷಣದಿವಿಷ ಮರೆದೆ ಕಲಕುತಲಿ | ವಸುಧೆಯಾಳ್ದನಿಗೇ 2 ವಿಪಿನ | ಪ್ರಧ್ವಂಸಕಾನಳಗೇ 3 ಖೇಚರನು ತಾನು ನೀ | ಶಾಚರರ ಸಂಹರಿಸಿಪಾಚಕನು ಮತ್ತಾಗಿ | ಕೀಚಕರ ಸವರೀ |ಯಾಚಿಸುತ ಭಿಕ್ಷಾನ್ನ | ವಾಚಿಸುತ ಸಚ್ಛಾಸ್ತ್ರಮೋಚಕನು ಆದವಗೆ | ಯೋಚಿಸಿಯು ಕೈಪಿಡಿದೇ4 ಎಂಜಲೆಡೆಯನು ಕೊಂಡು | ಅಂಜದಲೆ ಮರಕ್ಹಾರಿಸಂಜೆ ಚರಳೆರ ಕೊಂದಧ | ನಂಜಯ ನಿ ಗೊಲಿದ |ಕಂಜಾಕ್ಷನಾದ ಗುರು | ಗೋವಿಂದ ವಿಠಲ ಪದಕಂಜ ಭಜಿಸುವ ಭಾವಿ | ಕಂಜ ಸಂಭವಗೇ 5
--------------
ಗುರುಗೋವಿಂದವಿಠಲರು
ಶರಣು ಹೋಗುವೆನಯ್ಯ ನಾನು ಪ ಸಿರಿ ಅಜಭವ ಶಕ್ರ ಸುರಸ್ತೋಮಗಳನೆಲ್ಲ ಸರಸದಿಂದ ಆಳ್ವ ಪರಮಪುರುಷ ಹರಿಗೆ ಶಿರಬಾಗಿ ನಮಿಸುತ ಅ.ಪ. ನಿರುತ ಆನಂದದಿ ಮೆರೆದು ಇರುವಂಥ ನಿರಜ ನಿತ್ಯನು ಆದ ಉರಗನ ಮೇಲ್ವರಗುತ ಪರಮ ಪರಾತ್ಪರ ಪರಮವೇದದ ಸಾರ ಪರಮ ಸದ್ಗುಣ ಪೂರ್ಣ ಪುರುಷಸೂಕ್ತ ವಂದ್ಯ ಪರಿಪರಿ ರೂಪದಿ ಸರ್ವತ್ರ ಇರುವಂಥ ನಿರ್ಗುಣ ನಿರಾಕಾರ ನಿರುಪಮ ನಿಸ್ಸೀಮ ನಿರುತ ತೃಪ್ತನು ಆದ ಸರ್ವಸಾರ ಭೋಕ್ತ ಸರ್ವರ ಬಿಂಬನು ಸರ್ವಗುಣ ಪೂರ್ಣ ಸರ್ವರ ಆಧಾರ ಸರ್ವೇಶ ಸ್ವತಂತ್ರ ಸರ್ವಶಬ್ದ ವಾಚ್ಯ ಸರ್ವರಿಂ ಭಿನ್ನನು ಸರಸಸೃಷ್ಟಿಯ ಮಾಳ್ವ ನೀರಜನಾಭಗೆ ಚರಣವ ಪಿಡಿಯುತ್ತ ಉರುಗಾಯನ ದೇವ ಸಲಹು ಸಲಹೆಂದು 1 ವಾರಿಯೊಳಾಡುವ ಭಾರವಹೊರುವ ಕೋರೆಯತೀಡುವ ಕರುಳಾನು ಬಗೆಯುವ ವರವಟು ಆಗುವ ಪರಶುವ ಪಿಡಿಯುವ ನಾರಿಯ ಹುಡುಕುವ ನಾರಿಯ ಕದಿಯುವ ಬರಿಮೈಯ್ಯ ತೋರುವ ತುರುಗವನೇರುವ ನಾರಿಯು ಆದವ ಭಾರತ ಮಾಡುವ ವರ ಸಾಂಖ್ಯ ಹೇಳುವ ಕರಿಯನು ಪೊರೆಯುವ ಪೋರಗೆ ಒಲಿದವ ವರ ಋಷಭನಾದ ಹರಿ ಯಜ್ಞ ನಾದವ ತರಿವ ರೋಗಂಗಳ ವರಹಂಸ ರೂಪನು ತುರುಗ ವೇಷಧಾರಿ ನಾರಾಯಣ ಮುನಿಯೆ ಗುರು ದತ್ತಾತ್ರೇಯನೆ ಪರಿಸರ ಪರಮಾಪ್ತ ಪೊರೆಯೊ ಮಹಿದಾಸನೆಂದು ಕರವೆತ್ತಿ ಮುಗಿಯುತ 2 ಪಾಪಿಯ ಪೊರೆದವಗೆ ತಾಪ ಇಲ್ಲದವಗೆ ಅಪವರ್ಗದಾತಗೆ ವಿಪನ ಏರಿದವಗೆ ಗೋಪತಿಯಾದವಗೆ ತಾಪವ ಮೆದ್ದವಗೆ ಚಾಪವ ಮುರಿದವಗೆ ಚಪಲ ಇಲ್ಲ ದವಗೆ ಕಪಟರ ವೈರಿಗೆ ಗುಪ್ತದಿ ಇರುವಗೆ ವಿಪ್ರನ ಸಖನಿಗೆ ಅಪ್ರಮೇಯನಿಗೆ ಗೋಪೇರ ವಿಟನಿಗೆ ತಾಪಸ ಪ್ರೀಯಗೆ ವಿಪ್ರಶಿಶು ತಂದವಗೆ ಮುಪ್ಪಿಲ್ಲ ದವಗೆ ತ್ರಿಪುರಾರಿ ಸಖಗೆ ಕೃಪಣ ವತ್ಸಲನಿಗೆ ತಪ್ಪು ಮಾಡದವಗೆ ಆಪ್ತತಮನಿಗೆ ಸಪ್ತ ಶಿವವ್ಯಕ್ತನಿಗೆ ಶ್ರೀಪತಿಯಾದವಗೆ ಕಪಟನಾಟಕ ಪ್ರಭು ಗೋಪಾಲಕೃಷ್ಣಗೆ ಒಪ್ಪಿಸಿ ಸರ್ವಸ್ವ ಅಪ್ಪನೆ ಅಪ್ಪನೆ ತಪ್ಪದೆ ಸಲಹೆಂದು 3 ಅನ್ನವು ಆದವಗೆ ಅನ್ನಾದ ನೆಂಬುವಗೆ ಅನ್ನದ ಖ್ಯಾತನಿಗೆ ಚಿನ್ಮಯ ರೂಪಗೆ ಬೆಣ್ಣೆಯ ಕಳ್ಳಗೆ ಅನಾಥನಾದವಗೆ ಕನಕಮಯನಿಗೆ ಅನಂತರೂಪನಿಗೆ ಉಣ್ಣದೆ ಇರುವವಗೆ ಉಣ್ಣುತ ಉಣಿಸುವವಗೆ ಜ್ಞಾನಿಗಮ್ಯನಿಗೆ ಜ್ಞಾನ ದಾಯಕನಿಗೆ ಗುಣತ್ರಯ ದೂರಗೆ ಭಾನುವ ತಡೆದವಗೆ ಆನತ ಬಂಧುವಿಗೆ ಅನುಪಮನಾದವಗೆ ತನುಮನ ಪ್ರೇರಿಪಗೆ ದಾನವ ವೈರಿಗೆ ತನ್ನಲ್ಲೆ ರಮಿಸುವನಿಗೆ ಮನ್ಮಥ ಪಿತನಿಗೆ ಪೆಣ್ಣಿನ ಪೊರೆದವಗೆ ಅಣುವಿಗೆ ಅಣುವಿಹಗೆ ಘನಕೆ ಘನ ತಮನಿಗೆ ಕಣ್ಣಿಲ್ಲದೆ ನೋಳ್ಪ ಉನ್ನತ ಪ್ರಭುವಿಗೆ ಬೆನ್ನು ಬೀಳುವೆ ನಾನು ಇನ್ನು ಕಾಯೋ ಎಂದು 4 ಹೇಯನಾಗದ ಶೃತಿ ಗೇಯನು ಸುಜನರ ಪ್ರೀಯನು ಸರ್ವರ ಕಾಯುವ ಸುಂದರ ಹಯಮುಖ ಸರ್ವದ ಪ್ರಾಯದಿ ಮೆರೆಯುವ ಗಾಯನ ಪ್ರಿಯನಾದ ಮಾಯಾರಮಣ ಭಾವ ಮಾಯೆ ಹರಿಸಿ ಮುಕ್ತಿ ಭಾಗ್ಯ ಭಕ್ತರಿಗೀವ ತೋಯಜಾಂಬಕ ಸುರ ನಾಯಕರಿಗೆ ಭಕ್ತಿ ತೋಯದಿ ಮುಳುಗಿಪ ಶ್ರೀಯರಸಾಭಯ ದಾಯಕ ಗುರು ಮಧ್ವ ರಾಯರ ಪ್ರಿಯನಾದ ಜೇಯ ಜಯಮುನಿ ವಾಯುವಿನ ಅಂತರದಿ ನವನೀತ ಧರಿಸಿರ್ಪ ತಾಂಡವ ಸಿರಿಕೃಷ್ಣ ವಿಠಲ ರಾಯನಿಗೆ ಕಾಯ ವಾಚಮನದಿ ಗೈಯ್ಯುವ ಸಕಲವನು ಈಯುತ ನಮಿಸುತ ಜೀಯನೆ ಜೀಯನೆ ಕಾಯಯ್ಯ ಕಾಯೆಂದು 5
--------------
ಕೃಷ್ಣವಿಠಲದಾಸರು