ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೇ ಗುರುವರಾ ನಂಬಿದೇಪ ನಂಬಿದೆ ಗುರುಸಾರ್ವಭೌಮಾ ತುಂಟುಮನದೊಳು ಹರಿಭಕ್ತಿ ನಿಸ್ಸೀಮಆಹಾ ಅಂಬುಜೋದ್ಭವಪಿತನ ಕಂಭದಿ ತೋರಿದ ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ ಅ.ಪ. ದಾಸನೆಂದಡಿಗೆ ಬಿದ್ದೆನೋ ಈಗ ದೋಷ ನಾಶಮಾಡೋ ಎನಗೆ ಬೇಗ ಆಹಾ ವಾಸುಕಿಶಯನನ ಬ್ಯಾಸರದೆ ಸ್ತುತಿಸಿ ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ 1 ಪಾತಕರೊಳಗೆ ಅಗ್ರೇಸರನಾನು ಪೂತಮಾಡುವರೊಳಗೆ ನಿಸ್ಸೀಮ ನೀನು ಆಹಾ ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ 2 ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ ಭೂಪನ ಕುಹಯೋಗ ಕಳೆದ ಯತಿಕುಲತಿಲಕ 3 ಮಧ್ವಶಾಸ್ತ್ರಗಳ ಮಂದರರಿಯದಿರಲು ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ಆಹಾ ಆದರದಿಂದಲಿ ಪುರಂದರಕನಕರಿಗೆ ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ 4 ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ಆಹಾ ಕತ್ತಲೆ ಅದ್ವೈತವಾದಗಳಿಗೆಲ್ಲಾ ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ 5 ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ಆಹಾ ಅಪ್ಪ ಶ್ರೀರಾಮರ ಪೂಜಿಸಬೇಕೆಂದು ಒಪ್ಪಿಸನ್ಯಾಸವ ರಾಘವೇಂದ್ರನಾದ 6 ಮುದದಿ ದೇಶ ದೇಶವ ಚರಿಸಿದೇ ಸಮಯದಿ ಸುಜನರಕ್ಲೇಶಗಳಳಿದೇ ಆಹಾ ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ ಬುಧರಿಗೆ ತತ್ವ ಕನ್ನಡಿ ತೋರ್ದ ಗುಣಗಣನಿಧಿಯೇ7 ಪರಿಪರಿ ಮಹಿಮೆಯ ತೋರುವ ಗುರುವೇ ಸುರತರು ಅಂದದಿ ಹರಕೆ ಗಳೀವೆ ಪ್ರಭುವೇ ಆಹಾ ಮೂರೆರಡು ಒಂದುನೂರು ವರುಷ ಪರಿಯಂತ ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು8 ದಯದಿಂದ ನೋಡೆನ್ನ ದೀನೋದ್ಧಾರ ಭವ ಬಿಡಿಸು ಕರುಣಾಸಾರ ಆಹಾ ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣ ವಿಠಲನ ಹೃ- ದಯಮಂದಿರದಿ ತೋರೆನಗೆ ಗುರುಸಾರ್ವಭೌಮ 9
--------------
ಕೃಷ್ಣವಿಠಲದಾಸರು
ನಮೋ ನಮೋ ಗುರುರಾಜ ಪ ಭಾಸುರ ಪಂಪಾ ತುಂಗಾ ತೀರವಾಸ | ಪಾಲಿಸೊ ತವದಾಸ ಅ.ಪ. ರತಿಪತಿ ಜನಕನ ವರ ಶಯ್ಯಾಂಶದಲಿ | ವಾಯ್ವಾವೇಶದಲಿ ಜನಿಸುತ ಮೋದದಲಿ ವಿತತನು ವಿಷ್ಣುವು ವಿಶ್ವದೊಳೆನುತಲಿ | ಅತಿಶಯ ಭಕ್ತಿಯಲಿ ಪಿತಗೆ ತೋರ್ದ ಪ್ರಹ್ಲಾದನೆ ಹಿತದಲ್ಲಿ | ಅವತರಿಸಿದೆ ಇಲ್ಲಿ 1 ಧರೆಯೊಳಗೆ ಪ್ರಖ್ಯಾತ ಪರಮಾತ್ಮನ ಪದಶರಣ ವ್ಯಾಸಯೋಗಿ | ಯೆನಿಸುತಲಿ ವಿರಾಗಿ ತರತಮ ಪಂಚಕ ಪ್ರಭೇದವ ಸ್ಥಾಪಿಸಲು | ದುರುಳರ ಖಂಡ್ರಿಸಲು ಪರಿಪರಿ ಶಾಸ್ತ್ರವ ಶ್ರೀ ಪಾದರಾಯರಲಿ | ಓದಿದ್ಯೊ ಭಕ್ತಿಯಲಿ 2 ಪುರಂದರ ಕನಕರಿಗೆ ಆದರದಿಂದಲಿ ಬೋಧಿಸಿ ತತ್ವವನು | ಮಾಡಿ ಪುನೀತರನು ವೇದಶಾಸ್ತ್ರ ತರ್ಕಾದಿ ಗ್ರಂಥಗಳಲಿ | ಕೋವಿದರರಸುತಲಿ ನೀ ದಯದಿಂದಲಿ ಸೇರಿಸಿ ಪರಿಷತ್ತು | ಭಾವಿಸಿ ವಿದ್ವತ್ತು 3 ಅರ್ಥಿಕಲ್ಪಿತ ವರ ಕಲ್ಪವೃಕ್ಷವಾಗಿ | ನಿತ್ಯದಿ ಮಹಯೋಗಿ ಪ್ರಥ್ಯರ್ಥಿ ಮದಕರಿ ಪಂಚವಕ್ತ್ರನಾಗಿ | ಪ್ರತ್ಯಕ್ಷದಿ ತಾಗಿ ಹೊರ ಚೆಲ್ಲುತೆ ನೀನು ಸ್ತುತ್ಯ ಕೃಷ್ಣ ಭೂಮೀಂದ್ರನ ಕುಹುಯೋಗ | ಪರಿಹರಿಸಿದೆ ಬೇಗ 4 ವ್ಯಾಸಾಂಬುಧಿಯನು ಕಟ್ಟಿ ಖ್ಯಾತನಾಗಿ | ದಾಸರ ಚನ್ನಾಗಿ ಪೋಷಿಸುತಲಿ ಶ್ರೀ ಶೇಷಗಿರಿಗೆ ಬಂದು | ಶ್ರೀಶನಲ್ಲಿ ನಿಂದು ಪಡುತ ಹನ್ನೆರಡು ವರುಷ ದೇಶ ದೇಶದಲಿ ಆಶುಗಿಯನು ನಿಲಿಸಿ | ಶಿಷ್ಯರಿಗನುಗ್ರಹಿಸಿ 5 ಕಾಶಿ ಗಧಾಧರ ವಾಜಪೇಯಿ ಲಿಂಗ | ಮಿಶ್ರರು ನರಸಿಂಗ ವಾಸುದೇವ ಪುರಿ ಈಶ್ವರ ಪಂಡಿತರ | ವಾದದಿ ಬಿಗಿವರ ಜೈಸಿ ತಂದ ಜಯ ಪತ್ರಗಳನು ಮುದದಿ | ಶ್ರೀನಿಧಿಗರ್ಪಿಸಿದಿ ಶ್ರೀಸತ್ಯಾ ರುಕ್ಮಿಣಿ ವೇಣುಗೋಪಾಲರನು | ಸ್ತುತಿಸಿ ಪಡೆದೆ ನೀನು 6 ನ್ಯಾಯಾಮೃತ ಬಿಚ್ಚಿ ಚಂದ್ರಿಕೆಯನು ತಂದೆ ಆಯದಿ ಬುಧಮನ ತಾಂಡವಾಡುವಂತೆ | ತರ್ಕತಾಂಡವವಿತ್ತೆ ಕಾಯಜಪಿತ ಶ್ರೀಕಾಂತನ ಸೇವಿಸುತ | ಸುಖಿಸುವೆ ನೀ ಸತತ 7
--------------
ಲಕ್ಷ್ಮೀನಾರಯಣರಾಯರು
ಸಾಧಿಸು ಪರಲೋಕ ಮನವೆ ನೀ ಸಾಧಿಸು ಪರಲೋಕ ಪ ಮಾಧವನ ಮಹ ಪಾದದಾಸರಿಂದ ಶೋಧಿಸಿ ನಯದಿ ಸಂಪಾದಿಸಿ ಜ್ಞಾನವ ಅ.ಪ ಭೇದಬುದ್ಧಿ ಬಿಡೋ ಸುಜನರಿಂ ವಾದಿಸಿ ಕೆಡಬೇಡೋ ಆದರದಿಂದಲಿ ಸಾಧು ಸಂತರ ಸು ಬೋಧ ವಾಕ್ಯಗಳ ಮೋದದಿಂ ಕೇಳುತ 1 ರಾಗರಹಿತನಾಗೋ ಸಂಸಾರ ಭೋಗದಾಸೆ ನೀಗೋ ಯೋಗಿಗಳಿಗೆ ತಲೆವಾಗಿ ದಿಟದಿ ನೀ ಹೋಗಲಾಡಿಸಿ ಭವಬೇಗ ಸುಪಥಕ್ಹತ್ತಿ 2 ಕಾಮಿತಂಗಳ ಅಳಿಯೋ ತನುಧನ ಪ್ರೇಮಮೋಹ ಕಳೆಯೋ ಕಾಮಜನಕ ನಮ್ಮ ಭೂಮಿಜೆಪತಿ ಶ್ರೀ ರಾಮನಾಮಬೆಂಬ ವಿಮಾನವೇರಿ 3
--------------
ರಾಮದಾಸರು