ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಭಗವಂತನ ಸಂಕೀರ್ತನೆ ಅಪ್ರಮೇಯ ಆದರಿಸೋ ಎನ್ನ ಪ ಸ್ವಪ್ರಕಾಶಾನಂದರೂಪನೆ ಅ.ಪ ತಪ್ಪುಗಳೆಣಿಸದೆ ದಾಸನೆಂತೆಂದು 1 ನಿನ್ನದರುಶನದಿಂದಾ ಧನ್ಯರಾಗುವರುಜನರು ಪುಣ್ಯವಂತರಾಗಿಹವರವ ಪಡೆವರು 2 ಮಾರಜನಕ ಗುರುರಾಮ ವಿಠಲ 3
--------------
ಗುರುರಾಮವಿಠಲ
ಕಾಯ ಬೇಕಿವಳಭಯ ಕೃತು ಭಯನಾಶ | ದಯದೋರೊ ಶ್ರೀಶ ಪ ವಾದೀಭ ಮೃಗರಾಜ | ವಾದಿರಾಜರ ದಯದಿಸಾಧನಕೆ ಹೆದ್ದಾರಿ | ನೀ ದಯದಿ ತೋರೀಮೋದ ತೀರ್ಥರ ಸಮಯ | ಧ್ಹಾದಿಯಲಿ ನಡೆವಂತೆಹೇ ದಯಾಂಬುಧಿ ಚೆನ್ನ | ಆದರಿಸೋ ಘನ್ನ 1 ಚಂದ್ರ ಸಮ ಸಂಕಾಶ | ಸಂಧಿಸಲು ಸ್ವಪ್ನದಲಿಇಂದು ಭಾಗ ನಿವಾಸ | ಸಂದರ್ಶನಿತ್ತೂ ಕಂದಿದ್ದ ಕನ್ಯೆಗೇ | ನಂದ ದಾಯಕನಾಗಿಸುಂದರನೆ ನರರೂಪಿ | ಸಂಧಿಸಿದೆ ಭಾಗ್ಯ 2 ಚಂದ್ರ ವದನೆಯು ಲಕುಮಿ | ಮಂದಿರಕೆ ಬರುತಲ್ಲೆನಿಂದಿರಲು ಸೌಭಾಗ್ಯ | ಸಂಧಿಸದೆ ಇಹುದೇಇಂದಿರಾರಾಧವಪದ | ಮಂದಸ್ಮಿತಾನನನೆಮಂದಿಯೊಳಗೀ ಶಿಶುವ | ಛಂದಾಗಿ ಸಲಹೋ 3 ಹರಿಗುರು ಸದ್ಭಕ್ತಿ | ಪರತತ್ವ ಸುಜ್ಞಾನ ಕರುಣಿಸುತ್ತ ಸಂತೈಸು | ಸುರ ವರೇಣ್ಯಾ |ಮರುತಾಂತರಾತ್ಮ ನಿ | ನ್ಹೊರತು ಅನ್ಯರ ಕಾಣೆಪರಿ ಹರಿಸೊ ಪ್ರಾಚೀನ | ಕರ್ಮಾಂಧ ಕೂಪಾ 4 ಭಾವಜ್ಞ ನೀನಾಗಿ | ಭಾವದೊಳು ಮೈದೋರೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಸ್ಮರಿಸೋ ಆದರಿಸೋ ಆನಮಿಸೊ, ಮಾನವನೆ ಗುರುಪದವ ಪೊಂದು ಮುದವ ಹೇ ಮನವೇ ನೀ ಸ್ಮರಿಸೋ ಪ ದುರಿತ ತಿಮಿರಕೆ ತರಣಿ ಸಮರೆಂದೆನಿಸಿ ದ್ವಿಜರೊಳು ಮೆರೆದು ವಿಭವದಿ ಕರೆದು ಛಾತ್ರರ ಪೊರೆದ ಐಕೂರು ನರಶಿಂಹಾರ್ಯರ ಅ.ಪ ವರವೆಂಕಟಾರ್ಯರ ತರುಣಿ ಸೀತಾಗರ್ಭ ಶರಧಿಯಿಂದ ಜನಿಸಿದ ಶಶಿಯ ತೆರದಿ ಧರಿಸಿ ವಿಪ್ರತ್ವವನು ಶೀಘ್ರದಿ ಇರಿಸಿ ದ್ವಿತಿಯಾಶ್ರಮದಿ ಪದವನು ಚರಿಸುತಲೆ ಸಾಧನಸುಮಾರ್ಗದಿ ಕರೆಸಿದರು ವರಭಾಗವತರೆಂದು 1 ಹರಿಪದದಲಿ ಮನವಿರಿಸಿ ದುರ್ವಿಷಯಧಿಃ ಕರೆಸಿ ಧಿ:ಕರಿಸಿ ಪ್ರಿತಾಜ್ಞಾನುಸರಿಸಿ ಧರಣಿಯೊಳು ಗುರುಕರುಣದಿಂದಲಿ ಮರುತ ಶಾಸ್ತ್ರವನರಿತು ಕರುಣದಿ ಸರಸದಲಿ ಸಚ್ಛಾಸ್ತ್ರ ಮರ್ಮವ- ನರುಹಿ ಜನರನುಧ್ಧರಿಸಿದವರನು 2 ಕರ್ಮ ಹರಿಯೆ ಮೂಡಿಸುವನೆಂದರಿದು ಅರಿದು ಧ್ಯಾನಿಸುತ ಮೈಮರೆದು ಹರಿಯ ಗುಣಗಳ ಪೊಗಳಿ ಹಿಗ್ಗುತ ಶರಣು ಜನ ಮಂದಾರ ಕಾರ್ಪರ ಶರಣಶಿರಿ ನರಹರಿಯ ಪುರವನು ತ್ವರದಿ ಸೇರಿದವರ ಸುಚರಿತೆಯ 3
--------------
ಕಾರ್ಪರ ನರಹರಿದಾಸರು