ತನ್ನೊಳು ತಿಳಿಯೊ ಪ್ರಾಣಿ ಪುಣ್ಯಸಾಧನಿ ಧ್ರುವ
ತನ್ನಿಂದಲೆ ತಾ ನೋಡುವ ಖೂನ
ಚೆನ್ನಾಗ್ಯದನುಭವ ಜ್ಞಾನ
ಸನ್ಮತ ಸುಖದೋರುವ ಚಿದ್ಫನ
ಭಿನ್ನವಿಲ್ಲದೆ ನೋಡುವದುನ್ಮನ 1
ಮೂಲವಿಡಿದು ನಿಜ ನೋಡುವದರಿಂದ
ಮ್ಯಾಲೆ ದೋರುತಲದೆ ಬ್ರಹ್ಮಾನಂದ
ಕೀಲು ತಿಳಿದರೆ ಸದ್ಗುರು ಕೃಪೆಯಿಂದ
ಒಲಿದು ಬಾಹನು ತಾ ಮುಕುಂದ 2
ಸೆರಗವಿಡಿದು ನೋಡುಲು ಗುರುಮುಖ
ಮೂರು ಲೋಕಕ ಬಲು ಪರಮ ವಿವೇಕ
ತರಳ ಮಹಿಪತಿ ಆತ್ಮಾನುಭವ ಸುಖ
ದೋರುತಲದೆ ತಾ ಘನ ಕೌತುಕ 3