ಪಿಡಿಯಿರಿ ಪಿಡಿಯಿರಿ ಹರಿ ಚರಣವನು
ಪಡೆಯಿರಿ ಪಡೆಯಿರಿ ಹರಿ ಕರುಣವನು ಪ
ಸ್ಮರಶರ ಬಾಧೆಗೆ ಸಿಲುಕದೆ ಜನರೇ
ಭರದಲಿ ಶ್ರೀ ಹರಿ ಸೇವೆಯನು
ನಿರುತವು ಗೈಯುತ ಕೇಶವನಾಮವ
ಹರುಷದಿ ಸ್ಮರಿಸುತ ಭಜಿಸುತಲೀ 1
ದನುಜ ಭಂಜನನಾದ ಕೇಶವ ಸೇವೆಯ
ತನು ಮನ ಧನದಿಂದ ಗೈಯುತಲೀ
ಅನುದಿನ ಶ್ರೀ ಹರಿ ಕೀರ್ತನೆ ಮಾಡುತ
ಮನುಜ ರಂಜನನನ್ನು ಸವಿಸುತಲೀ 2
ಸುಜನರ ಪಾವನ ಶರಣರ ತಾತನ
ಕುಜನರ ಕಾಲನ ಆದರದೀ
ಭಜನೆಯ ಮಾಡುತ ದೂರ್ವಾಪುರವನು
ಸ್ರಜಸಿದ ಕೇಶವನೂ 3