ನಿತ್ಯ ನಿರುಪಮ
ನಿತ್ಯ ಎನ್ನ ಚಿತ್ತದಿ ನಿಲಿಸು ಪ
ಮರವೆ ಮಾಯದೆ ಕೆಟ್ಟ ಪರದೆಯೋಳ್ಸದಾ
ಬೆರೆದು ಶ್ವಾನಸೂಕರನಂತೆ
ಚರಿಸಿದೆ ಧರೆಭೋಗ ನೆಚ್ಚಿ
ನರಜನ್ಮ ವಿವರಿಸಿ ನೋಡದೆ
ಮರುಳತನದಿ ನರಕಿಯಾದೆ 1
ಮೃತ್ಯುಗೀಡಾದೆ ತವಭೃತ್ಯನೆನಿಸದೆ
ಸುತ್ತಿ ಸುತ್ತಿ ಇಹ್ಯಕೆ ಪರಕೆ
ಕತ್ತೆಯಂತೆ ತಿರುಗಿ ತಿರುಗಿ
ಮರ್ತು ನಿನ್ನ ಚರಣ ಮತ್ರ್ಯದಿ
ನಿತ್ಯಸುಖವ ಪಡೆಯದ್ಹೋದೆ 2
ಆದದ್ಹಾಗಿಹೋಯಿತಭವ
ವೇದಾಗಮ್ಯ ಪದುಮನಾಭ
ಪಾದನಂಬಿದೆ ಪಾಲಿಸಿನ್ನು
ಮೋದದೆನ್ನನೆತ್ತಿ ಶ್ರೀರಾಮ 3