ಹದಿನಾರು ಜಾತಿಯವರಣ್ಣಾ
ನಿಮಗೆ ಮದಮತ್ಸರಗಳೇಕೆ ಚಿಣ್ಣಾ ಪ
ಬುದ್ಧರು ಇದರರ್ಥವನು ತಿಳಿದು ನೋಡುವುದರೊಳಗೆ
ಬುದ್ಧಿಹೀನರ ವ್ಯಾಜ್ಯ ಮುಕ್ತಿ ಮಾರ್ಗಕೆ ಪೂಜ್ಯ ಅ.ಪ
ಆದರಿಸುವರೆ ತಾಯಿ ತಂದೆ | ನಾನು
ಮೋದವಡುವುದಕೆಲ್ಲಿ ಬಂದೆ
ಭೇದಗಳು ಮಾಡುವುದು ವಾದಗಳು ತರವಲ್ಲ 1
ಜ್ಞಾನ ಕರ್ಮೇಂದ್ರಿಯಗಳು ಹತ್ತು | ಪಂಚ
ಪ್ರಾಣಗಳು ಸೇರಿಹುದು ಗೊತ್ತು
ನಾನು ಹದಿನೆಂಟನೆಯ ನೀನು ಇದು ನಿಜವಾದ ಮಾತು 2
ಬದ್ಧ ಜಾತಿಗಳಿಂಗೆ ನೇಮಾ
ಮಧ್ವವಲ್ಲಭನಾಜ್ಞೆ ಇದ್ದಂತೆ ಪೇಳಿದೆವು
ಪದ್ಮಾಕ್ಷ ಗುರುರಾಮ ವಿಠಲನಿದಕೆ ಸಾಕ್ಷಿ 3