ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಪೂರ್ಣಪದಾ ತಿಳಿ ಜೀವಾ ಆತ್ಮಸ್ವರೂಪಾ ನೋಡು ನೀ ಈ ಜಗಕೆಲ್ಲ ಆಧಾರಾ ಪರಮಪದವದೇ ನೊಡು ನೀ ಪ ತೋರುವೀ ಜೀವರಾಧಾರ ತೋರದಾ ಪೂರ್ಣಾಜ್ಞಾನರೂಪ ಅದೇ ಕಲ್ಪನೆರಹಿತ ಅದ್ವೈತ ಪರಮಪದವದೇ ನೋಡು ನೀ 1 ಮನವಾಣಿಗೆ ಸಿಗದ ಆ ಸ್ಥಿತಿ ಪೂರ್ಣಾ ಪರಮಾತ್ಮನೈ ಅದೇ ನೀನಿಹೆ ಜೀವಾ ತಿಳಿಯಿದನಾ ಗುರು ಶಂಕರನಾ ಬೋಧನಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ತಿಳೀಮನವೇ ತಿಳೀಮನವೇ ತಿಳೀಮನವೇ ತಿಳಿ ಸಂಪೂರ್ಣ ಸುಖತಾಣಾ ತಿಳಿ ಸಂಪೂರ್ಣ ಸುಖತಾಣಾ ಸಾವಿನ ಬಾಧೆಯ ನೀಗುವಿ ನಿಜವಾಗೀ ಸಾವಿನ ಬಾಧಾ ಭಾವಾತೀತನ ನೀ ತಿಳೀಮನವೇ ಪ ನೋಡು ನೀನೇ ಆತ್ಮಸ್ವರೂಪಾ ಪೇಳಿದ ಗುರುಭೂಪಾ ಪೇಳ್ದೆ ಗುರುಭೂಪಾ ದೂಡು ದೇಹಾದಿಗಳ ತಾಪಾ ನೋಡುನಿಜರೂಪಾ ನೀ ನುಡಿಮನಗಳಿಗೂ ಕಡೆಯಾಗಿರುವ ಅಡಗಿದ ಗೂಢವಿದು ತಿಳೀಮನವೇ 1 ಕರ್ಮ ಪಾಶಕೆ ಕಠಾರಿಯಿದು ಜ್ಞಾನಾ ಮರ್ಮವಿದು ಘನಶಾಂತಿಯಾ ಸ್ಥಾನಾ ಧರ್ಮಾಧರ್ಮವ ಮೀರಿಹ ತಾಣ ದುರ್ಮತಿಯಾ ಬಿಡು ಜಾಣಾ ಘೋರತರದ ಸಂಸಾರದ ನಾಶಾ ಪೂರಣಗೊಂಬುದು ಆಶಾ ಪರಾಶಾಂತಿಗಿನ್ನೊಂದನು ಕಾಣೆ ಗುರುಶಂಕರನಾಣೇ ಗುರುಶಂಕರನಾಣೇ ತಿಳೀಮನವೇ 2
--------------
ಶಂಕರಭಟ್ಟ ಅಗ್ನಿಹೋತ್ರಿ