ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಪೂರ್ಣಪದಾ ತಿಳಿ ಜೀವಾ ಆತ್ಮಸ್ವರೂಪಾ ನೋಡು ನೀ ಈ ಜಗಕೆಲ್ಲ ಆಧಾರಾ ಪರಮಪದವದೇ ನೊಡು ನೀ ಪ ತೋರುವೀ ಜೀವರಾಧಾರ ತೋರದಾ ಪೂರ್ಣಾಜ್ಞಾನರೂಪ ಅದೇ ಕಲ್ಪನೆರಹಿತ ಅದ್ವೈತ ಪರಮಪದವದೇ ನೋಡು ನೀ 1 ಮನವಾಣಿಗೆ ಸಿಗದ ಆ ಸ್ಥಿತಿ ಪೂರ್ಣಾ ಪರಮಾತ್ಮನೈ ಅದೇ ನೀನಿಹೆ ಜೀವಾ ತಿಳಿಯಿದನಾ ಗುರು ಶಂಕರನಾ ಬೋಧನಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಈ ವಿಬುಧರ ಸಂಗವೆ ಮಹಾಪ್ರಮೋದ ದುರ್ಲಭ ಜ್ಞಾನಿಯ ನಿಜಾತ್ಮಬೋಧ ಭಾಗ್ಯವಿದೇ ಬಹುಜನ್ಮದ ಪುಣ್ಯ ಯೋಗ್ಯರಬೋಧಾ ದೊರಕುವುದಣ್ಣ ಬೋಗ್ಯದಿ ಲಂಪಟನಾದವಗಿನ ಅಗ್ಗದಿ ಸಿಗುವದೆ ಸಜ್ಜನರನ್ನಾ ಸ್ವರ್ಗದಿ ಸಿಗದಿಹ ಸಂತರ ಬೋಧ ದುರ್ಲಭ ಜ್ಞಾನಿಯ ನಿಜಾತ್ಮಬೋಧ 1 ಉಪದೇಶದಿ ಈ ಭವವನು ಕಡಿವಾ ಬಾಧೆಯ ಸುಡುವಾ ಮುಕುತಿಯ ಕೊಡುವಾ ಹೃದಯದೊಳಿರುವಾ ಆತ್ಮಸ್ವರೂಪ ಜ್ಞಾನದಿ ತಿಳುಹಿನಿ ಮೋದವ ಕೊಡುವಾ ಸ್ವಾನು ಭವಾನಂದಾನ್ವಿತರೂಪ ಸನ್ನುತ ಶಂಕರಗುರುಸ್ವರೂಪ2
--------------
ಶಂಕರಭಟ್ಟ ಅಗ್ನಿಹೋತ್ರಿ
ತಿಳೀ ತಿಳೀ ಅನುಭವದಾಳಾ ಪೇಳ್ವೆ ಸ್ವಾನಂದವ ನೀ ಕೇಳಾ ಪ ತನುಮನಕರಣಕೆ ಮೀರಿರುವಾ ಸನಾತನಾ ಸಂಪೂರ್ಣಘನಾ ನೀನೆ ಆನಂದಾತ್ಮನದೆಂದು 1 ದೇಹಾದಿಗಳೇ ನಾನೆಂಬ ಮಹಾದೃಢದ ಈ ಮತಿಯಂತೆ ನೀನೆ ಆತ್ಮಸ್ವರೂಪನು ಎಂದು 2 ಗಟ್ಟಿಗೊಳಿಸು ಈ ವಿಷಯಾ ಮನದೋಳ್ ಎಟ್ಟಿ ಮನಸಿನಾ ನಷ್ಟವ ಮಾಡಿ ಕೆಟ್ಟಾ ಬಾಳಿದು ಪುಸಿ ಎಂಬುದನು 3 ಜೀವನ್ಮುಕುತಿ ಆನಂದ ದೇವನೆ ತಾನೆನ್ನುವದೇ ಚೆಂದ ಭವಹಾರಿ ಶಂಕರನ ಜ್ಞಾನಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ತಿಳೀಮನವೇ ತಿಳೀಮನವೇ ತಿಳೀಮನವೇ ತಿಳಿ ಸಂಪೂರ್ಣ ಸುಖತಾಣಾ ತಿಳಿ ಸಂಪೂರ್ಣ ಸುಖತಾಣಾ ಸಾವಿನ ಬಾಧೆಯ ನೀಗುವಿ ನಿಜವಾಗೀ ಸಾವಿನ ಬಾಧಾ ಭಾವಾತೀತನ ನೀ ತಿಳೀಮನವೇ ಪ ನೋಡು ನೀನೇ ಆತ್ಮಸ್ವರೂಪಾ ಪೇಳಿದ ಗುರುಭೂಪಾ ಪೇಳ್ದೆ ಗುರುಭೂಪಾ ದೂಡು ದೇಹಾದಿಗಳ ತಾಪಾ ನೋಡುನಿಜರೂಪಾ ನೀ ನುಡಿಮನಗಳಿಗೂ ಕಡೆಯಾಗಿರುವ ಅಡಗಿದ ಗೂಢವಿದು ತಿಳೀಮನವೇ 1 ಕರ್ಮ ಪಾಶಕೆ ಕಠಾರಿಯಿದು ಜ್ಞಾನಾ ಮರ್ಮವಿದು ಘನಶಾಂತಿಯಾ ಸ್ಥಾನಾ ಧರ್ಮಾಧರ್ಮವ ಮೀರಿಹ ತಾಣ ದುರ್ಮತಿಯಾ ಬಿಡು ಜಾಣಾ ಘೋರತರದ ಸಂಸಾರದ ನಾಶಾ ಪೂರಣಗೊಂಬುದು ಆಶಾ ಪರಾಶಾಂತಿಗಿನ್ನೊಂದನು ಕಾಣೆ ಗುರುಶಂಕರನಾಣೇ ಗುರುಶಂಕರನಾಣೇ ತಿಳೀಮನವೇ 2
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದೇ ಶಂಕರ ಗುರುದೇವಾ ವಂದೇ ಶಂಕರ ಗುರುದೇವಾ ಪಾವನ ಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ ನಿರಂಜನ ಸತ್ಯ ಸ್ವರೂಪಾ ಪ್ರತ್ಯಗಾತ್ಮನೇ ಆನಂದರೂಪಾ ನೀಡೈ ಘನಜ್ಞಾನಾ ಬೋಧಾ ಬೇಡುವೆ ನಿನ್ನೊಳ್ ಗುರುವೇ ವಂದೇ ಆತ್ಮಸ್ವರೂಪವ ಬೋಧಿಸಿ ಎನ್ನ ಮುಕ್ತ ಮಾಡುನೀ ಶ್ರೀ ಗುರುದೇವಾ ನಾರಾಯಣಪದದಾ ಜ್ಞಾನಾ ಸಾರಿದ ಶಂಕರ ಗುರುವೇ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ