ಆತ್ಮಶೋಧನೆ
ಅನಂತಾನಂತ ಪಾಪ ಮಾಡುವೆ ನಾನು ಪ
ಅನಂತದಯಾನಿಧೆ ನೀನೊ ಹಯವದನ ಅ.ಪ
ದಾರು ಎನ್ನ ಪಾತಕಕ್ಕೆ
ಸರಿಗಾಣಿಸೆನೆಂದರೆ ಪಾಪ ಕ್ಷೋಣಿ ಪರಿಮಾಣುಗಳಿಗೆ 1
ಪೇಳು ಪಾಪವೆಂದಲೆನಲು ಪೇಳಲಿಕ್ಕೆ ಬಲುಲಜ್ಜೆ
ಗಳು ಅಂಡಲಿವುತಿದೆ ತಿಳಿದಾತ ನೀನಲ್ಲವೆ 2
ಎನಗೊಂದು ಉಪಾಯವ ಅನಾಯಾಸ ಮಾಡುವಂಥ
ನಿನ್ನ ನಾಮಸುಧೆಯನ್ನು ಎನಗೀಯೊ ಮುದದಿಂದ3
ಕಾಲ ಸ್ವಾಮಿ ನೀನು ದಾಸನು ಆಸು ಕಾಲದವನು
ವಾಸುದೇವವಿಠಲನೆ ನೀ ಸಡಲ ಬಿಡುವರೇನೊ4